ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕೆ ಭೂಮಿಪೂಜೆ

| Published : Jul 14 2024, 01:31 AM IST

ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕೆ ಭೂಮಿಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಹತ್ತಿರ ಇಂದಿರಾ ಕ್ಯಾಂಟೀನ್ ನಿರ್ಮಾಣದ ಕಾಮಗಾರಿಗೆ ಶಾಸಕ ಎಚ್.ವೈ.ಮೇಟಿ ಭೂಮಿ ಪೂಜೆ ನೆರವೇರಿಸಿದರು.

ಕಮತಗಿ: ಪಟ್ಟಣದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಹತ್ತಿರ ಇಂದಿರಾ ಕ್ಯಾಂಟೀನ್‌ ನಿರ್ಮಾಣದ ಕಾಮಗಾರಿಗೆ ಶಾಸಕ ಎಚ್.ವೈ.ಮೇಟಿ ಭೂಮಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಇಂದಿನ ದುಬಾರಿ ಯುಗದಲ್ಲಿ ಇಂದಿರಾ ಕ್ಯಾಂಟೀನ್‌ ಬಡವರ ಹಸಿವನ್ನು ನೀಗಿಸುವ ಕೇಂದ್ರವಾಗಿದೆ. ಆದ್ದರಿಂದ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ರಮೇಶ ಎಸ್ ಜಮಖಂಡಿ, ಬಸವರಾಜ ಕುಂಬಾಳವತಿ, ಗುರಲಿಂಗಪ್ಪ ಪಾಟೀಲ, ದೇವಿಪ್ರಸಾದ ನಿಂಬಲಗುಂದಿ, ಲಕ್ಷ್ಮಣ ಮಾದರ, ಹುಚ್ಚವ್ವ ಹಗೇದಾಳ, ನಾಮನಿರ್ದೇಶಿತ ಸದಸ್ಯರಾದ ಬಸವರಾಜ ದಂಡಾವತಿ, ಮಂಜುನಾಥ ವಡವಡಗಿ, ಸಂಗಪ್ಪ ಮೇದಾರ, ಆಶ್ರಯ ಕಮಿಟಿ ಸದಸ್ಯರಾದ ಗಂಗವ್ವ ಮೇಟಿ, ಮಂಜುನಾಥ ಭಜಂತ್ರಿ, ಬಸವರಾಜ ಕೊಕಾಟಿ, ರಹಿಂಸಾಬ ಜಮಾದಾರ, ಕಾಂಗ್ರೆಸ್ ಪಕ್ಷದ ಗ್ರಾಮೀಣ ಘಟಕದ ಅಧ್ಯಕ್ಷ ಎಸ್ ಎನ್ ರಾಂಪೂರ, ಮುಖಂಡರಾದ ಸಿದ್ದು ಹೊಸಮನಿ, ರಮೇಶ ಲಮಾಣಿ, ನಾಗೇಶ ಮುರಾಳ, ಲಕ್ಷ್ಮಣ ದ್ಯಾಮನ್ನವರ, ಪಪಂ ಮುಖ್ಯಾಧಿಕಾರಿ ಎಫ್ ಎನ್ ಹುಲ್ಲಿಕೇರಿ ಹಾಗೂ ಸಿಬ್ಬಂದಿ ಇದ್ದರು.