ಸಾರಾಂಶ
ಭಟ್ಕಳ: ಪ್ರತಿಷ್ಠಿತ ಜನತಾ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ 40ನೇ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಷೇರುದಾರರನ್ನುದ್ದೇಶಿಸಿ ಮಾತನಾಡಿದ ಅವರು, ಸಂಘವು ₹೩.೨೮ ಕೋಟಿ ನಿವ್ವಳ ಲಾಭ ಗಳಿಸಿದೆ. ಷೇರುದಾರ ಸದಸ್ಯರಿಗೆ ಶೇ.೧೦ರಂತೆ ಲಾಭಾಂಶ ನೀಡಲು ನಿರ್ಧರಿಸಲಾಗಿದೆ.೪೦ ವರ್ಷಗಳ ಹಿಂದೆ ಮಾಜಿ ಶಾಸಕರಾದ ಡಾ.ಚಿತ್ತರಂಜನ ಮತ್ತು ಕೆಲವು ಹಿರಿಯರು ಸ್ಥಾಪಿಸಿದ ಈ ಸಂಘ ಇಂದು ಆರ್ಥಿಕ ಅವಶ್ಯಕತೆ ಪೊರೈಸುವ ಸದೃಢಸಂಸ್ಥೆಯಾಗಿದೆ. ಇದಕ್ಕೆ ಸಂಘದ ಸದಸ್ಯರ ಮತ್ತು ಠೇವುದಾರರ ಪ್ರೋತ್ಸಾಹ ಹಾಗೂ ನಮ್ಮ ಸಂಘದ ಮೇಲಿರುವ ದೃಢವಿಶ್ವಾಸವೇ ಕಾರಣವಾಗಿದೆ. ಸಂಘದಲ್ಲಿ ವಿವಿಧ ಠೇವಣಿ ಯೋಜನೆಗಳಿವೆ. ತಮ್ಮ ಹಣವನ್ನು ಈ ಯೋಜನೆಗಳಲ್ಲಿ ತೊಡಗಿಸಿ ಲಾಭ ಪಡೆಯಬಹುದು. ಸಂಘದಲ್ಲಿ ೩೩,೯೯೧ ಷೇರುದಾರ ಸದಸ್ಯರಿದ್ದು, ಷೇರು ಬಂಡವಾಳ ₹12.80 ಕೋಟಿ ಇದೆ. ಸಂಘವು ₹209 ಕೋಟಿ ಠೇವಣಿ ಹೊಂದಿದೆ. ಸಂಘವು ಸದಸ್ಯರಿಗೆ ₹262.19 ಕೋಟಿ ಸಾಲ ವಿತರಿಸಿದೆ.
ಸಂಘವು ಈಗಾಗಲೇ ಪ್ರಧಾನ ಕಚೇರಿ ಸೇರಿ ೧೭ ಶಾಖೆಗಳಿವೆ. ಈ ವರ್ಷದಲ್ಲಿ ಸಂಘದ ಎಲ್ಲ ಶಾಖೆಗಳೂ ಲಾಭದಲ್ಲಿ ಮುನ್ನಡೆಯುತ್ತಿವೆ ಎಂದರು.ಪ್ರಧಾನ ವ್ಯವಸ್ಥಾಪಕ ವಿನಯ ನಾಯ್ಕ ವರದಿ ಮಂಡಿಸಿದರು. ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಅಧ್ಯಕ್ಷರು ಉತ್ತರ ನೀಡಿದರು. ಸಂಘದ ಉಪಾಧ್ಯಕ್ಷ ಪರಮೇಶ್ವರ ದೇವಾಡಿಗ, ನಾಗಪ್ಪ ಪೊಮ್ಮ ನಾಯ್ಕ, ಕೃಷ್ಣಾ ನಾಯ್ಕ, ಕೃಷ್ಣಾನಂದ ಪೈ, ಪರಮೇಶ್ವರ ನಾಯ್ಕ, ವೆಂಕಟ್ರಮಣ ಮೊಗೇರ, ತಿಮ್ಮಪ್ಪ ನಾಯ್ಕ, ರಾಮಚಂದ್ರ ಕಿಣಿ, ಅಲ್ಬರ್ಟ್ ಡಿಕೋಸ್ತ, ಲಕ್ಷ್ಮೀ ಮಾದೇವ ನಾಯ್ಕ ಇದ್ದರು.
ಭಟ್ಕಳದ ಜನತಾ ಸೊಸೈಟಿಯ 40ನೇ ವಾರ್ಷಿಕ ಮಹಾಸಭೆ ಸೊಸೈಟಿ ಅಧ್ಯಕ್ಷ, ಸಚಿವ ಮಂಕಾಳ ವೈದ್ಯ ಅಧ್ಯಕ್ಷತೆಯಲ್ಲಿ ನಡೆಯಿತು.