ಸಾರಾಂಶ
ಕೊಪ್ಪಳ: ನಗರದ ರೈಲ್ವೆ ಗೇಟ್ 63ರಲ್ಲಿ ರೈಲ್ವೆ ಕೆಳ ಸೇತುವೆ ನಿರ್ಮಾಣ ಕಾಮಗಾರಿಗೆ ಶನಿವಾರ ಬೆಳಗ್ಗೆ ಭೂಮಿಪೂಜೆ ನೆರವೇರಿಸಿ, ಬಳಿಕ ಹೋರಾಟ ಸಮಿತಿಯಿಂದ ವಿಜಯೋತ್ಸವ ಆಚರಿಸಲಾಯಿತು.ಬಹು ವರ್ಷಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಂತಾಗಿದೆ. ಇಷ್ಟು ವರ್ಷಗಳ ಕಾಲ ಹೋರಾಟ ಮಾಡಿದ ಫಲವಾಗಿ ಮತ್ತು ಸಂಸದ ಸಂಗಣ್ಣ ಕರಡಿ ಇಚ್ಛಾಶಕ್ತಿಯಿಂದ ಸೇತುವೆ ನಿರ್ಮಾಣಕ್ಕೆ ಚಾಲನೆ ದೊರೆತಂತೆ ಆಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.ಎಲ್.ಸಿ. ನಂ.63ರ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ್ ಬನ್ನಿಕೊಪ್ಪ, ಹೋರಾಟ ಸಮಿತಿಯ ಪ್ರಮುಖರಾದ ಸೋಮನಗೌಡ ಪಾಟೀಲ್, ಸಕ್ರಪ್ಪ ಹೊಸಬಾವಿ, ರುದ್ರಪ್ಪ ಇನಾಮತಿ, ದುರ್ಗೇಶಪ್ಪ ಹುರಗಜ್ಜಿ, ಭಾಗ್ಯನಗರ ಪಪಂ 17ನೇ ವಾರ್ಡಿನ ಸದಸ್ಯ ರೋಷನ್ ಅಲಿ ಮಂಗಳೂರು, ಗಿರೀಶಾನಂದ, ಕೊಪ್ಪಳದ 26 ವಾರ್ಡಿನ ಸದಸ್ಯೆ ದೇವಕ್ಕ ಕಂದಾರಿ, ಗಿರೀಶ್ ಕಣಿವೆ, ವೀರಯ್ಯಸ್ವಾಮಿ, ಮಂಜುನಾಥ್ ತರಕಾರಿ, ಮಂಜುನಾಥ್ ಸೀಡ್ಸ್, ಶಿವರಾಮ್ ಆರ್‌ಟಿಒ ಶಿವಣ್ಣ ಭಂಡಾರಿ, ದೇವರಾಜು, ಸುರೇಖಾ ದೇಸಾಯಿ, ಗೀತಾ ಪಾಟೀಲ್, ಗವಿಸಿದ್ದಪ್ಪ ಪಲ್ಲೇದ್, ಶಿವು ಕೊಟ್ರಮಠ, ಶರಣಯ್ಯ ಹಿರೇಮಠ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.