ಭಾರತ ವಿಕಾಸ ಪರಿಷತ್‌ ಗಾಯನ ಸ್ಪರ್ಧೆ: ಅನಂತೇಶ್ವರ ಶಾಲೆ ಪ್ರಾಂತ ಮಟ್ಟಕ್ಕೆ

| Published : Oct 14 2025, 01:02 AM IST

ಭಾರತ ವಿಕಾಸ ಪರಿಷತ್‌ ಗಾಯನ ಸ್ಪರ್ಧೆ: ಅನಂತೇಶ್ವರ ಶಾಲೆ ಪ್ರಾಂತ ಮಟ್ಟಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ವಿಕಾಸ್ ಪರಿಷತ್ ಭಾರ್ಗವ ಶಾಖೆ ಉಡುಪಿ ವತಿಯಿಂದ ಉಡುಪಿ ಜಿಲ್ಲಾ ಮಟ್ಟದ ರಾಷ್ಟ್ರೀಯ ಸಮೂಹ ಗಾಯನ ಸ್ಪರ್ಧೆ 2025 ನಗರದ ಟಿ.ಎ.ಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆಯಿತು.

ಉಡುಪಿ: ಭಾರತ ವಿಕಾಸ್ ಪರಿಷತ್ ಇದರ ಭಾರ್ಗವ ಶಾಖೆ ಉಡುಪಿ ವತಿಯಿಂದ ಉಡುಪಿ ಜಿಲ್ಲಾ ಮಟ್ಟದ ರಾಷ್ಟ್ರೀಯ ಸಮೂಹ ಗಾಯನ ಸ್ಪರ್ಧೆ 2025 ನಗರದ ಟಿ.ಎ.ಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಭಾ.ವಿ.ಪ. ಸ್ಥಾಪಕ ಕಾರ್ಯದರ್ಶಿ ಪ್ರೊ. ಕೆ. ಕಮಲಾಕ್ಷ ಹಾಗೂ ಪ್ರಾಂತ ಅಧ್ಯಕ್ಷ ಗುರುನಾಥ ರಾವ್ ಜಂಟಿಯಾಗಿ ಉದ್ಘಾಟಿಸಿ ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು. ಸ್ಪರ್ಧೆಯಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಿದ್ದವು. ಅನಂತೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಹಿಂದಿ ಗಾಯನದಲ್ಲಿ ಪ್ರಥಮ ಸ್ಥಾನ, ಸಂಸ್ಕೃತ ಗಾಯನದಲ್ಲಿ ದ್ವಿತೀಯ ಮತ್ತು ಕನ್ನಡ ಗೀತೆ ಗಾಯನದಲ್ಲಿ ಪ್ರಥಮ ಸ್ಥಾನ ಪಡೆಯಿತು.ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಶಾಲೆಯು ಹಿಂದಿ ದ್ವಿತೀಯ, ಸಂಸ್ಕೃತ ಪ್ರಥಮ ಮತ್ತು ಕನ್ನಡ ಗೀತೆ ಗಾಯನದಲ್ಲಿ ದ್ವಿತೀಯ ಸ್ಥಾನ ಪಡೆಯಿತು. ಟಿ.ಎ. ಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಹಿಂದಿ ಗಾಯಮದಲ್ಲಿ ತೃತೀಯ, ಸಂಸ್ಕೃತ ಗಾಯನದಲ್ಲಿ ತೃತಿಯ ಮತ್ತು ಕನ್ನಡ ಗೀತ ಗಾಯನದಲ್ಲಿ ತೃತೀಯ ಸ್ಥಾನ ಪಡೆಯಿತು. ಹಿಂದಿ ಮತ್ತು ಸಂಸ್ಕೃತದಲ್ಲಿ ಒಟ್ಟು ಹೆಚ್ಚಿನ ಅಂಕಗಳಿಸಿದ ಅನಂತೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪ್ರಥಮ ಸ್ಥಾನ ಪಡೆದು ಪ್ರಾಂತ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆಯಿತು.

ಭಾ.ವಿ.ಪ. ಉಡುಪಿ ಶಾಖೆ ಸಂಚಾಲಕ ಪ.ವಸಂತ ಭಟ್, ದಕ್ಷಿಣ ಪ್ರಾಂತ ಪದಾಧಿಕಾರಿ ಹರಿರಾಮ ಶೆಣೈ ಉಪಸ್ಥಿತರಿದ್ದರು. ರಾಘವೇಂದ್ರ ಕಾಮತ್, ಸುವರ್ಣ ರಾವ್ ಮತ್ತು ಅನಂತ ಶಟ್ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ಮಂಜುಳಾ ವಿ ಪ್ರಸಾದ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯದರ್ಶಿ ಸುಬ್ರಾಯ ಶೆಣೈ ವಂದಿಸಿದರು.