ಸಾರಾಂಶ
ಎಸ್. ಎಂ. ಭೂಮರೆಡ್ಡಿ ಪದವಿ ಪೂರ್ವ ಮಹಾವಿದ್ಯಾಲಯ ವಿದ್ಯಾರ್ಥಿಗಳು 2024-25 ನೇ ಸಾಲಿನ ಪದವಿಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಉಪನ್ಯಾಸಕ ಸಂತೋಷ ವಾಲಿಕಾರ ತಿಳಿಸಿದ್ದಾರೆ.
ಗಜೇಂದ್ರಗಡ: ಎಸ್. ಎಂ. ಭೂಮರೆಡ್ಡಿ ಪದವಿ ಪೂರ್ವ ಮಹಾವಿದ್ಯಾಲಯ ವಿದ್ಯಾರ್ಥಿಗಳು 2024-25 ನೇ ಸಾಲಿನ ಪದವಿಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಉಪನ್ಯಾಸಕ ಸಂತೋಷ ವಾಲಿಕಾರ ತಿಳಿಸಿದ್ದಾರೆ.
ಬಾಲಕರ ವಿಭಾಗದಲ್ಲಿ ಗುಡ್ಡಗಾಡು ಓಟ ಮಹೇಶ್ ಹೊಸಮನಿ ದ್ವಿತೀಯ ಸ್ಥಾನ, ಮೇಘರಾಜ್ ಲಮಾಣಿ ಐದನೇ ಸ್ಥಾನ , 3000 ಮೀ. ಓಟದಲ್ಲಿ ಮೇಘರಾಜ್ ಮೇಟಿ ಪ್ರಥಮ, 1500 ಮೀ. ಓಟದಲ್ಲಿ ನೀಲಪ್ಪ ಜಗ್ಲರ್ ದ್ವಿತೀಯ, ಚಕ್ರ ಎಸೆತದಲ್ಲಿ ಶ್ರೀಧರ್ ಮಾದರ್ ಪ್ರಥಮ, ಬಾಲಕಿಯರ ವಿಭಾಗದಲ್ಲಿ ಜ್ಯೋತಿ ಖಾಟಿ ಗುಂಡು ಎಸೆತದಲ್ಲಿ ಪ್ರಥಮ, 3000 ಮೀ. ನಡಿಗೆ ಲಲಿತಾ ಕತ್ತಿ ಪ್ರಥಮ, ಉಮಾ ಮಾಳೋತ್ತರ ಬರ್ಜಿ ಎಸೆತದಲ್ಲಿ ಪ್ರಥಮ, ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕ್ರೀಡಾಪಟುಗಳಿಗೆ ಪದವಿ ಕಾಲೇಜು ಪ್ರಾಚಾರ್ಯ ಎಸ್. ಎಸ್. ಶಿವರೆಡ್ಡಿ, ಪಿಯು ಪ್ರಾಚಾರ್ಯ ಜಿ.ಬಿ. ಗುಡಿಮನಿ, ಉಪನ್ಯಾಸಕ ಎಸ್.ಕೆ. ಕಟ್ಟಿಮನಿ, ಸಂತೋಷ ವಾಲಿಕಾರ ಅಭಿನಂದನೆ ಸಲ್ಲಿಸಿದ್ದಾರೆ.