ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಭಾರತ್ ಆಸ್ಪತ್ರೆ ಮತ್ತು ಆಂಕಾಲಜಿ ಸಂಸ್ಥೆಯು (ಬಿಎಚ್‌ಐಒ) ನಗರದ ಎಸ್‌ಎಸ್‌ಎಮ್ ಸ್ಪೆಷಾಲಿಟಿ ಕ್ಲಿನಿಕ್ಸ್ ಮತ್ತು ಡಯಾಗ್ನೋಸ್ಟಿಕ್ಸ್ ಸಂಸ್ಥೆಯ ಸಹಯೋಗದಲ್ಲಿ ಹೊರರೋಗಿಗಳ ಆಸ್ಪತ್ರೆಯನ್ನು (ಒಪಿಡಿ) ಯನ್ನು ಪ್ರಾರಂಭಿಸಲಾಗಿದೆ ಎಂದು ಮೈಸೂರಿನ ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಕನ್ಸಲೆಂಟ್ ರೇಡಿಯೇಶನ್ ಅಂಕೊಲಾಜಿಸ್ಟ್ ಡಾ. ವಿನಯಕುಮಾರ್ ಮುತ್ತಗಿ ತಿಳಿಸಿದರು.ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಆರ್.ಪುರಂನಲ್ಲಿರುವ ಎಸ್‌ಎಸ್‌ಎಮ್ ಸ್ಪೆಷಾಲಿಟಿ ಕ್ಲಿನಿಕ್ಸ್ ಮತ್ತು ಡಯಾಗ್ನೋಸ್ಟಿಕ್ಸ್ ಸಂಸ್ಥೆಯಲ್ಲಿ ತಿಂಗಳ ಪ್ರತಿ ಮೊದಲ ಮತ್ತು ಮೂರನೇ ಬುಧವಾರ ಬೆಳಿಗ್ಗೆ ೧೦.೩೦ರಿಂದ ಮಧ್ಯಾಹ್ನ ೨.೩೦ರವರೆಗೆ ಈ ಬಿಎಚ್‌ಐಇ ಒಪಿಡಿ ಸೌಲಭ್ಯವನ್ನು ಸಾರ್ವಜನಿಕರಿಗೆ ಕಲ್ಪಿಸಲಾಗಿದೆ.
ಬಿಎಚ್‌ಐಒನ ಈ ಉಪಕ್ರಮವು ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಆರಂಭಿಕ ಪತ್ತೆ ಮತ್ತು ಸಮಯೋಚಿತ ಹಸ್ತಕ್ಷೇಪದ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ. ಕ್ಯಾನ್ಸರ್ ಆರೈಕೆಯಲ್ಲಿನ ಅಂತರವನ್ನು ಕಡಿಮೆ ಮಾಡಲು, ವಿಶೇಷವಾಗಿ ಕ್ಯಾನ್ಸರ್ ಸೂಚನೆಯುಳ್ಳವರು ಆರಂಭಿಕ ವೈದ್ಯಕೀಯ ಆರೈಕೆಯನ್ನು ಪಡೆಯುವಲ್ಲಿ ಎದುರಿಸುವ ಅಡೆತಡೆಗಳನ್ನು ನಿವಾರಿಸುವ ಉದ್ದೇಶ ಹೊಂದಿದೆ. ಹಾಗೆಯೇ ಎಸ್‌ಎಸ್‌ಎಮ್ ಸ್ಪೆಷಾಲಿಟಿ ಕ್ಲಿನಿಕ್ ಅನ್ನು ಪುರುಷರು ಮತ್ತು ಮಹಿಳೆಯರಿಗಾಗಿ ಸಮಾಲೋಚನೆಗಳು ಮತ್ತು ಕ್ಯಾನ್ಸರ್ ಸ್ಕ್ರೀನಿಂಗ್‌ಗಳನ್ನು ನೀಡಲು ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದರು.ಬಿಎಚ್‌ಐಒ ವೈದ್ಯಕೀಯ ಆಂಕೊಲಾಜಿಸ್ಟ್ ಸಲಹೆಗಾರ ಡಾ.ಅಭಿಲಾಷ್ ಜಿ.ಎಚ್ ಮಾತನಾಡಿ, ವಯಸ್ಸು, ಲಿಂಗ ಅಥವಾ ಸಾಮಾ
ಕ-ಆರ್ಥಿಕ ಹಿನ್ನೆಲೆಯನ್ನು ಗಮನಿಸದೆ ವ್ಯಕ್ತಿಗಳ ಮೇಲೆ ಕ್ಯಾನ್ಸರ್ ಗಾಢ ಪರಿಣಾಮ ಬೀರುತ್ತದೆ. ಹಾಗಾಗಿ ಇದರ ಆರಂಭಿಕ ಪತ್ತೆ ಕಾರ್ಯ ಯಶಸ್ವಿ ಚಿಕಿತ್ಸೆಗೆ ನಿರ್ಣಾಯಕವಾಗುತ್ತದೆ. ಈ ಒಪಿಡಿ ಮೂಲಕ, ನಮ್ಮ ಸಮುದಾಯದಲ್ಲಿ ಹೆಚ್ಚಿನ ಜನರು ಅವರಿಗೆ ಅಗತ್ಯವಿರುವ ಆರೈಕೆಯನ್ನು ಪಡೆಯಬಹುದುದು ಎಂದು ಖಚಿತಪಡಿಸಿಕೊಳ್ಳಲು ನಾವು ಸಮಯೋಚಿತ ಸ್ಕ್ರೀನಿಂಗ್‌ಗಳು ಮತ್ತು ಸಮಾಲೋಚನೆಗಳನ್ನು ಒದಗಿಸುವ ಗುರಿಯನ್ನು ಹೊಂದಿದ್ದೇವೆ. ಡಾ.ಅಭಿಲಾಶ್ ಅವರು ಕ್ಲಿನಿಕ್ ಸಮಯದಲ್ಲಿ ಸಮಾಲೋಚನೆಗಳಿಗೆ ಲಭ್ಯವಿರುತ್ತಾರೆ, ಈ ಉಪಕ್ರಮವು ಬಿಎಚ್‌ಐಒ ಮತ್ತು ಎಸ್‌ಎಸ್‌ಎಂ ಸ್ಪೆಷಾಲಿಟಿ ಕ್ಲಿನಿಕ್‌ಗಳು ಒಟ್ಟುಗೂಡಿ ಎಲ್ಲಾ ವ್ಯಕ್ತಿಗಳಿಗೆ ಮತ್ತು ವಿಶೇಷವಾಗಿ ಹಿಂದುಳಿದ ಸಮುದಾಯಗಳಿಗೆ ಕ್ಯಾನ್ಸರ್ ಆರೈಕೆಗೆ ಸಮಾನ ಪ್ರವೇಶವನ್ನು ಖಾತ್ರಿಪಡಿಸುವ ಬದ್ಧತೆ ಹೊಂದಿವೆ ಎಂದರು.ಈ ಸಂದರ್ಭದಲ್ಲಿ ಮಾತನಾಡಿದ ಬಿಎಚ್‌ಐಒ ಕನ್ಸಲ್ಟೆಂಟ್ ರೇಡಿಯೇಶನ್ ಆಂಕೊಲಾಜಿಸ್ಟ್ ಡಾ.ವಿನಯ್ ಕುಮಾರ್ ಮುತ್ತಗಿ ಅವರು, “ಬಿಎಚ್‌ಐಒ ೩೫ ವರ್ಷಗಳಿಂದ ಮೈಸೂರು ಮತ್ತು ಸುತ್ತಮುತ್ತಲಿನ ಜನರಿಗೆ ಅಗಾಧ ಪರಿಣತಿ ಮತ್ತು ನುರಿತ ವೈದ್ಯರೊಂದಿಗೆ ಸೇವೆ ಸಲ್ಲಿಸುತ್ತಿರುವ ಪ್ರಮುಖ ಕ್ಯಾನ್ಸರ್ ಕೇರ್ ಸೆಂಟರ್ ಆಗಿದೆ. ಪ್ರತಿ ವರ್ಷ ಆಸ್ಪತ್ರೆಯ ಅಧ್ಯಕ್ಷ ಡಾ ಬಿ ಎಸ್ ಅಜಯ್‌ಕುಮಾರ್ ಅವರ ನಾಯಕತ್ವದಲ್ಲಿ ಆಸ್ಪತ್ರೆಯು ಹೊಸ ಆಯಾಮಗಳನ್ನು ಕಂಡಿದೆ, ಮೈಸೂರಿನಂತಹ ಎರಡನೇ ಹಂತದ ನಗರಕ್ಕೆ ರೋಬೋಟಿಕ್ ಸರ್ಜರಿ, ಅಡ್ವಾನ್ಸ್ಡ್ ರೇಡಿಯೊಥೆರಪಿ, ಪೀಡಿಯಾಟ್ರಿಕ್ ಆಂಕೊಲಾಜಿ, ಹೆಮಟಾಲಜಿ ಮತ್ತು ಮೂಳೆ ಮಜ್ಜೆ ಬದಲಾವಣೆ, ಕಸಿಯಂತಹ ಎಲ್ಲಾ ಕ್ಯಾನ್ಸರ್ ಸಮಸ್ಯೆಗಳಿಗೆ ಜಾಗತಿಕ ಗುಣಮಟ್ಟದ ಕ್ಯಾನ್ಸರ್ ಆರೈಕೆಯನ್ನು ಕೈಗೆಟುಕುವ ದರದಲ್ಲಿ ತರುತ್ತಿದೆ.
ಹೆಚ್ಚುತ್ತಿರುವ ಕ್ಯಾನ್ಸರ್ ಸಮಸ್ಯೆಯನ್ನು ನಿಗ್ರಹಿಸಲು ನಿಮ್ಮ ನಗರದಲ್ಲೂ ತಮ್ಮ ವೈದ್ಯರು ಲಭ್ಯವಾಗುವಂತೆ ಮಾಡುವ ಮೂಲಕ ಈ ಸೇವೆಗಳನ್ನು ವಿಸ್ತರಿಸುವ ಜವಾಬ್ದಾರಿಯನ್ನು ಬಿಎಚ್‌ಐಒ ಹೊತ್ತಿದೆ ಎಂದರು.ಈ ಸಂದರ್ಭದಲ್ಲಿ ಭಾರತ್ ಆಸ್ಪತ್ರೆ ಮತ್ತು ಆಂಕೊಲಾಜಿ ಸಂಸ್ಥೆಯ ಸಿಒಒ ಗೌತಮ್ ಧಮೇರ್ಲಾ, ಹಾಸನ ಕೆ.ಆರ್.ಪುರಂ ಎಸ್‌ಎಸ್‌ಎಂ ಆಸ್ಪತ್ರೆ ಸಿಇಒ ಡಾ.ವಿನಾಯಕ್ ಎನ್, ಬಿಎಚ್‌ಐಒನ ಮಾರ್ಕೆಟಿಂಗ್ ಮುಖ್ಯಸ್ಥ ಆನಂದ್ ಉಪಸ್ಥಿತರಿದ್ದರು.
ತಜ್ಞ ವೈದ್ಯರೊಂದಿಗೆ ಸಮಾಲೋಚನೆಗಾಗಿ ಅಪಾಯಿಂಟ್‌ಮೆಂಟ್ ನಿಗದಿಪಡಿಸಲು ಆಸಕ್ತರು ರಮೇಶ್ ಜಾವಗಲ್ (ಮೊ. ೯೪೮೧೦ ೭೮೭೬೬) ಅವರನ್ನು ಸಂಪರ್ಕಿಸಬಹುದು..