ಸಾರಾಂಶ
ಭಟ್ಕಳ: ರಾಘವೇಶ್ವರ ಭಾರತೀ ಸ್ವಾಮೀಜಿಯವರು ಸ್ವರ್ಣ ಪಾದುಕಾ ಪೂಜೆಯ ಮೂಲಕ ಭಕ್ತರಿಗೆ ಶ್ರೀಮಠದ ಪರಂಪರೆಯನ್ನು ಆರಾಧಿಸುವ ಅವಕಾಶವನ್ನು ಮಾಡಿಕೊಟ್ಟಿದ್ದಾರೆ ಎಂದು ಶ್ರೀಮಠದ ಆಚಾರ- ವಿಚಾರ ಪ್ರಮುಖ ಗಜಾನನ ಭಟ್ಟ ತಿಳಿಸಿದರು.ಕಡವಿನಕಟ್ಟೆ ದುರ್ಗಾಪರಮೇಶ್ವರಿ ದೇವಿಯ ಸನ್ನಿಧಿಯಲ್ಲಿ ಭಟ್ಕಳ ಹವ್ಯಕ ವಲಯದ ಪ್ರಥಮ ವಲಯೋತ್ಸವ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.ಯಾವುದೇ ಕಾರ್ಯವನ್ನು ಮಾಡುವಾಗಲೂ ಶ್ರದ್ಧೆ, ಭಕ್ತಿ ಮುಖ್ಯ. ನಮ್ಮ ನಡುವೆಯೂ ಅನೇಕರು ಕ್ಷುಲ್ಲಕವಾಗಿ ಮಾತನಾಡುವವರಿದ್ದಾರೆ. ಆದರೆ ನಮ್ಮ ಶ್ರದ್ಧೆ, ಭಕ್ತಿ ಅಚಲವಾಗಿದ್ದಲ್ಲಿ ಬೇಡಿದ್ದನ್ನು ಪಡೆಯುವಲ್ಲಿ ಸಫಲರಾಗಬಹುದು. ಶ್ರೀಮಠದ ಪರಂಪರೆಯಲ್ಲಿ ಅನೇಕ ದೃಷ್ಟಾಂತಗಳಿವೆ ಎಂದು ಉದಾಹರಿಸಿದರು. ಪ್ರತಿ ಶ್ರೀಮಠದ ಭಕ್ತರೂ ಅಚಲವಾದ ನಂಬಿಕೆ, ಭಕ್ತಿಯಿಂದ ನಡೆದುಕೊಂಡು ಬರುವಂತೆ ಕೋರಿದರು.
ಅಧ್ಯಕ್ಷತೆ ವಹಿಸಿದ್ದ ಭಟ್ಕಳ ಹವ್ಯಕ ವಲಯದ ವಲಯಾಧ್ಯಕ್ಷೆ ರೇಷ್ಮಾ ಯೋಗೀಶ ಭಟ್ಟ ಮಾತನಾಡಿ, ಶ್ರೀಮಠದ ಕಾರ್ಯಕ್ರಮಗಳ ಕುರಿತು ವಿವರಿಸಿದರು. ಪ್ರತಿವರ್ಷದಂತೆ ಈ ವರ್ಷವೂ ಐದು ವಲಯೋತ್ಸವಗಳು ನಡೆಯಲಿವೆ. ಶಿಷ್ಯ ವರ್ಗದವರು ಭಾಗವಹಿಸಿ ಯಶಸ್ವಿಗೊಳಿಸಿಕೊಡಬೇಕು ಎಂದರು.ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಮಹಿಳೆಯರಿಂದ ಕುಂಕುಮಾರ್ಚನೆ ನಂತರ ರುದ್ರಪಠಣ ನಡೆಯಿತು.
ಶ್ರೀ ಕಡವಿನಕಟ್ಟೆ ದುರ್ಗಾಪರಮೇಶ್ವರಿ ದೇವಸ್ಥಾನದ ಕಾರ್ಯದರ್ಶಿ ಪ್ರಕಾಶ ಎನ್. ಭಟ್ಟ ಉಪಸ್ಥಿತರಿದ್ದರು. ಶ್ರೀ ಕಡವಿನಕಟ್ಟೆ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಮಂಜುನಾಥ ಭಟ್ಟ ಹಾಗೂ ಮಹೇಶ ಭಟ್ಟ ಆತಿಥ್ಯ ವಹಿಸಿದ್ದರು. ಭಟ್ಕಳ ಹವ್ಯಕ ವಲಯದ ಕಾರ್ಯದರ್ಶಿ ಎಂ.ವಿ. ಹೆಗಡೆ ಅವರು ಮುಂದಿನ ಕಾರ್ಯಕ್ರಮಗಳ ರೂಪುರೇಷೆಗಳನ್ನು ವಿವರಿಸಿದರು. ಕನೇನಳ್ಳಿಯಲ್ಲಿ ಭಗವದ್ಗೀತಾ ಅಭಿಯಾನ ಸಂಪನ್ನಯಲ್ಲಾಪುರ: ಭಗವದ್ಗೀತೆಯ ಒಂದೊಂದು ಶಬ್ದಗಳಿಗೂ ಅನೇಕ ಅರ್ಥಗಳಿದ್ದು, ಭಗವದ್ಗೀತೆಯನ್ನು ವೈಜ್ಞಾನಿಕವಾಗಿಯೂ ನೋಡಬಹುದು. ಭಗವದ್ಗೀತೆಯಲ್ಲಿ ವೇದ ಪುರಾಣಗಳ ತತ್ವವೇ ಅಡಗಿದೆ ಎಂದು ಕನೇನಳ್ಳಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಜಿ.ಜಿ. ಹೆಗಡೆ ಕನೇನಳ್ಳಿ ತಿಳಿಸಿದರು.ತಾಲೂಕಿನ ಉಮ್ಮಚಗಿ ಗ್ರಾಪಂ ವ್ಯಾಪ್ತಿಯ ಕನೇನಳ್ಳಿ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆದ ಭಗವದ್ಗೀತಾ ಅಭಿಯಾನದ ಸಮಾರೋಪದಲ್ಲಿ ಮಾತನಾಡಿ, ಈ ಭಗವದ್ಗೀತಾ ಅಭಿಯಾನಕ್ಕೆ ಸ್ವರ್ಣವಲ್ಲಿಯ ಶ್ರೀಗಳು ಹೆಚ್ಚು ಮಹತ್ವ ನೀಡಿರುವುದರಿಂದ ನಾವೆಲ್ಲರೂ ಪ್ರತಿ ವರ್ಷವೂ ಗೀತಾಭಿಯಾನವನ್ನು ನಡೆಸುತ್ತಿದ್ದೇವೆ. ಭಗವದ್ಗೀತೆಗೆ ಜಾತಿ, ಧರ್ಮಗಳ ಹಂಗಿಲ್ಲ. ಇಂತಹ ಭಗವದ್ಗೀತೆಯ ಸಾರವನ್ನು ಅರಿತು ಅಳವಡಿಸಿಕೊಳ್ಳೋಣ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಊರಿನ ಮಹಿಳೆಯರಾದ ನಾಗವೇಣಿ ಜಿ. ಹೆಗಡೆ, ಸರೋಜಾ ಭಾಸ್ಕರ ಹೆಗಡೆ, ಸುಶೀಲಾ ಗ. ಹೆಗಡೆ, ಲಲಿತಾ ಗೋ. ಭಟ್ಟ, ಗಾಯತ್ರಿ ನರಸಿಂಹ ಭಟ್ಟ, ಗೀತಾ ಶ್ರೀಪಾದ ಹೆಗಡೆ ಜಾಜಿಮನೆ, ಗಣಪತಿ ಶಿವರಾಮ ಹೆಗಡೆ, ಡಾ. ಸುಬ್ರಮಣ್ಯ ಶಿ. ಹೆಗಡೆ ಜಾಜಿಮನೆ, ಭಾಸ್ಕರ ಸುಬ್ರಾಯ ಹೆಗಡೆ ಕನೇನಳ್ಳಿ ಮೊದಲಾದವರು ಭಗವದ್ಗೀತಾ ಪಠಣ ಮಾಡಿದರು. ಗ್ರಾಪಂ ಸ್ಥಳೀಯ ಸದಸ್ಯ ಗ.ರಾ. ಭಟ್ಟ ಅತಿಥಿಗಳಾಗಿ ಭಾಗವಹಿಸಿದ್ದರು. ಮಹಿಳೆಯರಿಂದ ಭಜನಾ ಕಾರ್ಯಕ್ರಮ ನಡೆಯಿತು.