ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಉತ್ತರಾಖಂಡ ರಾಜ್ಯದಲ್ಲಿ ನಡೆಯಲಿರುವ 38ನೇ ರಾಷ್ಟ್ರೀಯ ಟ್ರಯಥ್ಲಾನ್ ಕ್ರೀಡಾಕೂಟದಲ್ಲಿ ಮಂಡ್ಯದ ಯುವ ಕ್ರೀಡಾಪಟು ಭರತ್ ದ್ಯಾವಪ್ಪ (20) ಆಯ್ಕೆಯಾಗಿದ್ದಾರೆ.ಉತ್ತರಾಖಂಡದ ಹಲ್ದ್ವಾನಿಯ ಐಜಿಐ ಕ್ರೀಡಾಂಗಣದಲ್ಲಿ ಜನವರಿ 26ರಿಂದ 30 ರವರೆಗೆ ನಡೆಯಲಿರುವ 38 ನೇ ರಾಷ್ಟ್ರೀಯ ಟ್ರಯಥ್ಲಾನ್ ಸ್ವಿಮ್ಮಿಂಗ್, ರನ್ನಿಂಗ್ ಹಾಗೂ ಸೈಕ್ಲಿಂಗ್ ಕ್ರೀಡೆಗಳನ್ನು ಒಳಗೊಂಡಿರುವ ಕ್ರೀಡಾಕೂಟದಲ್ಲಿ ಭರತ್ ದ್ಯಾವಪ್ಪ ಅರ್ಹತೆ ಪಡೆದಿದ್ದಾರೆ. ಇದರಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳು ನಿರ್ದಿಷ್ಟ ಸಮಯದಲ್ಲಿ ಮೂರು ಕ್ರೀಡೆಗಳನ್ನು ಪಾಲ್ಗೊಂಡು ಗುರಿ ಮುಟ್ಟಬೇಕು. ಭರತ್ ದ್ಯಾವಪ್ಪ ಪುರುಷರ ವಿಭಾಗದ ಮಿಶ್ರ ರಿಲೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ.
ಟ್ರಯಥ್ಲಾನ್ ಕ್ರೀಡೆಯಲ್ಲಿ ರಾಜ್ಯದಲ್ಲಿ 2ನೇ ರ್‍ಯಾಂಕಿಂಗ್ ಹಾಗೂ ರಾಷ್ಟ್ರ ಮಟ್ಟದಲ್ಲಿ 14ನೇ ರ್‍ಯಾಂಕಿಂಕ್ ನಲ್ಲಿರುವ ಭರತ್ ದ್ಯಾವಪ್ಪ, ಈಗಾಗಲೇ ರಾಜ್ಯ ಹಾಗೂ ರಾಷ್ಟ್ರಪಟ್ಟದಲ್ಲಿ ಹಲವು ಸ್ಪರ್ಧೆಗಳನ್ನು ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ. ಭರತ್ ದ್ಯಾವಪ್ಪ ಜಿಲ್ಲಾ ಕಾಂಗ್ರೆಸ್ ವಕ್ತಾರ ಸಿ.ಎಂ.ದ್ಯಾವಪ್ಪ ಅವರ ಪುತ್ರರಾಗಿದ್ದಾರೆ.ಪಿಎಲ್‌ಡಿ ಬ್ಯಾಂಕ್ ಗೆ ಫೆ.10ರಂದು ಚುನಾವಣೆ: ತಾಪಂ ಇಒ ಶ್ರೀನಿವಾಸ್
ಮಳವಳ್ಳಿ:ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಎಲ್ ಡಿ) ಬ್ಯಾಂಕ್‌ನ ಆಡಳಿತ ಮಂಡಳಿಗೆ ಫೆ.10ರಂದು ಚುನಾವಣೆ ನಿಗದಿಯಾಗಿದೆ. ಜ.27ರಿಂದ ಫೆ.2ರವರೆಗೆ ನಾಮಪತ್ರ ಸಲ್ಲಿಸಬಹುದು ಎಂದು ಚುನಾವಣಾಧಿಕಾರಿಯೂ ಆದ ತಾಪಂ ಇಒ ಎಚ್.ಜಿ.ಶ್ರೀನಿವಾಸ್ ತಿಳಿಸಿದರು.
ಪಿಎಲ್‌ಡಿ ಬ್ಯಾಂಕ್‌ನ 14 ನಿರ್ದೇಶಕ ಸ್ಥಾನಗಳಲ್ಲಿ 13 ಸಾಲಗಾರರ ಕ್ಷೇತ್ರ, 1 ಸಾಲಗಾರರಲ್ಲದ ಕ್ಷೇತ್ರವಾಗಿದೆ. 7 ಸಾಮಾನ್ಯ ಕ್ಷೇತ್ರ, ಪರಿಶಿಷ್ಟ ಕ್ಷೇತ್ರ- 1, ಪರಿಶಿಷ್ಟ ಪಂಗಡ-1, ಮಹಿಳಾ ಕ್ಷೇತ್ರ- 2, ಹಿಂದುಳಿದ ವರ್ಗ ಎ-1, ಹಿಂದುಳಿದ ವರ್ಗ ಬಿ-1, ಮೀಸಲು ನಿಗದಿಯಾಗಿದೆ. ಫೆ.10ರ ಸೋಮವಾರ ಪಟ್ಟಣದ ಸೆಸ್ಕ್ ಕಚೇರಿ ಮುಂಭಾಗದ ಸರ್ಕಾರಿ ಬಾಲಕರ ಮಾಧ್ಯಮಿಕ ಶಾಲೆಯಲ್ಲಿ ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ.ಆಕಾಂಕ್ಷಿತ ಅಭ್ಯರ್ಥಿಗಳು ರಜೆದಿನಗಳನ್ನು ಹೊರತುಪಡಿಸಿ ಜ.27ರಿಂದ ಫೆ.2ರವರೆಗೆ ಬೆಳಗ್ಗೆ 11ರಿಂದ ಮಧ್ಯಾಹ್ನ 3ಗಂಟೆವರೆಗೆ ಬ್ಯಾಂಕ್‌ನಲ್ಲಿ ನಾಮಪತ್ರ ಸಲ್ಲಿಸಬಹುದು. ಫೆ.3ರಂದು ನಾಮಪತ್ರ ಪರಿಶೀಲಿಸಿ ಅಂದೇ ಕ್ರಮಬದ್ಧ ಅಭ್ಯರ್ಥಿಗಳನ್ನು ಪ್ರಕಟಣೆ ಮಾಡಲಾಗುವುದು ಎಂದರು.
ಫೆ.4ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನ. ಅಂದೇ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ ಮಾಡಲಾಗುವುದು. ಫೆ.8ರಂದು ಚುನಾವಣೆ ನಡೆಯಲಿದೆ. ಫೆ.10ರಂದು ಮತದಾನ ಮುಕ್ತಾಯವಾದ ಬಳಿಕ ಮತ ಎಣಿಕೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ತಿಳಿಸಿದರು.