ಬರಗೂರು ರಂಗಮಂದಿರ ಅಭಿವೃದ್ಧಿಗೆ ಭೂಮಿ ಪೂಜೆ

| Published : Jan 07 2025, 12:16 AM IST

ಸಾರಾಂಶ

ಕನ್ನಡ ನಾಡಿನ ಹೆಸರಾಂತ ಸಾಹಿತಿಗಳು, ಚಲನಚಿತ್ರ ನಿರ್ದೇಶಕರು ಆದ ನಾಡೋಜ ಬರಗೂರು ರಾಮಚಂದ್ರಪ್ಪ ಅವರ ಹೆಸರಿನಲ್ಲಿ ಶಿರಾ ನಗರದಲ್ಲಿ ನಿರ್ಮಾಣವಾಗಿರುವ ಬರಗೂರು ರಾಮಚಂದ್ರಪ್ಪ ಬಯಲು ರಂಗಮಂದಿರವನ್ನು ಅಭಿವೃದ್ಧಿಗೊಳಿಸಿ ಮಾದರಿ ರಂಗಮಂದಿರವನ್ನಾಗಿ ಮಾಡಲಾಗುವುದು ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ಕನ್ನಡ ನಾಡಿನ ಹೆಸರಾಂತ ಸಾಹಿತಿಗಳು, ಚಲನಚಿತ್ರ ನಿರ್ದೇಶಕರು ಆದ ನಾಡೋಜ ಬರಗೂರು ರಾಮಚಂದ್ರಪ್ಪ ಅವರ ಹೆಸರಿನಲ್ಲಿ ಶಿರಾ ನಗರದಲ್ಲಿ ನಿರ್ಮಾಣವಾಗಿರುವ ಬರಗೂರು ರಾಮಚಂದ್ರಪ್ಪ ಬಯಲು ರಂಗಮಂದಿರವನ್ನು ಅಭಿವೃದ್ಧಿಗೊಳಿಸಿ ಮಾದರಿ ರಂಗಮಂದಿರವನ್ನಾಗಿ ಮಾಡಲಾಗುವುದು ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು. ಅವರು ಸೋಮವಾರ ನಗರದ ಸರ್ಕಾರಿ ಬಾಲಕರ ಮಾದರಿ ಪ್ರಾಥಮಿಕ ಪಾಠಶಾಲೆ ಹಾಗೂ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ ಬರಗೂರು ರಾಮಚಂದ್ರಪ್ಪ ಬಯಲು ರಂಗಮಂದಿರವನ್ನು ವಿಧಾನ ಪರಿಷತ್ ಸದಸ್ಯರ ಅನುದಾನದಲ್ಲಿ ಅಂದಾಜು 25 ಲಕ್ಷ ರೂ. ಅನುದಾನದಲ್ಲಿ ಜೀರ್ಣೋದ್ಧಾರಗೊಳಿಸಲು ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ರಂಗಮಂದಿರ ದುರಸ್ಥಿ ಕಾಣದೆ ನೆನೆಗುದಿಗೆ ಬಿದ್ದಿತ್ತು. ಆದ್ದರಿಂದ ಬಯಲು ರಂಗಮಂದಿರನ್ನು ಅಭಿವೃದ್ಧಿಗೊಳಿಸಲು ನಿರ್ಧರಿಸಿದ್ದು, ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಬರಗೂರು ರಾಮಚಂದ್ರಪ್ಪ ಅವರನ್ನು ಆಹ್ವಾನಿಸಿ ಅವರಿಂದಲೇ ಉದ್ಘಾಟನೆ ಮಾಡಿಸುತ್ತೇನೆ ಎಂದರು.ತಾಲೂಕು ಕಸಾಪ ಅಧ್ಯಕ್ಷ ಬಿ.ಪಿ.ಪಾಂಡುರಂಗಯ್ಯ ಮಾತನಾಡಿ ಈ ನಾಡಿನ ಬಂಡಾಯ ಸಾಹಿತಿಗಳು, ಪ್ರಗತಿಪರ ಚಿಂತಕರು, ಸಾಹಿತಿಗಳು ಆದ ನಮ್ಮ ತಾಲೂಕಿನ ನಾಡೋಜ ಬರಗೂರು ರಾಮಚಂದ್ರಪ್ಪ ಅವರ ಹೆಸರಿನ ಬರಗೂರು ರಾಮಚಂದ್ರಪ್ಪ ಬಯಲು ರಂಗ ಮಂದಿರ ಹತ್ತಾರು ವರ್ಷಗಳಿಂದ ನಿರುಪಯುಕ್ತವಾಗಿತ್ತು. ಇದಕ್ಕೊಂದು ಕಾಯಕಲ್ಪವನ್ನು ಕಲ್ಪಿಸುವ ಉದ್ದೇಶದಿಂದ ವಿಧಾನಪರಿಷತ್ ಸದಸ್ಯರಾದ ಚಿದಾನಂದ್ ಎಂ.ಗೌಡ ಅವರು 25 ಲಕ್ಷ ರೂ. ಅನುದಾನ ನೀಡಿ ಅಭಿವೃದ್ಧಿ ಮಾಡುತ್ತಿದ್ದಾರೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇಲ್ಲಿ ಕಲೆ, ಸಾಹಿತ್ಯ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಮಾಡಬೇಕು ಎಂದರು.ಈ ಸಂದರ್ಭದಲ್ಲಿ ಬರಗೂರು ಮೇಷ್ಟ್ರು ಬಳಗದ ಸದಸ್ಯ ವೈ.ನರೇಶ್ ಬಾಬು , ಚಂದ್ರಯ್ಯ, ನರಸಿಂಹಯ್ಯ, ಪಿ.ಹೆಚ್.ಮಹೇಂದ್ರಪ್ಪ, ಕುಮಾರ್ ಮಾಸ್ಟರ್, ಹೆಂದೊರೆ ಶಿವಣ್ಣ, ಜಯರಾಮಕೃಷ್ಣ, ಧರಣಿಕುಮಾರ್, ಸಕ್ಕರ ನಾಗರಾಜು, ಶ್ರೀರಂಗ, ನರಸಿಂಹಮೂರ್ತಿ, ಎಸ್.ಪಿ.ಲೋಕೇಶ್, ಸಂತೇಪೇಟೆ ನಟರಾಜು, ಚಿಕ್ಕಣ್ಣ, ಗಿರಿಧರ್, ಶಿವಕುಮಾರ್, ಭಾಸ್ಕರ್, ಈರಣ್ಣ ಪಟೇಲ್, ಎಂ ಶಿವಲಿಂಗಯ್ಯ, ದ ಅಂತಃಪುರ ಮಂಜುನಾಥ್, ಸೈಯದ್ ಬಾಬಾ, ಲಕ್ಷ್ಮೀನಾರಾಯಣ್, ನರೇಂದ್ರ, ಪಿಯು ರಘು, ಮಹಿಳಾ ಮೋರ್ಚಾದ ಪದ್ಮ ಮಂಜುನಾಥ್, ಕವಿತಾ, ಶಕುಂತಲಮ್ಮ, ಸುಶೀಲಮ್ಮ, ಶೋಭಾ, ಸೇರಿದಂತೆ ಹಲವರು ಹಾಜರಿದ್ದರು.