23ಕ್ಕೆ 400 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ

| N/A | Published : May 10 2025, 01:18 AM IST / Updated: May 10 2025, 01:56 PM IST

23ಕ್ಕೆ 400 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಭೇರ್ಯ ಪಟ್ಟಣದ ರೇಡಿಯೋ ಮೈದಾನದಲ್ಲಿ ಮೇ 23ರಂದು ಸುಮಾರು 400 ಕೋಟೆಗೂ ಅಧಿಕ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ವಸಚಿವ ಸಂಪುಟದ ಸಚಿವರು ಆಗಮಿಸಲಿದ್ದಾರೆ.

  ಭೇರ್ಯ : ಪಟ್ಟಣದ ರೇಡಿಯೋ ಮೈದಾನದಲ್ಲಿ ಮೇ 23ರಂದು ಸುಮಾರು 400 ಕೋಟೆಗೂ ಅಧಿಕ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ವಸಚಿವ ಸಂಪುಟದ ಸಚಿವರು ಆಗಮಿಸಲಿದ್ದಾರೆ ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.

ತಾಲೂಕಿನ ಗಂಧನಹಳ್ಳಿ ಗ್ರಾಮದಲ್ಲಿ 2.25 ಕೋಟೆ ರು. ಮೊತ್ತದ ವಿವಿಧ ರಸ್ತೆ, ಚರಂಡಿ ಅಭಿವೃದ್ಧಿಗೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಸಾಲಿಗ್ರಾಮ ಮತ್ತು ಕೆ.ಆರ್. ನಗರ ಅವಳಿ ತಾಲೂಕುಗಳಿಗೆ ತರಲಾದ ಸುಮಾರು 400 ಕೋಟಿಗೂ ಅಧಿಕ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಂದು ಭೂಮಿ ಪೂಜೆ ನಡೆಯಲಿದೆ. ಸಾಲಿಗ್ರಾಮ ಮತ್ತು ಕೆ.ಆರ್. ನಗರ ತಾಲೂಕಿನ ಅಭಿವೃದ್ಧಿಗೆ ನನ್ನ ಎರಡು ವರ್ಷಗಳ ಅವಧಿಯಲ್ಲಿ 700 ಕೋಟಿಗೂ ಅಧಿಕ ಅನುದಾನ ತರಲಾಗಿದೆ ಎಂದರು.

ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸಲು ಅಮೃತ 2.0 ಯೋಜನೆಯಡಿ ರು. 30 ಕೋಟಿ, ಒಳಚರಂಡಿ ಯೋಜನೆಗೆ ರು. 20 ಕೋಟಿ, ಸಾರ್ವಜಿನಿಕ ಆಸ್ಪತ್ರೆ ಅಭಿವೃದ್ಧಿಗೆ 1 ಕೋಟಿ, ಕೃಷ್ಣರಾಜೇಂದ್ರ ಕ್ರೀಡಾಂಗಣದ ಅಭಿವೃದ್ಧಿಗೆ 42 ಕೋಟಿ ಅನುದಾನ ಮಂಜೂರಾಗಿದೆ ಎಂದರು.

ಇದಕ್ಕೂ ಮುನ್ನ ತಾಲೂಕಿನ ಬಾಲೂರು ಗ್ರಾಮದಲ್ಲಿ 15 ಲಕ್ಷ ಮೊತ್ತದ ರಸ್ತೆ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ಗ್ರಾಪಂ ಅಧ್ಯಕ್ಷೆ ಮಾದೇವಿ ಬಲರಾಂ, ವೆಂಕಟೇಶ್, ಜಿಲ್ಲಾ ಕುರುಬರ ಸಂಘದ ನಿರ್ದೇಶಕ ಹೇಮಂತ್, ಕಾಂಗ್ರೆಸ್ ಮುಖಂಡರಾದ ಪ್ರೇಮಶಿವಣ್ಣ, ತಾಪಂ ಮಾಜಿ ಸದಸ್ಯರಾದ ಜಿ.ಎಸ್. ಮಂಜುನಾಥ, ಜಿ.ಕೆ. ಶಿವಣ್ಣ, ಗ್ರಾಪಂ ಸದಸ್ಯರಾದ ಹರೀಶ್, ಲೋಕೇಶ್, ಕುಮಾರ್, ಜಿ.ಸಿ. ಸತೀಶ, ಲಕ್ಕೇಗೌಡ ಇದ್ದರು.

ಕೆಎಸ್‌ಆರ್‌ಟಿಸಿ ನೌಕರರ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಎಂ.ಸುರೇಶ್‌, ಎಚ್‌.ಪಿ.ಪ್ರವೀಣ್‌ ಆಯ್ಕೆ

  ಕೆ.ಆರ್.ನಗರ : ‌ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ವಿವಿಧೋದ್ದೇಶ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಎಂ.ಸುರೇಶ್ ಮೂರನೇ ಬಾರಿಗೆ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಎಚ್.ಪಿ.ಪ್ರವೀಣ್ ಚುನಾಯಿತರಾದರು.

2025-30 ಐದು ವರ್ಷಗಳ ಅವದಿಗೆ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ‌ನಿರ್ದೇಶಕರು ಆಯ್ಕೆಯಾಗಿದ್ದು, ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಳಮ್ಮನಕೊಪ್ಪಲು‌ ಎ.ಸುರೇಶ್ ಹಾಗೂ ಪ್ರೇಮ್ ಕುಮಾರ್, ಉಪಾಧ್ಯಕ್ಷ ಸ್ಥಾನಕ್ಕೆ ಎಚ್.ಪಿ.ಪ್ರವೀಣ್, ಜಿ.ಎಸ್.ಚೇತನ್ ಕುಮಾರ್ ನಾಮಪತ್ರ ಸಲ್ಲಿಸಿದ್ದರು.

ಅಧ್ಯಕ್ಷರಾಗಿ ಎಂ.ಸುರೇಶ್ 10 ಮತಗಳನ್ನು ಪಡೆದು ಅಧ್ಯಕ್ಷರಾಗಿ, ಎಚ್.ಪಿ.ಪ್ರವೀಣ್ 10 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು ಎಂದು ಸಹಕಾರ ಇಲಾಖೆಯ ಚುನಾವಣಾಧಿಕಾರಿ ಕೆ.ಎಲ್.ಸವಿತ ಘೋಷಿಸಿದರು.

ಸಂಘದ ಸಿಇಒ ರಾಜು, ಸಹ ಕಾರ್ಯದರ್ಶಿ ಎಂ.ಎಸ್. ಶ್ರೀನಿವಾಸ್, ಗುಮಾಸ್ತ ಕೆ.ಎಸ್.ಗುರು ಸಹಕಾರ ನೀಡಿದರು.

ನಿರ್ದೇಶಕರಾದ ಸಿ.ಸಿ.ಮಂಜನಾಥ್, ಬಿ.ಕೆ.ಪೂರ್ಣಯ್ಯ, ದೇವರಾಜು, ಎಸ್.ರೂಪ, ಸಿ.ರಾಧ, ಎನ್.ವೆಂಕಟೇಶ್, ಆರ್. ಅಶೋಕ್, ಎಂ.ಡಿ.ಗಿರೀಶ್, ಶರಣ ಅಳಗುಂದಗಿ, ಎಂ.ಸಿ.ಹರೀಶ್ ಕುಮಾರ್, ತಾಂಡವಮೂರ್ತಿ, ಪಿ.ಅಶೋಕ್, ಶಿವನಂದ ಕುಂಬಾರ ಭಾಗವಹಿಸಿದ್ದರು.