ಎಮ್ಮೆಮಾಡು ಗ್ರಾಮದಲ್ಲಿ 35ಲಕ್ಷ ರು. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಮತ್ತು ಪೂರ್ಣಗೊಂಡಿರುವ ಕಾಮಗಾರಿಗಳ ಉದ್ಘಾಟನೆ ಯನ್ನು ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ. ಎಸ್. ಪೊನ್ನಣ್ಣ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿಗೆ ಸಮೀಪದ ಎಮ್ಮೆಮಾಡು ಗ್ರಾಮದಲ್ಲಿ 35ಲಕ್ಷ ರು. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಮತ್ತು ಪೂರ್ಣಗೊಂಡಿರುವ ಕಾಮಗಾರಿಗಳ ಉದ್ಘಾಟನೆ ಯನ್ನು ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ. ಎಸ್. ಪೊನ್ನಣ್ಣ ನೆರವೇರಿಸಿದರು.ಎಮ್ಮೆಮಾಡು ಭಾಗದಲ್ಲಿ ಶಾಸಕರ ರು. 35 ಲಕ್ಷ ವೆಚ್ಚದ ಅನುದಾನದಲ್ಲಿ ಪ್ರಾರಂಭವಾಗಲಿರುವ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ನೆರವೇರಿಸಿದ ಬಳಿಕ, ಈಗಾಗಲೇ ಈ ಭಾಗದಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮವನ್ನು ನೆರವೇರಿಸಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಉಪ ಅಧ್ಯಕ್ಷರಾದ ಐಸಮ್ಮ, ಸದಸ್ಯರಾದ ಗಪುರ್, ಯೂಸಫ್, ಜಮಾಯತ್ ಅಧ್ಯಕ್ಷ ಹುಸೇನ್ ಸಖಾಫಿ ಹಾಗೂ ಆಡಳಿತ ಮಂಡಳಿ, ಶಾದುಲಿ ಹಾಜಿ, ಹಂಸ ಪಡಿಯಾನಿ, ಅಶ್ರಫ್ ಬಿ ಯು, ಕೆ ಎ ಇಸ್ಮಾಯಿಲ್, ಡಿಸಿಸಿ ಉಪಾಧ್ಯಕ್ಷ ಎಂಎಚ್ ಅಬ್ದುಲ್ ರೆಹಮಾನ್ , ಮಚ್ಚುರ ರವೀಂದ್ರ, ಮಾಚೇಟೀರ

ಕುಶಾಲಪ್ಪ, ಮನವಟ್ಟಿರ ದಯಾ ಕುಟ್ಟಪ್ಪ, ಅಪ್ಪಚೆಟ್ಟೋಳಂಡ ಮಿಥುನ್ , ಐಸ . ಮಾಚಯ್ಯ, ಪಡಿಯಾನಿ ಜಮಾತ್ ಪದಾಧಿಕಾರಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.