ಸಾರಾಂಶ
ಭರತೇಶ ಅವರು ಇತ್ತೀಚೆಗೆ ವಿಕಿಮೀಡಿಯ ಫೌಂಡೇಶನ್ ಸಹಯೋಗದಲ್ಲಿ ತಯಾರಿಸಿದ ತುಳುವಿನ ಮೊದಲ ಸಂಶೋಧನಾ ಸಾಕ್ಷ್ಯಚಿತ್ರ ‘ಪುರ್ಸಕಟ್ಟುನ’ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಆಯ್ಕೆಯಾಗಿತ್ತು.
ಕನ್ನಡಪ್ರಭ ವಾರ್ತೆ ಪುತ್ತೂರು
ಬ್ಯಾಂಕ್ ಆಫ್ ಬರೋಡದ ಉದ್ಯೋಗಿಯಾಗಿರುವ ಪುತ್ತೂರು ತಾಲೂಕಿನ ಪೆರ್ಲಂಪಾಡಿ ಅಲಸಂಡೆಮಜಲು ಎಂಬಲ್ಲಿನ ನಿವಾಸಿಯಾದ ಭರತೇಶ ಅಲಸಂಡೆಮಜಲು ಅವರು ಜರ್ಮನ್ ದೇಶದ ಬರ್ಲಿನ್ ಎಂಬಲ್ಲಿ ನಡೆಯಲಿರುವ ವಿಕಿಮೀಡಿಯ ಸಮಿತ್ - ೨೦೨4ಕ್ಕೆ ಆಯ್ಕೆಯಾಗಿದ್ದಾರೆ.ಭರತೇಶ್ ಅವರು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿಯ ಮಾಜಿ ಸದಸ್ಯರಾಗಿದ್ದು, ಮಂಗಳೂರಿನ ಕರಾವಳಿ ವಿಕಿಮೀಡಿಯನ್ಸ್ ಯೂಸರ್ ಗ್ರೂಪ್‌ನ ಸಕ್ರಿಯ ಸದಸ್ಯರಾಗಿದ್ದಾರೆ. ಏಪ್ರಿಲ್ ೧೯ರಿಂದ ೨೨ರ ತನಕ ಜರ್ಮನಿ ದೇಶದ ಬರ್ಲಿನ್ ಎಂಬಲ್ಲಿ ನಡೆಯಲಿರುವ ವಿಕಿಮೀಡಿಯ ಸಮಿತ್‌ನಲ್ಲಿ ಭಾಗವಹಿಸಲಿದ್ದಾರೆ. ಈ ವಿಕಿಮೀಡಿಯ ಸಮಿತ್‌ನಲ್ಲಿ ೧೦೦ಕ್ಕಿಂತ ಹೆಚ್ಚು ದೇಶಗಳ ೧೫೦ಕ್ಕಿಂತ ಹೆಚ್ಚು ಭಾಷಿಕರು ಭಾಗವಹಿಸಲಿದ್ದಾರೆ. ಭರತೇಶ್ ಅವರು ತುಳು ಮತ್ತು ಕನ್ನಡ ಭಾಷೆಯ ರಾಯಭಾರಿಯಾಗಿ ಈ ಸಮ್ಮೇಳನವನ್ನು ಪ್ರತಿನಿಧಿಸಲಿದ್ದಾರೆ. ಸಮ್ಮೇಳನದಲ್ಲಿ ವಿಕಿಮೂಮೆಂಟ್ ೨೦೩೦ ಕಾರ್ಯರೂಪ, ಪ್ರಾದೇಶಿಕ ಗುಂಪುಗಳ ಅವಲೋಕನ, ಭಾಷೆಗಳ ಸವಾಲುಗಳ ಬಗೆಗಿನ ಚರ್ಚೆಯಲ್ಲಿ ಇವರು ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ.
ಭರತೇಶ ಅವರು ಇತ್ತೀಚೆಗೆ ವಿಕಿಮೀಡಿಯ ಫೌಂಡೇಶನ್ ಸಹಯೋಗದಲ್ಲಿ ತಯಾರಿಸಿದ ತುಳುವಿನ ಮೊದಲ ಸಂಶೋಧನಾ ಸಾಕ್ಷ್ಯಚಿತ್ರ ‘ಪುರ್ಸಕಟ್ಟುನ’ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಆಯ್ಕೆಯಾಗಿತ್ತು.ಭರತೇಶ್ ಅವರು ಪೆರ್ಲಂಪಾಡಿಯ ಅಲಸಂಡೆಮಜಲು ನಿವಾಸಿ ಬೋಜಪ್ಪ ಗೌಡ ಮತ್ತು ಗಿರಿಜಾ ಎ.ಬಿ. ದಂಪತಿಯ ಪುತ್ರ.