ಪಟ್ಟಣದಲ್ಲಿ ಹಲವು ಸಾರ್ವಜನಿಕ ಸಮಸ್ಯೆಗಳ ಹಕ್ಕೋತ್ತಾಯಗಳಿಗೆ ಆಗ್ರಹಿಸಿ ಭೀಮಕೋರೆಂಗಾವ್ ವಿಜಯೋತ್ಸವವನ್ನು ಆಚರಿಸಲಾಯಿತು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪಟ್ಟಣದಿಂದ ಕೊಳ್ಳೇಗಾಲದವರೆಗೆ ಪಾದಯಾತ್ರೆ ನಡೆಸಿದರು. ಅಂಬೇಡ್ಕರ್ ಪ್ರತಿಮೆಗೆ ಮಾಡಿದರು.
ಕೊಳ್ಳೇಗಾಲ: ಪಟ್ಟಣದಲ್ಲಿ ಹಲವು ಸಾರ್ವಜನಿಕ ಸಮಸ್ಯೆಗಳ ಹಕ್ಕೋತ್ತಾಯಗಳಿಗೆ ಆಗ್ರಹಿಸಿ ಭೀಮಕೋರೆಂಗಾವ್ ವಿಜಯೋತ್ಸವವನ್ನು ಆಚರಿಸಲಾಯಿತು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪಟ್ಟಣದಿಂದ ಕೊಳ್ಳೇಗಾಲದವರೆಗೆ ಪಾದಯಾತ್ರೆ ನಡೆಸಿದರು. ಅಂಬೇಡ್ಕರ್ ಪ್ರತಿಮೆಗೆ ಮಾಡಿದರು.
ಸುಳ್ವಾಡಿ ವಿಷಪ್ರಸಾದ ಪ್ರಕರಣದಲ್ಲಿ ನೊಂದ ಜನರಿಗೆ ಸರ್ಕಾರ ವಸತಿ ಹಾಗೂ ಭೂಮಿ ನೀಡಬೇಕು. ಗ್ರಾಮಗಳಲ್ಲಿ ಸಾರಾಯಿ ನಿಷೇಧವಾಗಬೇಕು, ಕಡು ಬಡವರಿಗೆ ನೇರ ಸರ್ಕಾರಿ ಸೌಲಭ್ಯ ಸಿಗುವಂತಾಗಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ಕುಮಾರ್‌ಗೆ ಡಿಎಸ್ಎಸ್ ರಾಜ್ಯ ಸಂಘಟನಾ ಸಂಚಾಲಕ ಸಿದ್ದರಾಜು ಮನವಿ ಸಲ್ಲಿಸಿದರು.ಈ ವೇಳೆ ಜಿಲ್ಲಾ ಸಂಚಾಲಕ ಹಿಂಡಯ್ಯ, ತಾಲೂಕು ಸಂಚಾಲಕ ಚಿಕ್ಕದೊಡ್ಡಯ್ಯ, ಕಾಮಗೆರೆ ಸುಂದರಮ್ಮ, ಚಂದ್ರು ನರೀಪುರ ಯಳಂದೂರು ರಾಚಪ್ಪ, ಮುರುಗೇಸ್ ಎಂಜಿ ದೊಡ್ಡಿ, ಮಾದೇಶ ಮಾರ್ಟಳ್ಳಿ, ರಾಮಲಿಂಗಮ್, ಬಿದರಹಳ್ಳಿ ಮಹಿಳಾ ಸಂಘದ ಅಧ್ಯಕ್ಷ ಆಶಾ, ಮಾರ್ಟಳ್ಳಿ ಮಹಿಳಾ ಸಂಘದ ಅಧ್ಯಕ್ಷರು ಮಹೇಶ್ವರಿ, ಬೆಜಿಮಿನ್ ಇನ್ನಿತರಿದ್ದರು.2ಕೆಜಿಎಲ್8
ಕೊಳ್ಳೇಗಾಲದಲ್ಲಿ ಪಾದಯಾತ್ರೆ ಬಳಿಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಅಂಬೇಡ್ಕರ್ ಪ್ರತಿಮೆಗೆ ಬಳಿ ಭೀಮಕೋರೆಂಗಾವ್ ವಿಜಯೋತ್ಸವ ಆಚರಿಸಿದರು.