ರಾಜ್ಯಕ್ಕೆ ಭಾನುಪ್ರಕಾಶ ಶರ್ಮ, ಜಿಲ್ಲೆಗೆ ಶಂಕರ ಅಭ್ಯರ್ಥಿಗಳು

| Published : Mar 14 2025, 12:35 AM IST

ರಾಜ್ಯಕ್ಕೆ ಭಾನುಪ್ರಕಾಶ ಶರ್ಮ, ಜಿಲ್ಲೆಗೆ ಶಂಕರ ಅಭ್ಯರ್ಥಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಅಶೋಕ ಹಾರನಹಳ್ಳಿ ಮಹಾಸಭಾದ ಅಧ್ಯಕ್ಷರಾದ ನಂತರ ನಾಡಿನಲ್ಲಿಯೇ ಒಂದು ಗಟ್ಟಿಮುಟ್ಟಾದ ಸಂಘಟನೆಯ ಧ್ವನಿ ತೋರಿದ್ದಲ್ಲದೇ ಬಡ ಬ್ರಾಹ್ಮಣರಿಗೆ ವಿದ್ಯಾರ್ಥಿ ವೇತನ, ಆರ್ಥಿಕ ಸಬಲತೆ, ಉದ್ಯೋಗ ಸೃಷ್ಟಿ ಸೇರಿದಂತೆ ಹಲವಾರು ರೀತಿಯಿಂದ ಪ್ರಗತಿಯ ದಿಕ್ಕನ್ನು ತೋರಿಸಿದ್ದಾರೆ

ಹುಬ್ಬಳ್ಳಿ: ಬರುವ ಏ.13 ರಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ಎಕೆಬಿಎಂಎಸ್‌) ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಗುರುವಾರ ನಂಜನಗೂಡು ರಾಯರ ಮಠದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಧಾರವಾಡ ಎಕೆಬಿಎಂಎಸ್ ಸಂಚಾಲಕ ಆಕಾಂಕ್ಷಿ ಅಭ್ಯರ್ಥಿಯಾಗಿ ಶಂಕರ ಪಾಟೀಲರನ್ನು ಸರ್ವಾನುಮತದ ಅಭ್ಯರ್ಥಿ ಎಂದು ಘೋಷಿಸಲಾಯಿತು.

ಸಭೆಯ ನೇತೃತ್ವ ವಹಿಸಿದ್ದ ಎಕೆಬಿಎಂಎಸ್ ಉಪಾಧ್ಯಕ್ಷ ಹನುಮಂತ ಡಂಬಳ ಹಾಗೂ ಎ.ಸಿ. ಗೋಪಾಲ ಮಾತನಾಡಿ, ಅಶೋಕ ಹಾರನಹಳ್ಳಿ ಅವರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾವನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲದೆ ಬ್ರಾಹ್ಮಣ ಸಮಾಜದಲ್ಲಿ ಜಾಗೃತಿಯನ್ನುಂಟು ಮಾಡುವಲ್ಲಿ ವಹಿಸಿದ ಪಾತ್ರ ಅನನ್ಯವಾಗಿದೆ. ಅಶೋಕ ಹಾರನಹಳ್ಳಿ ಮಹಾಸಭಾದ ಅಧ್ಯಕ್ಷರಾದ ನಂತರ ನಾಡಿನಲ್ಲಿಯೇ ಒಂದು ಗಟ್ಟಿಮುಟ್ಟಾದ ಸಂಘಟನೆಯ ಧ್ವನಿ ತೋರಿದ್ದಲ್ಲದೇ ಬಡ ಬ್ರಾಹ್ಮಣರಿಗೆ ವಿದ್ಯಾರ್ಥಿ ವೇತನ, ಆರ್ಥಿಕ ಸಬಲತೆ, ಉದ್ಯೋಗ ಸೃಷ್ಟಿ ಸೇರಿದಂತೆ ಹಲವಾರು ರೀತಿಯಿಂದ ಪ್ರಗತಿಯ ದಿಕ್ಕನ್ನು ತೋರಿಸಿದ್ದಾರೆ. ಈಗ ಅವರ ಪ್ರೇಷಿತ ಅಭ್ಯರ್ಥಿಯಾಗಿ ಎಕೆಬಿಎಂಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿರುವ ವೇದ ವಿದ್ವಾನ್ ಭಾನುಪ್ರಕಾಶ ಶರ್ಮ ಅಭ್ಯರ್ಥಿಯಾಗಿದ್ದು ಅವರನ್ನು ಮತ್ತು ಧಾರವಾಡ ಜಿಲ್ಲಾ ಸಂಘಕ್ಕೆ ಶಂಕರ ಪಾಟೀಲರಿಗೆ ಸಮುದಾಯದ ಎಲ್ಲರೂ ಬೆಂಬಲ ನೀಡಬೇಕು ಎಂದರು.

ವಸಂತ ನಾಡಜೋಶಿ, ವೀಣಾ ಹೆಗಡೆ ಮಾತನಾಡಿದರು. ಧಾರವಾಡ ಜಿಲ್ಲಾ ಎಕೆಬಿಎಂಎಸ್‌ನ ಅಧ್ಯಕ್ಷ ಬಿಂದುಮಾಧವ ಪುರೋಹಿತರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಡಿ.ಪಿ.ಪಾಟೀಲ, ಸುನೀಲ ಗುಮಾಸ್ತೆ, ಕೃಷ್ಣಾ ಕುಲಕರ್ಣಿ, ಉಮಾ ಪಾಲ್ದೋಣಿ, ಸರಸ್ವತಿ ಗುಡಿ, ಮನೋಹರ ಪರ್ವತಿ, ಕೇಶವ ಬಾದನಟ್ಟಿ, ಸುಧೀರ ಇಂಗಳಗಿ, ಎನ್.ಎಚ್.ನಿಡಗುಂದಿ, ಸಂಯುತಾ ಪ್ರತಿಷ್ಠಾನದ ಅಧ್ಯಕ್ಷ ಪ್ರಹ್ಲಾದ ಪರ್ವತಿ ಸೇರಿದಂತೆ ಹಲವರಿದ್ದರು.