ಪ್ರಿಯಾಂಕಾ ಪರ ಭೀಮಗೋಳ ಬಿರುಸಿನ ಮತಪ್ರಚಾರ

| Published : May 02 2024, 12:24 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಹುಕ್ಕೇರಿ: ತಾಲೂಕಿನ ಹತ್ತರಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಂದಿರಾ ನಗರ, ಆನಂದಪುರ, ಅಂಬೇಡ್ಕರ ನಗರ, ಎಸ್ಸಿ ಕಾಲೋನಿಗಳಲ್ಲಿ ಗ್ರಾಮ ಪಂಚಾಯತಿ ಸದಸ್ಯ ಉಮೇಶ ಭೀಮಗೋಳ ನೇತೃತ್ವದಲ್ಲಿ ಕಾಂಗ್ರೆಸ್ ಪರ ಬಿರುಸಿನ ಮತಪ್ರಚಾರ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ತಾಲೂಕಿನ ಹತ್ತರಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಂದಿರಾ ನಗರ, ಆನಂದಪುರ, ಅಂಬೇಡ್ಕರ ನಗರ, ಎಸ್ಸಿ ಕಾಲೋನಿಗಳಲ್ಲಿ ಗ್ರಾಮ ಪಂಚಾಯತಿ ಸದಸ್ಯ ಉಮೇಶ ಭೀಮಗೋಳ ನೇತೃತ್ವದಲ್ಲಿ ಕಾಂಗ್ರೆಸ್ ಪರ ಬಿರುಸಿನ ಮತಪ್ರಚಾರ ನಡೆಸಲಾಯಿತು.

ಪ್ರತಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಿಸಿ ಚಿಕ್ಕೋಡಿ ಕ್ಷೇತ್ರದ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಪರ ಮತಚಲಾಯಿಸುವಂತೆ ಕಾರ್ಯಕರ್ತರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಉಮೇಶ ಭೀಮಗೋಳ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಗೆಲುವಿಗೆ ಎಲ್ಲ ರೀತಿಯಲ್ಲಿ ಶ್ರಮ ವಹಿಸಲಾಗಿದೆ. ಚುನಾವಣೆ ಘೋಷಣೆಯಾದ ದಿನದಿಂದಲೇ ಕ್ಷೇತ್ರದಲ್ಲಿ ಕಾಂಗ್ರೆಸ್ ಟೀಮ್ ವರ್ಕ್ ನಡೆಸಿದೆ. ಕ್ಷೇತ್ರದ ಮತದಾರರು ಪ್ರಿಯಾಂಕಾ ಪರ ಒಲವು ತೋರುತ್ತಿದ್ದು ಕಾಂಗ್ರೆಸ್ ಗೆಲುವು ಖಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖಂಡರಾದ ಉದಯ ಹಾಲದೇವರಮಠ, ಸಚಿನ ದಡ್ಡಿ, ಅಶೋಕ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.