ಬಸವ ಪುರಾಣದಿಂದ ಭಕ್ತಿ, ಜ್ಞಾನ ವೃದ್ಧಿ: ಡಾ.ಮಲ್ಲಿಕಾರ್ಜುನ ಸ್ವಾಮೀಜಿ

| Published : Feb 17 2025, 12:31 AM IST

ಬಸವ ಪುರಾಣದಿಂದ ಭಕ್ತಿ, ಜ್ಞಾನ ವೃದ್ಧಿ: ಡಾ.ಮಲ್ಲಿಕಾರ್ಜುನ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಬಸವ ಪುರಾಣ ಕೇಳುವುದರಿಂದ ಭಕ್ತಿ ಹೆಚ್ಚಾಗುವುದರ ಜೊತೆಗೆ ಜ್ಞಾನವೂ ಕೂಡ ವೃದ್ಧಿಯಾಗುತ್ತದೆ ಎಂದು ಧಾರವಾಡ ಮುರುಘಾಮಠ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಕನ್ನಡ ಪ್ರಭವಾರ್ತೆ ಕಮತಗಿ

ಬಸವ ಪುರಾಣ ಕೇಳುವುದರಿಂದ ಭಕ್ತಿ ಹೆಚ್ಚಾಗುವುದರ ಜೊತೆಗೆ ಜ್ಞಾನವೂ ಕೂಡ ವೃದ್ಧಿಯಾಗುತ್ತದೆ ಎಂದು ಧಾರವಾಡ ಮುರುಘಾಮಠ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಶ್ರೀಮಠದ ನೂತನ ರಥ ಬೀದಿಯಲ್ಲಿನ ಲಿಂ.ಎಸ್.ಎ ಕಲ್ಯಾಣಮಠ ಪ್ರಧಾನ ವೇದಿಕೆಯಲ್ಲಿ ಹೊಳೆ ಹುಚ್ಚೇಶ್ವರ ಮಠದ ಹಾಗೂ ಪಟ್ಟಾಧಿಕಾರ ರಜತ ಮಹೋತ್ಸವ ಸಮಿತಿ ವತಿಯಿಂದ ಶನಿವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ವಜ್ರಮಹೋತ್ಸವ ಹಾಗೂ ಬಸವ ಪುರಾಣ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ರಕ್ತ ಸಂಬಂಧಕ್ಕಿಂತ ಗಟ್ಟಿಯಾದದ್ದು ಎಂದರೆ ಅದು ಭಕ್ತಿ ಸಂಬಂಧವಾಗಿದ್ದು, ಧಾರ್ಮಿಕವಾಗಿ ಹಿಂದುಳಿಯುತ್ತಿರುವ, ಮನಸ್ಸಿನಲ್ಲಿ ಉಂಟಾಗುವ ಗೊಂದಲಗಳಿಗೆ ಬೆಳಕು ನೀಡುವುದು ಬಸವ ಪುರಾಣದ ಉದ್ದೇಶವಾಗಿದೆ. ಹುಚ್ಚೇಶ್ವರ ಮಠ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿಕೊಂಡು ಬರುವ ಮೂಲಕ ಈ ಭಾಗದ ಧಾರ್ಮಿಕ ಕ್ಷೇತ್ರವಾಗಿದೆ ಎಂದು ಹೇಳಿದರು.

ಅಮಿನಗಡ ಶಂಕರ ರಾಜೇಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಹಾವೇರಿ ಸದಾಶಿವ ಸ್ವಾಮೀಜಿ, ಕಮತಗಿ ಹೊಳೆ ಹುಚ್ಚೇಶ್ವರ ಸ್ವಾಮೀಜಿ, ಗಿರಿಸಾಗರ ರುದ್ರುಮುನಿ ಶಿವಾಚಾರ್ಯ ಸ್ವಾಮೀಜಿ, ಕೊರ್ತಿ ಕೋಲಾರ ಕಲ್ಲಿನಾಥ ದೇವರು, ಗುಳೇದಗುಡ್ಡ ಬಸವರಾಜ ಪಟ್ಟದಾರ್ಯ ಸ್ವಾಮೀಜಿ, ಕಮತಗಿ ಶಿವಕುಮಾರ ಸ್ವಾಮೀಜಿ, ಗ್ಯಾನಪ್ಪ ಅಜ್ಜನವರು, ಮುಖಂಡರಾದ ಮಹಾಂತೇಶ ಮಮದಾಪೂರ, ಶಾಂತಗೌಡ ಪಾಟೀಲ, ಕುಮಾರಗೌಡ ಜನಾಲಿ, ಎಚ್. ಎಲ್. ಪಾಟೀಲ, ಬಿಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಹಾಗೂ ಪಟ್ಟಾಧಿಕಾರ ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ, ಪಪಂ ಅಧ್ಯಕ್ಷ ರಮೇಶ ಜಮಖಂಡಿ, ಎಸ್.ಎಸ್. ಮಂಕಣಿ, ಹುಚ್ಚಪ್ಪ ಸಿಂಹಾಸನ, ಮಲ್ಲಪ್ಪ ಮೇದಾರ, ಗುರಲಿಂಗಪ್ಪ ಪಾಟೀಲ ಹಾಗೂ ರಜತ ಮಹೋತ್ಸವ ಸಮಿತಿಪದಾಧಿಕಾರಿಗಳು ಇದ್ದರು.