ನಗರದಲ್ಲಿ ಈ ತಿಂಗಳ 26 ರಿಂದ ನಡೆಯಲಿರುವ ವೀರಲೋಕ ಪುಸ್ತಕ ಸಂತೆ ಯ ಪುಸ್ತಕ ಹಬ್ಬದ ಅಂಗವಾಗಿ ಗುರುವಾರ ಗಾಜಿನ ಮನೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದಲಿಂಗಪ್ಪ ಅವರು ಪುಸ್ತಕ ಸಂತೆಯ ಮೊದಲ ಮಳಿಗೆಗೆ ಭೂಮಿಪೂಜೆ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ತುಮಕೂರುನಗರದಲ್ಲಿ ಈ ತಿಂಗಳ 26 ರಿಂದ ನಡೆಯಲಿರುವ ವೀರಲೋಕ ಪುಸ್ತಕ ಸಂತೆ ಯ ಪುಸ್ತಕ ಹಬ್ಬದ ಅಂಗವಾಗಿ ಗುರುವಾರ ಗಾಜಿನ ಮನೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದಲಿಂಗಪ್ಪ ಅವರು ಪುಸ್ತಕ ಸಂತೆಯ ಮೊದಲ ಮಳಿಗೆಗೆ ಭೂಮಿಪೂಜೆ ನೆರವೇರಿಸಿದರು.ಈ ವೇಳೆ ಮಾತನಾಡಿದ ಅವರು, ತುಮಕೂರಿನಲ್ಲಿ ಪುಸ್ತಕಗಳ ಮೂಲಕ ಕನ್ನಡವನ್ನು ಕಟ್ಟುವ ಸತ್ಕಾರ್ಯ ನಡೆಯುತ್ತಿದೆ. ಭಾಷೆ ಮತ್ತು ಸಾಹಿತ್ಯವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಪರಮ ಕರ್ತವ್ಯವಾಗಿದೆ ಎಂದರು.
ಪುಸ್ತಕ ಸಂತೆಯ ಸಂಚಾಲಕ ಆರ್.ಕೆ ಶ್ರೀನಿವಾಸ ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲಿ ಪುಸ್ತಕಗಳ ಓದು ಅತ್ಯಗತ್ಯವಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಂತೆಗೆ ಆಗಮಿಸಬೇಕು ಮತ್ತು ತಮಗೆ ಇಷ್ಟವಾದ ಪುಸ್ತಕಗಳನ್ನು ಖರೀದಿಸುವ ಮೂಲಕ ನಮ್ಮ ಶ್ರೀಮಂತ ಪುಸ್ತಕ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಜವಾಬ್ದಾರಿಯನ್ನು ಹೊರಬೇಕು ಎಂದು ಕರೆಕೊಟ್ಟರು. ವಿಶೇಷವಾಗಿ ಪೋಷಕರುತಮ್ಮ ಮಕ್ಕಳನ್ನು ಈ ಸಂತೆಗೆ ಕರೆತಂದು, ಅವರಿಗೆ ಪುಸ್ತಕಗಳ ಅದ್ಭುತ ಲೋಕವನ್ನು ಪ್ರತ್ಯಕ್ಷವಾಗಿ ಪರಿಚಯಿಸಿಕೊಡಬೇಕು ಎಂದು ಹೇಳಿದರು.ಸಂಘಟಕರಾದ ರೇವಣಸಿದ್ದಪ್ಪ, ಮಲ್ಲಿಕಾರ್ಜುನಕೆಂಕೆರೆ, ಗು ರುನಾಥ ರಾಜಗೀರ, ಅನಂತಕುಣಿಗಲ್, ಜ್ಯೋತಿ, ಸೌಮ್ಯ, ನರೇಂದ್ರಬಾಬು, ಶೈಲಜಾ, ರಕ್ಷಿತ್‌ಕುಮಾರ, ಗೋವರ್ಧನ, ರಾಧ, ಚಂದನಾ, ಶಿವಕುಮಾರ್, ಜಗದೀಶ್‌ಗೌಡ, ನಂದನ, ಸಿದ್ಧೇಗೌಡ ಮೊದಲಾದವರು ಈ ವೇಳೆ ಹಾಜರಿದ್ದರು.