ಗೊದಾಮು ಕಟ್ಟಡ ಕಾಮಗಾರಿಗೆ ಭೂಮಿಪೂಜೆ

| Published : Mar 19 2024, 12:45 AM IST

ಸಾರಾಂಶ

ಬೈಲಹೊಂಗಲ: ತಾಲೂಕು ದೊಡವಾಡ ಗ್ರಾಮದ ಸಂಗಮೇಶ್ವರ ಪ್ರಾಥಮಿಕ ಕೃಷಿನ ಪತ್ತಿನ ಸಹಕಾರಿ ಸಂಘದ ವತಿಯಿಂದ ಹೊಸದಾಗಿ ನಿರ್ಮಿಸಲಾಗುತ್ತಿರುವ 1 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಧಾನ್ಯ ಸಂಗ್ರಹ ಗೊದಾಮು ಕಟ್ಟಡ ಕಾಮಗಾರಿಗೆ ಭೂಮಿಪೂಜಾ ಕಾರ್ಯಕ್ರಮ ಜರುಗಿತು. ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಸಂಘದ ನಿರ್ದೇಶಕ ನಿಂಗಪ್ಪ ಚೌಡಣ್ಣವರ ಮಾತನಾಡಿದರು.

ಬೈಲಹೊಂಗಲ: ತಾಲೂಕು ದೊಡವಾಡ ಗ್ರಾಮದ ಸಂಗಮೇಶ್ವರ ಪ್ರಾಥಮಿಕ ಕೃಷಿನ ಪತ್ತಿನ ಸಹಕಾರಿ ಸಂಘದ ವತಿಯಿಂದ ಹೊಸದಾಗಿ ನಿರ್ಮಿಸಲಾಗುತ್ತಿರುವ 1 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಧಾನ್ಯ ಸಂಗ್ರಹ ಗೊದಾಮು ಕಟ್ಟಡ ಕಾಮಗಾರಿಗೆ ಭೂಮಿಪೂಜಾ ಕಾರ್ಯಕ್ರಮ ಜರುಗಿತು. ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಸಂಘದ ನಿರ್ದೇಶಕ ನಿಂಗಪ್ಪ ಚೌಡಣ್ಣವರ ಮಾತನಾಡಿದರು. ಜಡಿಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಜಿಪಂ ಮಾಜಿ ಸದಸ್ಯ ಶಂಕರ ಮಾಡಲಗಿ, ಸಂಸ್ಥೆ ಅಧ್ಯಕ್ಷ ವೀರೇಂದ್ರ ಸಂಗೊಳ್ಳಿ, ಉಪಾಧ್ಯಕ್ಷ ಬಸವರಾಜ ಮುರಗೋಡ, ನಿರ್ದೇಶಕರಾದ ವಿಠ್ಠಲ ಗಾಬಿ, ನಾಗಪ್ಪ ಸವದತ್ತಿ, ಉದಯ ಕೊಟಬಾಗಿ, ಈಶ್ವರ ಅಂದಾನಶೆಟ್ಟಿ, ಯಲ್ಲಪ್ಪ ಹಿರಗಣ್ಣವರ, ಗಿರೀಶ ಧಾರವಾಡ, ಮಡಿವಾಳೆಪ್ಪ ವಿಭೂತಿ, ಶಂಕ್ರೆಮ್ಮ ಚವಡಣ್ಣವರ, ಶೋಭಾ ಕಂಚಿನಮಠ, ಬ್ಯಾಂಕ್ ನಿರೀಕ್ಷಕ ಎಸ್.ವಿ.ಗಣಾಚಾರಿ ಉಪಸ್ಥಿತರಿದ್ದರು. ಸಂಘದ ಸಿಇಒ ಎಂ.ಎಸ್.ಶಿಂಧೆ ನಿರೂಪಿಸಿ ವಂದಿಸಿದರು. ಸಂಸ್ಥೆ ಸಿಬ್ಬಂದಿ ಸೇರಿದಂತೆ ದೊಡವಾಡ, ನನಗುಂಡಿಕೊಪ್ಪ ಗ್ರಾಮಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.