ಸಾರಾಂಶ
ಕೃರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ಮಂಗಳಾರತಿ ಜರುಗಿತು. ಗ್ರಾಮದೆಲ್ಲೆಡೆ ಪಲ್ಲಕ್ಕಿ ಮೆರವಣಿಗೆ, ಕುಂಭ ಕಳಸ ಮೆರವಣಿಗೆ ಮಹಾಪ್ರಸಾದ ವಿತರಣೆ ನಡೆಯಿತು.
ಕನ್ನಡಪ್ರಭ ವಾರ್ತೆ ಆಲಮೇಲ
ತಾಲೂಕಿನ ಸುಕ್ಷೇತ್ರ ಮಂಗಳೂರು ಭೀಮಾಶಂಕರ ಮಹಾರಾಜರ ರಥೋತ್ಸವ ಭಕ್ತರ ಹರ್ಷೋದ್ಘಾರದ ಮಧ್ಯೆ ಶುಕ್ರವಾರ ಸಂಜೆ ಸಂಭ್ರಮದಿಂದ ಜರುಗಿತು.ಬೆಳಗಿನ ಜಾವ ಕೃರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ಮಂಗಳಾರತಿ ಜರುಗಿತು. ಗ್ರಾಮದೆಲ್ಲೆಡೆ ಪಲ್ಲಕ್ಕಿ ಮೆರವಣಿಗೆ, ಕುಂಭ ಕಳಸ ಮೆರವಣಿಗೆ ಮಹಾಪ್ರಸಾದ ವಿತರಣೆ ನಡೆಯಿತು. ಪಟಾಕಿ, ಬ್ಯಾಂಜೋ, ಚಿಟ್ಟಹಲಿಗೆ ಮೇಳ, ಪುರವಂತರ ಸೇವೆಯೊಂದಿಗೆ ಸಂಭ್ರಮದಿಂದ ರಥೋತ್ಸವ ಜರುಗಿತು.
ಯಂಕಂಚಿಯ ಅಭಿನವ ರುದ್ರಮುನಿ ಶಿವಾಚಾರ್ಯರು, ಬಮ್ಮನಹಳ್ಳಿಯ ಭೀಮಾಶಂಕರ ಮಠದ ಸದ್ಗುರು ನರಸಿಂಹ ಮಾಹಾರಾಜರು,ಮಲ್ಲಯ್ಯ ಸಿ. ಹಿರೇಮಠ, ಪುರಾಣಿಕರಾದ ಮಾಹಾಂತೇಶ ಶಾಸ್ತ್ರಿಗಳು ತದ್ದೇವಾಡಿ, ಈರಣ್ಣ ಶಾಸ್ತ್ರಿಗಳು ಚಿಕ್ಕರೂಗಿ, ವಿಠ್ಠಲ ಕೊಳ್ಳುರ, ಭಗವಂತ ರೇವೂರ, ಎಸ್.ಆರ್. ರೇವೂರ, ಆರ್.ಎಸ್. ಮಾವೂರ, ಎಸ್.ಎಂ. ಮಾರ್ಯಾಳ, ಡಿ.ಎಸ್. ಮಾವೂರ, ವಿ.ಜಿ. ಸಿಂಪಿ, ಭೀಮಾಶಂಕರ ಮಾವೂರ ಇದ್ದರು. ಸುತ್ತಮುತ್ತಲಿನ ಅನೇಕ ಗ್ರಾಮಗಳ ಸಾವಿರಾರು ಜನ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದರು.