ತೆರ್ನಮಕ್ಕಿ ಕೆಪಿಎಸ್ಸಿ ಶಾಲೆಯ ಸಾನಿಕಾ ಬೈಲೂರು ಶೇ. 99.36 ಗಳಿಸಿ ಪ್ರಥಮ

ಕನ್ನಡಪ್ರಭ ವಾರ್ತೆ ಭಟ್ಕಳ

ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲತಾಂಶ ಪ್ರಕಟಗೊಂಡಿದ್ದು, ತಾಲೂಕು ಶೇ. 98.63 ಫಲಿತಾಂಶ ಗಳಿಸಿ ಜಿಲ್ಲೆಗೆ 2ನೇ ಸ್ಥಾನ ಪಡೆದುಕೊಂಡಿದೆ.‌

ಪರೀಕ್ಷೆಗೆ ಕುಳಿತ 2040 ವಿದ್ಯಾರ್ಥಿಗಳಲ್ಲಿ 2012 ವಿದ್ಯಾರ್ಥಿಗಳು ತೆರ್ಗಡೆ ಹೊಂದಿದ್ದಾರೆ. ಈ ಬಾರಿಯೂ ತಾಲ್ಲೂಕಿನಲ್ಲಿ ಹುಡುಗಿಯರೆ ಮೇಲುಗೈ ಸಾಧಿಸಿದ್ದಾರೆ. ಈ ಬಾರಿ ಅನುದಾನ ರಹಿತ ಶಾಲೆಗಳು ಶೇ. 99.15 ಹಾಗೂ ಸರ್ಕಾರಿ ಅನುದಾನಿತ ಶಾಲೆ ಶೇ.96.44 ಫಲಿತಾಂಶ ದಾಖಲು ಮಾಡಿದರೆ ಅದಕ್ಕಿಂತ ಹೆಚ್ಚಾಗಿ ತಾಲ್ಲೂಕಿನ ಸರ್ಕಾರಿ ಶಾಲೆಗಳು ಶೇ. 99.52 ಫಲಿತಾಂಶ ದಾಖಲು ಮಾಡಿ ಗಮನ ಸೆಳೆದಿದೆ. ಕಾಯ್ಕಿಣಿ ತೆರ್ನಮಕ್ಕಿಯ ಕರ್ನಾಟಕ ಪಬ್ಲಿಕ್‌ ಶಾಲೆಯ ವಿದ್ಯಾರ್ಥಿನಿ ಸಾನಿಕಾ ಬೈಲೂರು ಶೇ. 99.36 ಅಂಕ ಗಳಿಸಿ ತಾಲ್ಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಪಟ್ಟಣದ ಆನಂದ ಆಶ್ರಮ ಪ್ರೌಢಶಾಲೆಯ ವಿದ್ಯಾರ್ಥಿ ಪ್ರಥಮ ನಾಗರಾಜ ನಾಯ್ಕ ಹಾಗೂ ತೆರ್ನಮಕ್ಕಿಯ ಕರ್ನಾಟಕ ಪಬ್ಲಿಕ್‌ ಶಾಲೆಯ ವಿದ್ಯಾರ್ಥಿನಿ ವರ್ಷಿತಾ ಶಿವಕುಮಾರ ನಾಯ್ಕ ಇಬ್ಬರೂ ಶೇ. 99.20 ಅಂಕ ಪಡೆದು ತಾಲ್ಲೂಕಿಗೆ ದ್ವೀತೀಯ ಸ್ಥಾನ ಗಳಿಸಿದ್ದಾರೆ. ಶಿರಾಲಿಯ ಶ್ರೀವಲ್ಲಿ ಪ್ರೌಡಶಾಲೆಯ ವಿದ್ಯಾರ್ಥಿನಿ ವೈಭವಿ ದೇವಾನಂದ ನಾಯಕ ಶೇ.99.04 ಗಳಿಸಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ತೆರ್ನಮಕ್ಕಿಯ ಕರ್ನಾಟಕ ಪಬ್ಲಿಕ್‌ ಶಾಲೆಯ ವಿದ್ಯಾರ್ಥಿನ ಯೊಗೇಂದ್ರ ವೆಂಕಟೇಶ ನಾಯ್ಕ ಶೇ. 98..88 ಪಡೆದು 4ನೇ ಸ್ಥಾನ ಪಡೆದುಕೊಂಡರೆ, ಹೆಬಳೆಯ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ ಮೇಘಾ ಮಾದೇವ ಗೊಂಡ ಹಾಗೂ ಪಟ್ಟಣದ ವಿದ್ಯಾಭಾರತಿ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿನಿ ಶ್ರೀರಕ್ಷಾ ಪೈ ಇಬ್ಬರೂ ಶೇ. 98.56 ಗಳಿಸಿ 5ನೇ ಸ್ಥಾನ ಪಡೆದು ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.