ಸಿ.ಟಿ.ರವಿ ಬಂಧನಕ್ಕೆ ಭೋವಿ ಸಮಾಜದಿಂದ ಆಗ್ರಹ

| Published : Mar 29 2024, 12:53 AM IST

ಸಾರಾಂಶ

ಸಚಿವ ಶಿವರಾಜ್ ತಂಗಡಗಿ ಮತ್ತು ಅವರ ತಾಯಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯನ್ನು ಬಂಧಿಸಿ ಎಂದು ತಾಲೂಕು ಭೋವಿ ಸಮಾಜದವತಿಯಿಂದ ಗುರುವಾರ ತಹಸೀಲ್ದಾರ್‌ ರಾಜೇಶ್ ಕುಮಾರ್ ಅವರಿಗೆ ಮತ್ತು ಪೊಲೀಸ್ ಉಪ ಅಧೀಕ್ಷಕರ ಕಚೇರಿಗೆ ಮನವಿ ಸಲ್ಲಿಸಲಾಯಿತು.

ಹಿರಿಯೂರು: ಸಚಿವ ಶಿವರಾಜ್ ತಂಗಡಗಿ ಮತ್ತು ಅವರ ತಾಯಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯನ್ನು ಬಂಧಿಸಿ ಎಂದು ತಾಲೂಕು ಭೋವಿ ಸಮಾಜದವತಿಯಿಂದ ಗುರುವಾರ ತಹಸೀಲ್ದಾರ್‌ ರಾಜೇಶ್ ಕುಮಾರ್ ಅವರಿಗೆ ಮತ್ತು ಪೊಲೀಸ್ ಉಪ ಅಧೀಕ್ಷಕರ ಕಚೇರಿಗೆ ಮನವಿ ಸಲ್ಲಿಸಲಾಯಿತು.

ಬಿಜೆಪಿ ನಾಯಕ ಸಿ.ಟಿ.ರವಿ ಅವರು ಪರಿಶಿಷ್ಟ ಜನಾಂಗದ ಹೆಣ್ಣು ಮಗಳ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದು, ಸಚಿವ ಶಿವರಾಜ್ ತಂಗಡಗಿ ಅವರನ್ನು ನಿಮ್ಮಪ್ಪನಿಗೆ ಹುಟ್ಟಿದ್ದರೆ ಎಂಬಂತಹ ಮಾತುಗಳನ್ನಾಡಿದ್ದಾರೆ. ಬರೀ ಭೋವಿ ಜನಾಂಗದ ಹೆಣ್ಣು ಮಗಳಿಗೆ ಮಾತ್ರವಲ್ಲದೆ ಸಮಾಜದ ಎಲ್ಲಾ ತಾಯಂದಿರಿಗೂ ಅವಮಾನವಾಗುವಂತಹ ಮಾತುಗಳನ್ನಾಡಿದ್ದು ಸಮಾಜದಲ್ಲಿ ಅಶಾಂತಿ ಉಂಟು ಮಾಡುವಂತಹ ಹೇಳಿಕೆ ನೀಡಿರುವ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸಬೇಕು. ಸಂವಿಧಾನದ ಆಶಯಗಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿರುವ ಸಚಿವ ತಂಗಡಗಿಯವರು ಜನಾಂಗದ ಏಕೈಕ ಸಚಿವರಾಗಿದ್ದು ಅವರ ತೇಜೋವಧೆ ಮಾಡುವಂತಹ ಮಾತನಾಡಿರುವುದು ದುರಂತದ ಸಂಗತಿಯಾಗಿದ್ದು ಆದಷ್ಟು ಶೀಘ್ರ ಸಿ.ಟಿ.ರವಿ ಅವರನ್ನು ಬಂಧಿಸಿ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ತಾಲೂಕು ಭೋವಿ ಸಮಾಜದ ಗೌರವಾಧ್ಯಕ್ಷ ಕೃಷ್ಣಮೂರ್ತಿ, ಉಪಾಧ್ಯಕ್ಷ ವೆಂಕಟೇಶ್ ಎಳ್ನೀರ್, ಗೋಪಾಲಪ್ಪ, ಈಶ್ವರಪ್ಪ, ನಾಗೇಶ್, ಭೂತೇಶ್, ಭೂತಣ್ಣ, ವಕೀಲ ರಂಗಸ್ವಾಮಿ, ಮೋಹನ್, ಕಣ್ವಪ್ಪ, ರಮೇಶ್, ರಾಜು, ಸುರೇಶ್, ತಿಮ್ಮಣ್ಣ, ರಾಜಪ್ಪ, ಹನುಮಂತಪ್ಪ, ದಾಸ ಬೋವಿ, ರಂಗಸ್ವಾಮಿ, ರಾಜಪ್ಪ ಮುಂತಾದವರು ಹಾಜರಿದ್ದರು.