ಅದ್ಧೂರಿಯಾಗಿ ತೆರೆ ಕಂಡ ಭಾರತೀ ಉತ್ಸವ

| Published : Sep 21 2025, 02:00 AM IST

ಸಾರಾಂಶ

ಎಕ್ಸಲೆನ್ಸ್ ವಿದ್ಯಾರ್ಥಿಗಳು ಛದ್ಮ ವೇಷ ಪೇಪರ್ ಅಲಂಕೃತಗೊಂಡ ವಿದ್ಯಾರ್ಥಿಗಳು ಗಮನ ಸೆಳೆದರೆ, ಮೋನಿಕ ತಂಡ ನವದುರ್ಗಿ ನೃತ್ಯ ರೂಪಕ ಪ್ರದರ್ಶಿಲಾಗುತ್ತಿತ್ತು. ಮಹಿಷಸುರ, ಚಂಡ ಮುಂಡರು ಮುಂತಾದ ರಾಕ್ಷಸರನ್ನು, ದುಷ್ಟ ಅಸುರರನ್ನು ಸಂಹರಿಸುವ ಮನಮೋಹಕವಾಗಿ ನರ್ತಿಸುವ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ಭಕ್ತಿಯ ಕಡಲಲ್ಲಿ ತೇಲಿಸಿದರು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಮೂರು ದಿನಗಳಿಂದ ಯುವ ಮನಸ್ಸು, ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯವಂತೆ ಮಾಡಿದ್ದ ಭಾರತೀ ಉತ್ಸವದ ಸಾಂಸ್ಕೃತಿಕ ಸಂಭ್ರಮ ಅದ್ಧೂರಿಯಾಗಿ ತೆರೆ ಕಂಡಿತು.

ನೂರಾರು ವಿದ್ಯಾರ್ಥಿ ಕಲಾವಿದರಿಗೆ ಭಾರತೀ ವಿದ್ಯಾ ಸಂಸ್ಥೆ ವೇದಿಕೆ ಕಲ್ಪಿಸಿ ಮನರಂಜನೆ ರಸದೌತಣ ನೀಡಿದ ಭಾರತೀ ಉತ್ಸವದ ಸಾಂಸ್ಕೃತಿಕ ಸಂಭ್ರಮದಲ್ಲಿ ಭಾರತೀ ಸ್ಕೂಲ್ ಅಫ್ ಎಕ್ಸಲೆನ್ಸ್ ವಿದ್ಯಾರ್ಥಿಗಳು ಪುಟಾಣಿ ಮಕ್ಕಳ ಭರತನಾಟ್ಯ ಎಲ್ಲರ ಗಮನ ಸೆಳೆಯಿತು. ರಂಗೀತರಂಗ ಮತ್ತು ಕಾಂತಾರ ಚಿತ್ರದ ಭೂತಾರಾಧನೆ ಸೇರಿದಂತೆ ಹತ್ತಾರು ಸುಂದರ ವೈವಿಧ್ಯಮಯ ಹಾಡಿಗೆ ಭರತನಾಟ್ಯದ ಮೂಲಕ ಎಲ್ಲರನ್ನು ಮನರಂಜಿಸಿತು.

ಎಕ್ಸಲೆನ್ಸ್ ವಿದ್ಯಾರ್ಥಿಗಳು ಛದ್ಮ ವೇಷ ಪೇಪರ್ ಅಲಂಕೃತಗೊಂಡ ವಿದ್ಯಾರ್ಥಿಗಳು ಗಮನ ಸೆಳೆದರೆ, ಮೋನಿಕ ತಂಡ ನವದುರ್ಗಿ ನೃತ್ಯ ರೂಪಕ ಪ್ರದರ್ಶಿಲಾಗುತ್ತಿತ್ತು. ಮಹಿಷಸುರ, ಚಂಡ ಮುಂಡರು ಮುಂತಾದ ರಾಕ್ಷಸರನ್ನು, ದುಷ್ಟ ಅಸುರರನ್ನು ಸಂಹರಿಸುವ ಮನಮೋಹಕವಾಗಿ ನರ್ತಿಸುವ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ಭಕ್ತಿಯ ಕಡಲಲ್ಲಿ ತೇಲಿಸಿದರು.

ಭಾರತೀ ಪ್ರೌಢ ಶಾಲೆ ಅಡವಿ ದೇವಿಯಾ ಕಾಡು ಜನಗಳ ಹಾಡಿಗೆ ಮನಮೋಹಕವಾಗಿ ನರ್ತಿಸುವ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರೆ. ಭಾರತೀ ವಸತಿ ಶಾಲೆ ವಿದ್ಯಾರ್ಥಿ ಮೋಹನ್ ಕುಮಾರ್ ತಂಡ ಇಮ್ಮಡಿ ಪುಲಕೇಶಿ ಜೀವನ ಚರಿತ್ರೆ ಮತ್ತು ಪರಂಪರೆ ಕುರಿತು ನೃತ್ಯದ ಅಭಿನಯದ ಮೂಲಕ ತಿಳಿಸಿದರು.

ವಿದ್ಯಾರ್ಥಿಗಳು ನೃತ್ಯದ ಮೂಲಕ ಭ್ರೂಣಹತ್ಯೆ ಕುರಿತು ಅರಿವು ಮೂಡಿಸಿದರು. ಸುಮ ಮತ್ತು ತಂಡ ಮಹಾಭಾರತದ ಧರ್ಮ - ಅಧರ್ಮ ನಡುವೆ ನಡೆಯುವ ಸಂಘವನ್ನು ಬಿತ್ತರಿಸುವುದನ್ನು ಗೀತೆ ಮೂಲಕ ನರ್ತಿಸಿದರು. ಶಂಕರೇಗೌಡ ಕಾಲೇಜ್ ಆಫ್ ಎಜುಕೇಷನ್‌ನ ಕವನ ಮತ್ತು ಕುಸುಮ ವಿದ್ಯಾರ್ಥಿಗಳು ಶಿವ - ಪಾರ್ವತಿ ಭರತನಾಟ್ಯದ ವಿವಿಧ ಪ್ರಕಾರ ನರ್ತನ ಜೋಡಿಯ ನೃತ್ಯ ಪ್ರದರ್ಶನ ಗಮನ ಸೆಳೆಯಿತು.

ಮಧುಶ್ರೀ ಶಿವನ ನಾಟ್ಯ ನರ್ತನ ಮೂಲಕ ಕ್ಲಾಸಿಕಲ್ ಗೀತೆಗೆ ಭರತನಾಟ್ಯವಾಡಿದರೇ ಅನ್ನದಾತ ಶ್ರಮ ಸಂಕೇತವನ್ನು ನೃತ್ಯದ ಮಾಡಿ ಅಭಿನಯದ ಮೂಲಕ ಪ್ರೇಕ್ಷರನ್ನು ರಂಜಿಸಿದರು. ಕರ್ನಾಟಕ ಜನಪದ ವೈವಿಧ್ಯತೆ ಮತ್ತು ಪರಂಪರೆ, ರಾಜ್ಯದ ಪ್ರತಿ ಜಿಲ್ಲೆಯ ಪ್ರಚಲಿತ ನೃತ್ಯಪ್ರಕಾರ, ಕನ್ನಡ ಸಿನಿಮಾಧಾರಿತ ಆಧುನಿಕ ನೃತ್ಯ ಪ್ರಕಾರಗಳು ಕರ್ನಾಟಕ ವೈಭವ ಸಾರುವಂತ ನೃತ್ಯ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಗಿ ಸಮರೋಪ ಹಾದಿಯಲ್ಲಿ ನಡೆದ ಕಾರ್ಯಕ್ರಮಗಳು ಸರಾಗವಾಗಿ ಮುಕ್ತಾಯಗೊಂಡವು.

ಭಾರತೀ ಉತ್ಸವ ಮೈಸೂರು ಪ್ರಾಂತ್ಯದಲ್ಲಿ ಉತ್ತಮ ವೇದಿಕೆ: ಮಧು ಜಿ.ಮಾದೇಗೌಡ

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಕಳೆದ ಒಂದೂವರೇ ದಶಕಗಳ ಹಿಂದೆ ಆರಂಭವಾದ ಭಾರತೀ ಉತ್ಸವ ವ್ಯಾಪಕ ಜನಪ್ರಿಯಗೊಂಡು ಮೈಸೂರು ಪ್ರಾಂತ್ಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉತ್ತಮ ವೇದಿಕೆಯಾಗಿ ರೂಪುಗೊಂಡಿದೆ ಎಂದು ವಿಧಾನ ಪರಿಷತ್ ಸದಸ್ಯ, ಭಾರತೀ ವಿದ್ಯಾ ಸಂಸ್ಥೆ ಅಧ್ಯಕ್ಷ ಮಧು ಜಿ.ಮಾದೇಗೌಡ ಅಭಿಪ್ರಾಯಪಟ್ಟರು.

ಭಾರತೀ ವಿದ್ಯಾಸಂಸ್ಥೆಯಿಂದ ಭಾರತೀ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಭಾರತೀ ಉತ್ಸವದ ಸಮಾರೋಪದಲ್ಲಿ ಮಾತನಾಡಿ, ಭಾರತೀ ಉತ್ಸವ ವಿದ್ಯಾರ್ಥಿಗಳಿಗಷ್ಟೆ ಅಲ್ಲದೇ, ಈ ವ್ಯಾಪ್ತಿಯ ಜನತೆಗೆ ಉತ್ತಮ ಮನರಂಜನೆ ನೀಡಿ ಜನಪ್ರಿಯಗೊಳ್ಳುತ್ತಿದೆ. ಮೂರು ದಿನಗಳು ನಡೆಯುವ ಭಾರತೀ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಿಸಲು ಸುತ್ತಮುತ್ತಲ ಗ್ರಾಮಗಳ ಸಾವಿರಾರು ಮಂದಿ ಆಗಮಿಸಿ ಸಾಂಸ್ಕೃತಿಕ ರಸದೌತಣವನ್ನು ಸವಿಯುತ್ತಾರೆ ಎಂದರು.

ನನ್ನ ತಂದೆ ಮಾಜಿ ಸಂಸದ ದಿ.ಜಿ.ಮಾದೇಗೌಡರು ಹಳ್ಳಿಗಾಡಿನ ಮಕ್ಕಳ ಭವಿಷ್ಯ ರೂಪಿಸಲು ಸ್ಥಾಪಿಸಿದ ಸಂಸ್ಥೆಯ ಜವಾಬ್ದಾರಿ ನನಗೆ ವಹಿಸಿದ ನಂತರ ಹಲವು ಹೊಸ ಕೋರ್ಸಗಳನ್ನು ತಂದು ನಗರ ಪ್ರದೆಶದಲ್ಲಿ ಸಿಗುವ ಸೌವಲತ್ತುಗಳನ್ನು ನೀಡುತ್ತ ರಾಜ್ಯದ ನಂಬರ್ ಒನ್ ಸಂಸ್ಥೆಗಳ ಪಟ್ಟಿಯಲ್ಲಿ ಭಾರತೀ ವಿದ್ಯಾ ಸಂಸ್ಥೆ ಸೇರ್ಪಡೆಗೊಂಡಿರುವುದು ಸಂಸ್ಥೆ ಹೆಗ್ಗಳಿಕೆಗೆ ಸಾಕ್ಷಿಯಾಗಿದೆ ಎಂದು ಭಾವುಕರಾದರು.

ಈ ವೇಳೆ ಉತ್ಸವ ಸಂಚಾಲಕರಾಗಿ ಕಾರ್ಯನಿರ್ವಹಿಸಿದ ಭಾರತೀ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಎಸ್.ರೇವಣ್ಣ ಅವರನ್ನು ಅಭಿನಂಧಿಸಲಾಯಿತು. ಈ ವೇಳೆ ಸಂಸ್ಥೆ ವಿವಿಧ ಅಂಗ ಸಂಸ್ಥೆಗಳು ಮುಖ್ಯಸ್ಥರು ಉಪಸ್ಥಿತರಿದ್ದರು.