ಸಾರಾಂಶ
ಮಾಗಡಿ: ತಾಲೂಕಿನಲ್ಲಿ ಸಾಕಷ್ಟು ಕಲಾವಿದರಿದ್ದು ಪೌರಾಣಿಕ ನಾಟಕಗಳು ನಡೆಯುತ್ತಿದೆ, ಇವರಿಗಾಗಿ 1 ಕೋಟಿ ಅನುದಾನದಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಿಸುತ್ತಿದ್ದು, ಅಗತ್ಯಬಿದ್ದಲ್ಲಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕಲಾವಿದರಿಗೆ ಗೌರವ ಹಾಗೂ ಪ್ರೋತ್ಸಾಹಿಸಲಾಗುವುದು. ಜೊತೆಗೆ ಹಲ ವರ್ಷಗಳ ಶಿಕ್ಷಕರ ಬೇಡಿಕೆಯಾಗಿದ್ದ ಗುರುಭವನ ಕೆಲವೇ ತಿಂಗಳಲ್ಲಿ ಲೋಕಾರ್ಪಣೆಯಾಗಲಿದೆ. ಕಾಂಗ್ರೆಸ್ ಪಕ್ಷ ಗ್ಯಾರಂಟಿಗಳ ಜೊತೆ ಅಭಿವೃದ್ಧಿ ಕೆಲಸಗಳಿಗೂ ಒತ್ತು ನೀಡಲಾಗುತ್ತದೆ. ತಾಲೂಕಿನಲ್ಲಿ ರಸ್ತೆ ಅಭಿವೃದ್ಧಿಗೆ 200 ಕೋಟಿ ಅನುದಾನ ಬಿಡುಗಡೆಯಾಗಿದೆ. 7 ಕೋಟಿ ವೆಚ್ಚದಲ್ಲಿ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಆಡಿಟೋರಿಯಂ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿಸಲಾಗಿದೆ. ಹೈಟೆಕ್ ಗ್ರಂಥಾಲಯ ನಿರ್ಮಾಣ ಶಿಕ್ಷಣ, ಆರೋಗ್ಯ, ಮೂಲ ಸೌಲಭ್ಯಗಳಿಗೆ ಕಾಂಗ್ರೆಸ್ ಪಕ್ಷ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.ಕೆಂಪೇಗೌಡರ ಕೋಟೆ ಹಾಗೂ ಸಮಾಧಿ ಅಭಿವೃದ್ಧಿಗೆ 50 ಕೋಟಿ ಅನುದಾನ ಬಜೆಟ್‌ನಲ್ಲಿ ಮೀಸಲು ಮಾಡಿಸಿ ಈ ವರ್ಷವೇ 20 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆಂದರು.
ಹೇಮಾವತಿ ವಿಚಾರವಾಗಿ ಚರ್ಚೆ:ತುಮಕೂರು ಕೆಡಿಪಿ ಸಭೆಯಲ್ಲಿ ಯಾವುದೇ ಕಾರಣಕ್ಕೂ ಹೇಮಾವತಿ ನೀರನ್ನು ಮಾಗಡಿಗೆ ಮತ್ತು ಕುಣಿಗಲ್‌ಗೆ ಹರಿಸಬಾರದೆಂದು ಅಲ್ಲಿನ ಶಾಸಕರು ಗೃಹ ಸಚಿವ ಜಿ.ಪರಮೇಶ್ವರ್ರವರಿಗೆ ಒತ್ತಾಯಿಸಿದ ವಿಚಾರವಾಗಿ ಕುಣಿಗಲ್ ಜನರು ಕೂಡ ತುಮಕೂರಿನ ರಕ್ತ ಹಂಚಿಕೊಂಡವರೆ ಆಗಿದ್ದು ಅಲ್ಲಿನ ಶಾಸಕರ ಆಕ್ರೋಶವನ್ನು ಶಮನ ಮಾಡುವ ಕೆಲಸ ಮಾಡುತ್ತೇವೆ, ನಾವು ಕರ್ನಾಟಕದ ಕನ್ನಡಿಗರು, ನಾವು ತುಮಕೂರಿನ ಜಿಲ್ಲೆಯವರು, ತುಮಕೂರಿನವರಿಗೆ ನ್ಯಾಯ ಕೊಡುವ ಕೆಲಸ ಶಾಸಕ ಸುರೇಶ್ ಗೌಡರಿಗೂ ಇದೆ. ಯೋಜನೆ ಮಂಜೂರಾಗಿದ್ದು ಕಾಮಗಾರಿ ನಡೆಯಲಿದೆ ಎಂದು ಹೇಳಿದರು.
ಈ ವೇಳೆ ಶಾಸಕ ಬಾಲಕೃಷ್ಣ, ಎಂಎಲ್‌ಸಿಗಳಾದ ಎಸ್. ರವಿ, ಪುಟ್ಟಣ್ಣ, ಪುರಸಭೆ ಸದಸ್ಯರಾದ ಪುರುಷೋತ್ತಮ್, ಅನಿಲ್ ಕುಮಾರ್, ಶಿವಕುಮಾರ್, ಮಾಜಿ ಸದಸ್ಯರಾದ ಮಂಡಿ ಗುರು, ರಘು, ಡೂಂ ಲೈಟ್ ಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಶಿವರುದ್ರಯ್ಯ ಭಾಗವಹಿಸಿದ್ದರು.ಫೋಟೊ 5ಮಾಗಡಿ2 :ಮಾಗಡಿಯಲ್ಲಿ ನೂತನ ಬಯಲು ರಂಗಮಂದಿರ ಕಟ್ಟಡ ನಿರ್ಮಾನ ಕಾಮಗಾರಿಗೆ ಸಂಸದ ಡಿ.ಕೆ.ಸುರೇಶ್ ಭೂಮಿಪೂಜೆ ನೆರವೇರಿಸಿದರು. ಶಾಸಕ ಬಾಲಕೃಷ್ಣ ಇತರರಿದ್ದರು.