ಸಾರಾಂಶ
ಬ್ಯಾಂಕು ಕಳೆದ ಮಾರ್ಚ ಅಂತ್ಯಕ್ಕೆ 94 ಲಕ್ಷ ನಿವ್ವಳ ಲಾಔ ಗಳಿಸಿದೆ.
ಭಟ್ಕಳ: ಇಲ್ಲಿನ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಸಹಕಾರಿ (ಪಿಎಲ್ಡಿ) ಬ್ಯಾಂಕಿನ 53ನೇ ವರ್ಷದ ಸರ್ವ ಸಾಧಾರಣ ಸಭೆ ಬ್ಯಾಂಕಿನ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸುನೀಲ ಬಿ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಶೇರುದಾರರನ್ನುದ್ದೇಶಿಸಿ ಮಾತನಾಡಿದ ಅವರು ಬ್ಯಾಂಕು ಕಳೆದ ಮಾರ್ಚ ಅಂತ್ಯಕ್ಕೆ 94 ಲಕ್ಷ ನಿವ್ವಳ ಲಾಔ ಗಳಿಸಿದೆ. ಬ್ಯಾಂಕು 33,378 ಸದಸ್ಯರನ್ನು ಹೊಂದಿದ್ದು, ₹12.77 ಕೋಟಿ ಶೇರು ಬಂಡವಾಳ, ₹31.99 ಕೋಟಿ ಕಾಯ್ದಿಡ್ಟ ನಿಧಿ, ₹158.27 ಕೋಟಿ ಠೇವಣಿ, ₹58 ಕೋಟಿ ಹೂಡಿಕೆ ಹೊಂದಿದೆ. ಬ್ಯಾಂಕಿಗೆ ₹8.90 ಕೋಟಿ ಕೃಷಿ ಸಾಲ ನೀಡಲಾಗಿದೆ. ಬ್ಯಾಂಕು ಆರ್ಥಿಕ ವ್ಯವಹಾರದ ಜೊತೆಗೆ ಅನಾರೋಗ್ಯ ಪೀಡಿತರಾದ ಬಡರೋಗಿಗಳಿಗೂ ₹7.92 ಲಕ್ಷ ಸಹಾಯ ಮಾಡಿದೆ. ವರದಿ ವರ್ಷದಲ್ಲಿ ಮತಪಟ್ಟ ಸಾಲಗಾರ ಸದಸ್ಯರಿಗೆ ಋಣ ಪರಿಹಾರ ನಿಧಿಯಿಂದ ₹31.83 ಲಕ್ಷ ಧನಸಹಾಯ ಮಾಡಲಾಗಿದೆ. ಬ್ಯಾಂಕು 11 ಶಾಖೆಗಳನ್ನು ಹೊಂದಿದ್ದು, ಗ್ರಾಹಕರ ವಿಶ್ವಾಸ ಗಳಿಸಿ ಉತ್ತಮ ವ್ವವಹಾರ ಮಾಡುತ್ತಿದ್ದು, ಠೇವುಗಳಿಗೆ ಆಕರ್ಷಕ ಬಡ್ಡಿ ನೀಡಲಾಗುತ್ತಿದ್ದು, ಬ್ಯಾಂಕು ಹೆಚ್ಚಿನ ಅಭಿವೃದ್ಧಿ ಗಳಿಸಲು ಎಲ್ಲರ ಸಹಕಾರವನ್ನು ಅವರು ಕೋರಿದರು.ಪ್ರಧಾನ ವ್ಯವಸ್ಥಾಪಕ ರಾಮ ಬಿಲ್ಲವ ಅವರು ಸ್ವಾಗತಿಸಿ, ವಾರ್ಷಿಕ ವರದಿ ಮಂಡಿಸಿದರು. ಉಪಸ್ಥಿತರಿದ್ದ ಸದಸ್ಯರು ಪ್ರಶ್ನೆಗಳನ್ನು ಕೇಳಿ ಅಧ್ಯಕ್ಷರಿಂದ ಉತ್ತರ ಪಡೆದುಕೊಂಡರು. ಉಪಾಧ್ಯಕ್ಷ ಸುರೇಶ ಜೆ ನಾಯ್ಕ, ನಿರ್ದೇಶಕರಾದ ಗಾಯತ್ರಿ ನಾಯ್ಕ, ನವನೀತ ನಾಯ್ಕ, ಮಂಜಪ್ಪ ನಾಯ್ಕ, ಮಂಜು ಮೊಗೇರ, ಈಶ್ವರ ಎಂ ನಾಯ್ಕ, ಈರಾ ನಾಯ್ಕ, ಹನುಮಂತ ನಾಯ್ಕ, ದೇವಿದಾಸ ಎಂ ನಾಯ್ಕ, ಎಂ ಪಿ ಶೈಲೇಂದ್ರಕುಮಾರ, ಪೂರ್ಣಿಮಾ ನಾಯ್ಕ, ಮಂಜುನಾಥ ನಾಯ್ಕ, ನಾಗಪ್ಪ ಗೊಂಡ ಇದ್ದರು. ದಿನೇಶ ನಾಯ್ಕ ವಂದಿಸಿದರು. ಮಂಜುನಾಥ ನಾಯ್ಕ ಸಾಲಮನೆ ನಿರೂಪಿಸಿದರು.