ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕು ಒಕ್ಕಲಿಗರ ಸಂಘದ ನೂತನ ಕಚೇರಿ ನಿರ್ಮಾಣಕ್ಕೆ ವಾರದೊಳಗೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಎಂ.ಎಲ್.ದಿನೇಶ್ ತಿಳಿಸಿದರು.

ಪಟ್ಟಣದ ಸಂಘದ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸಂಘಕ್ಕೆ ಸಂಬಂಧಪಟ್ಟ ನಿವೇಶನದ ದಾಖಲಾತಿ ಪತ್ರಗಳನ್ನು ಪದಾಧಿಕಾರಿಗಳಿಗೆ ಹಸ್ತಾಂತರಿಸಿ ಮಾತನಾಡಿ, ಈಗಾಗಲೇ ನೂತನ ಕಚೇರಿ ನಿರ್ಮಿಸಲು ಪಟ್ಟಣದ ಪಿಕಾರ್ಡ್ ಬ್ಯಾಂಕ್ ಬಳಿ ಇರುವ ಪುರಸಭೆ ವ್ಯಾಪ್ತಿಯ 20*30ರ ನಿವೇಶನಕ್ಕೆ ಪುರಸಭೆಯಿಂದ ಇ-ಖಾತೆ ನೋಂದಾವಣೆಯಾಗಿ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ಅನುಮತಿ ಪತ್ರ ಪಡೆಯಲಾಗಿದೆ ಎಂದರು.

ಹಲವು ವರ್ಷಗಳಿಂದ ಬೇಡಿಕೆ ಇದ್ದ ಒಕ್ಕಲಿಗ ಭವನ ನಿರ್ಮಾಣ ಮಾಡಲು ಹಳೆ ಸಂತೆ ಮೈದಾನದ ಬಳಿ ಇರುವ ಜಾಗವನ್ನು ಗುರುತಿಸಿ ಒಕ್ಕಲಿಗ ಸಮುದಾಯ ಭವನ ನಿರ್ಮಾಣಕ್ಕೆ ಸಿದ್ಧತೆಗಳೂ ಸಹ ನಡೆಯುತ್ತಿದೆ. ಅದಕ್ಕೆ ಇನ್ನಷ್ಟು ಮೂಲ ದಾಖಲೆಗಳ ಒದಗಿಸಿ ಅದಕ್ಕೆ ತಗಲುವ ವೆಚ್ಚವನ್ನು ಸಹ ಭರಿಸಲು ಸಂಘ ಮುಂದಾಗಿದೆ. ಶೀಘ್ರ ತಾಲೂಕು ಒಕ್ಕಲಿಗರ ಸಮುದಾಯ ಭವನ ನಿರ್ಮಾಣವಾಗಲಿದೆ ಎಂದು ಭರವಸೆ ನೀಡಿದರು.

ಇದೇ ವೇಳೆ ಪುರಸಭೆಯಿಂದ ಸಂಘದ ನಿವೇಶನದ ದಾಖಲಾತಿಗಳ ಒದಗಿಸಿಕೊಡುವಲ್ಲಿ ಶ್ರಮವಹಿಸಿದ್ದ ಅಧ್ಯಕ್ಷ ಎಂ.ಎಲ್. ದಿನೇಶ್ ಅವರನ್ನು ಸಂಘದ ಪದಾಧಿಕಾರಿಗಳು ಅಭಿನಂದಿಸಿದರು.


ಈ ವೇಳೆ ಸಂಘದ ಕಾರ್ಯಾಧ್ಯಕ್ಷ ಶಿವಸ್ವಾಮಿ, ಪ್ರಧಾನ ಕಾರ್ಯದರ್ಶಿ ಗುರುಮೂರ್ತಿ, ಖಜಾಂಚಿ ಕೆ.ಜೆ.ರವಿಶಂಕರ್, ಮಾಜಿ ಅಧ್ಯಕ್ಷ ಚಂದ್ರಶೇಖರ್, ಸಹ ಕಾರ್ಯದರ್ಶಿ ಪ್ರವೀಣ್ ಸಬ್ಬನ ಕುಪ್ಪೆ, ಬಂಕ್ ಪ್ರಸನ್ನ, ಪದಾಧಿಕಾರಿಗಳಾದ ಟಿ.ಶ್ರೀಧರ್ ಮೇಳಾಪುರ, ತಡಗವಾಡಿ ಯತೀಶ್, ಗಂಜಾಂ ಯೋಗೇಶ್, ಸಿ.ಎಂ. ಮರೀಗೌಡ, ದಯಾನಂದ್ ಸೇರಿದಂತೆ ಇತರರು ಇದ್ದರು.ಬೆಳ್ಳಿ ಸಾರೋಟಿನಲ್ಲಿ ಪಟ್ಟಾಭಿರಾಮದೇವರ ಉತ್ಸವಕಿಕ್ಕೇರಿ: ಪಟ್ಟಣದಲ್ಲಿ ಪಟ್ಟಾಭಿರಾಮದೇವರ ಉತ್ಸವ ಬೆಳ್ಳಿ ಸಾರೋಟಿನ ರಥದಲ್ಲಿ ವಿಜೃಂಭಣೆಯಿಂದ ಜರುಗಿತು.ಹಳೆಭಜನೆಮನೆ ಕುರುಹಿನಶೆಟ್ಟಿ ಸಮಾಜದಿಂದ ರಾಮನವಮಿ ಅಂಗವಾಗಿ 9 ದಿನಗಳ ಕಾಲ ನಿತ್ಯವೂ ರಾಮನಾಮ ಪಾರಾಯಣ, ರಾಮನಾಮ ಕೀರ್ತನೆ, ಭಜನೆಗಳು ನಡೆದವು. ನಿತ್ಯವೂ ಸಂಗೀತ ಕಾರ್ಯಕ್ರಮಗಳು ನಡೆದವು.

ರಾಮದೇವರನ್ನು ಸೀತಾದೇವಿಯೊಂದಿಗೆ ಪಟ್ಟಾಭಿಷೇಕದಲ್ಲಿ ಕೂರಿಸಿ ವಿವಿಧ ಪೂಜೆಗಳನ್ನು ನೆರವೇರಿಸಲಾಯಿತು. ಪಟ್ಟಣದ ಪ್ರಮುಖ ಬೀದಿಯಲ್ಲಿ ವಿದ್ಯುತ್‌ದೀಪ ಅಲಂಕಾರ, ಮಂಗಳವಾದ್ಯದೊಂದಿಗೆ ಮೆರವಣಿಗೆ ಮಾಡಲಾಯಿತು.ವಿವಿಧ ಪರಿಮಳ ಪುಷ್ಪಗಳಿಂದ ಅಲಂಕೃತವಾಗಿದ್ದ ಪಟ್ಟಾಭಿರಾಮದೇವರ ಮೂರ್ತಿಯನ್ನು ಭಕ್ತರು ದರ್ಶನ ಪಡೆದು ಹಣ್ಣು ಕಾಯಿ ಅರ್ಪಿಸಿ ಕೃತಾರ್ಥರಾದರು. ಸಮುದಾಯದ ಮುಖಂಡರು ಜೈಶ್ರೀರಾಮ್ ಎಂದು ಜೈಕಾರ ಹಾಕುತ್ತ ಭಕ್ತಿ ಮೆರೆದರು.

ಕಾರ್ಯಕ್ರಮದ ಅಂಗವಾಗಿ ನಾದಸ್ವರ, ಬಾಣ ಬಿರುಸು ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಮುಖಂಡರಾದ ಅಣ್ಣಯ್ಯ, ಕೆ.ವಿ. ಅರುಣ್‌ಕುಮಾರ್, ಹನುಮಂತಶೆಟ್ಟಿ, ಶ್ರೀನಿವಾಸ್, ಹರ್ಷ, ಕೃಷ್ಣಶೆಟ್ಟಿ, ಶ್ಯಾಮ್‌ಪ್ರಸಾದ್, ಶಂಕರ್, ಜವರಾಯಶೆಟ್ಟಿ, ಕುಮಾರ್, ನಾಗೇಶ್, ಬಾಲಸುಬ್ರಹ್ಮಣ್ಯ, ವೆಂಕಟೇಶ್ ಇದ್ದರು.