ಸಾರಾಂಶ
ಭಾರತೀಯ ಸಂಸ್ಕೃತಿ ಬೆಳೆಸಲು ಭರತನಾಟ್ಯ ಬಹುಮುಖ್ಯ ಮಾಧ್ಯಮ ಮತ್ತು ಜನರಿಗೆ ನೇರವಾಗಿ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿಯುವ ಮಾಧ್ಯಮ
ಧಾರವಾಡ: ಸಮಾಜದಲ್ಲಿ ಸಾಂಸ್ಕೃತಿಕವಾಗಿ ಮಕ್ಕಳು ಉತ್ತಮ ನಾಗರಿಕರಾಗಿ ಬೆಳೆಯಬೇಕಾದರೆ ಭರತನಾಟ್ಯ ಎಂಬ ಮಾಧ್ಯಮ ಪ್ರಮುಖವಾಗಿ ಮಕ್ಕಳ ಸರ್ವತೋಮುಖ ಬೆಳವಣಿಗೆ ಜೊತೆಗೆ ಉತ್ತಮ ವ್ಯಾಸಂಗ ಹಾಗೂ ಉತ್ತಮ ಆರೋಗ್ಯದ ಮನೋ ಪರಿವರ್ತನೆಗೆ ಕಾರಣವಾಗುತ್ತದೆ ಎಂದು ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.
ನಗರದ ಕಲಾರ್ಪಣ ಟ್ರಸ್ಟ್ ವತಿಯಿಂದ ನೃತ್ಯ ಸಿಂಚನ-2025 ವಾರ್ಷಿಕ ನೃತ್ಯೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.ಭಾರತೀಯ ಸಂಸ್ಕೃತಿ ಬೆಳೆಸಲು ಭರತನಾಟ್ಯ ಬಹುಮುಖ್ಯ ಮಾಧ್ಯಮ ಮತ್ತು ಜನರಿಗೆ ನೇರವಾಗಿ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿಯುವ ಮಾಧ್ಯಮ. ಮಕ್ಕಳಿಗೆ ಓದು ಬರಹದ ಜೊತೆಗೆ ನೃತ್ಯಾಭಿನಯಗಳ ಮೂಲಕ ಭಾರತೀಯ ಸಂಸ್ಕೃತಿಯ ದರ್ಶನ ಮಾಡಿಸುತ್ತಿರುವುದು ಅಭಿನಂದನಾರ್ಹ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಲ್ಲಿಕಾರ್ಜುನ ಚಿಕ್ಕಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಇದ್ದರು. ಹಿನ್ನೆಲೆಯಲ್ಲಿ ಸ್ನೇಹಾ ಸಂತೋಷ ಮಹಾಲೆ ಪ್ರಸಾದನ ಮಾಡಿದ್ದು ನಟುವಾಂಗ ವಿದೂಷಿ ಸವಿತಾ ಹೆಗಡೆ, ಮೃದಂಗ ಗೋಪಿ ಕೃಷ್ಣ ಕೆ.ಜಿ., ಹಾಡುಗಾರಿಕೆ ವಿದೂಷಿ ನವಮಿ ಮಹಾವೀರ, ವಾಯೋಲಿನ್ ಪಂಡಿತ ಶಂಕರ ಕಬಾಡಿ ಸಹಕರಿಸಿದರು, ಸೀಮಾ ಕುಲಕರ್ಣಿ ಮತ್ತು ಪ್ರಮೋದಾ ಉಪಾಧ್ಯಾಯ, ಆತ್ಮಾನಂದ ಕಬ್ಬೂರ, ಸಂತೋಷ ಗಜಾನನ ಮಹಾಲೆ ಅವರನ್ನು ಗೌರವಿಸಿಸಲಾಯಿತು.