ಮಾರಶಿಂಗನಹಳ್ಳಿಯಲ್ಲಿ ಭಾವೈಕ್ಯತೆಯ ಸಿಡಿ ಉತ್ಸವ

| Published : Feb 17 2025, 12:31 AM IST

ಸಾರಾಂಶ

ಮಾರಶಿಂಗನಹಳ್ಳಿ ಗ್ರಾಮಗಳಲ್ಲಿ ಹಬ್ಬ-ಉತ್ಸವ- ಆಚರಣೆಗಳು ನಡೆದರೆ ದೂರದ ಬಂಧು ಬಳಗ ಒಂದೆಡೆ ಸೇರಿ ಮನೆ ಮಂದಿಗಳಲ್ಲ ಸಂಭ್ರಮ, ಸಡಗರ ಉಂಟಾಗುತ್ತದೆ. ಜೊತೆಗೆ ಯೋಗಕ್ಷೇಮ ವಿಚಾರಿಸಿದಾಗ ಸಂಬಂಧಗಳು ಮತ್ತಷ್ಟು ಗಟ್ಟಿಕೊಳ್ಳುತ್ತವೆ. ಹೊಸ ನಂಟು ಬೆಳೆಯಲು ಸಾಧ್ಯವಾಗುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಮಾರಶಿಂಗನಹಳ್ಳಿಯಲ್ಲಿ ಭಾವೈಕ್ಯತೆಯ ಐತಿಹಾಸಿಕ ಸಿಡಿ ಉತ್ಸವ ಮತ್ತು ಮೆರೆವಣಿಗೆ ಅದ್ಧೂರಿಯಾಗಿ ನಡೆಯಿತು.

ಗ್ರಾಪಂ ಮಾಜಿ ಸದಸ್ಯ ಮಹದೇವ ಮಾತನಾಡಿ, ಶತಶತಮಾನಗಳಿಂದ ನಮ್ಮ ಪೂರ್ವಿಕರು ಭಾವೈಕ್ಯತೆ ಬೆಸೆಯುವ ಸಿಡಿ ಉತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಇದನ್ನು ನಾವು ಮುಂದುವರಿದುಕೊಂಡು ಬರುತ್ತಿದೆ ಎಂದರು.

ಗ್ರಾಮಗಳಲ್ಲಿ ಹಬ್ಬ-ಉತ್ಸವ- ಆಚರಣೆಗಳು ನಡೆದರೆ ದೂರದ ಬಂಧು ಬಳಗ ಒಂದೆಡೆ ಸೇರಿ ಮನೆ ಮಂದಿಗಳಲ್ಲ ಸಂಭ್ರಮ, ಸಡಗರ ಉಂಟಾಗುತ್ತದೆ. ಜೊತೆಗೆ ಯೋಗಕ್ಷೇಮ ವಿಚಾರಿಸಿದಾಗ ಸಂಬಂಧಗಳು ಮತ್ತಷ್ಟು ಗಟ್ಟಿಕೊಳ್ಳುತ್ತವೆ. ಹೊಸ ನಂಟು ಬೆಳೆಯಲು ಸಾಧ್ಯವಾಗುತ್ತದೆ ಎಂದರು.

ಮಳವಳ್ಳಿ ಸಿಡಿ ಉತ್ಸವ ನಡೆದ ನಂತರ ಇಲ್ಲಿ ಸಿಡಿ ಉತ್ಸವ ಮತ್ತು ತಮಟೆ ನಗಾರಿ ಮೇಳದೊಂದಿಗೆ ತಂಬಿಟ್ಟಿನ ಆರತಿ ಮೆರವಣಿಗೆ ಅದ್ಧೂರಿಯಾಗಿ ನಡೆಯುತ್ತದೆ ಎಂದರು.

ಗ್ರಾಮದಲ್ಲಿ ಶ್ರೀಕಾಳಲಿಂಗೇಶ್ವರ ದೇವಾಲಯದಲ್ಲಿ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಸಾಗಿ ಶ್ರೀಬಸವೇಶ್ವರ, ಶ್ರೀಬೋರೇಶ್ವರ ಮತ್ತು ಗ್ರಾಮದೇವತೆ ಮಾರಮ್ಮ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ, ಬಳಿಕ ಅಂಗಳದಲ್ಲಿ ಸಿಡಿ ಉತ್ಸವ-ಪೂಜಾ ಕೈಂಕರ್ಯಗಳು ನಡೆದು, ಇಷ್ಟಾರ್ಥ ಸಿದ್ಧಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಭಕ್ತ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಸಿಡಿ ಉತ್ಸವದಲ್ಲಿ ಮುಖಂಡರಾದ ಯಜಮಾನ್ ಕಾಳಪ್ಪ, ಕರಿಪುಟ್ಟಯ್ಯ, ಕೆ.ಎಸ್.ಸಿದ್ದರಾಜು, ಚಂಡಿಕಾಳಯ್ಯ, ಸಣ್ಣಪ್ಪ, ಎಂ.ಪಿ.ಸಿದ್ದಯ್ಯ(ಕಾದಲ್‌ಸಿದ್ದಪ್ಪ), ಅರ್ಚಕ ಮಹದೇವಸ್ವಾಮಿ, ಪ್ರಸನ್ನ, ಅವಿನಾಶ್, ಮಾದೇಶ, ಸಿದ್ದರಾಜು, ಶ್ರೀಧರ್, ವಿಜಯ್, ಶಿವಮಾದ್ ಮತ್ತು ಮಹಿಳೆಯರು ಮತ್ತಿತರರಿದ್ದರು.