ಬೀದರ್‌: ರೋಟರಿ ಸಿಲ್ವರ್‌ ಸ್ಟಾರ್‌ ಪದಾಧಿಕಾರಿಗಳ ನೇಮಕ

| Published : Sep 01 2025, 01:03 AM IST

ಸಾರಾಂಶ

ಜಿಲ್ಲೆಯ ರೋಟರಿ ಸಿಲ್ವರ್‌ ಸ್ಟಾರ್‌ ಕ್ಲಬ್‌ಗೆ ಅತ್ಯಂತ ಕಿರಿ ವಯಸ್ಸಿನ ಯುವಕ, ಲಂಡನ್‌ ಯೂತ್‌ ಕೌನ್ಸಿಲ್‌ ಸದಸ್ಯ ಇಲ್ಲಿನ ಉತ್ತರ ಕರ್ನಾಟಕ ಪತ್ರಿಕೆ ಹಾಗೂ ಸುದ್ದಿವಾಹಿನಿಯ ಸಿಇಒ ಆದೀಶ್‌ ರಜನೀಶ ವಾಲಿ ನೂತನ ಅಧ್ಯಕ್ಷರಾಗಿ ಹಾಗೂ ಕಾರ್ಯದರ್ಶಿಯಾಗಿ ಸೆಂಟ್‌ ಪೌಲ್‌ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಕಿರಣ್‌ ಸ್ಯಾಮ್ವೆಲ್‌ ಆಯ್ಕೆಯಾಗಿದ್ದು, ರೋಟರಿ ಇಂಟರ್‌ ನ್ಯಾಷನಲ್ ಡೈರೆಕ್ಟರ್ (2025-27) ಲೆಫ್ಟಿನಂಟ್‌ ಕೆ.ಪಿ.ನಾಗೇಶ್, ಅವರು ಇವರೀರ್ವರಿಗೂ ಪದಗ್ರಹಣ ಮಾಡಿಸಿದರು.

ಬೀದರ್‌: ಜಿಲ್ಲೆಯ ರೋಟರಿ ಸಿಲ್ವರ್‌ ಸ್ಟಾರ್‌ ಕ್ಲಬ್‌ಗೆ ಅತ್ಯಂತ ಕಿರಿ ವಯಸ್ಸಿನ ಯುವಕ, ಲಂಡನ್‌ ಯೂತ್‌ ಕೌನ್ಸಿಲ್‌ ಸದಸ್ಯ ಇಲ್ಲಿನ ಉತ್ತರ ಕರ್ನಾಟಕ ಪತ್ರಿಕೆ ಹಾಗೂ ಸುದ್ದಿವಾಹಿನಿಯ ಸಿಇಒ ಆದೀಶ್‌ ರಜನೀಶ ವಾಲಿ ನೂತನ ಅಧ್ಯಕ್ಷರಾಗಿ ಹಾಗೂ ಕಾರ್ಯದರ್ಶಿಯಾಗಿ ಸೆಂಟ್‌ ಪೌಲ್‌ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಕಿರಣ್‌ ಸ್ಯಾಮ್ವೆಲ್‌ ಆಯ್ಕೆಯಾಗಿದ್ದು, ರೋಟರಿ ಇಂಟರ್‌ ನ್ಯಾಷನಲ್ ಡೈರೆಕ್ಟರ್ (2025-27) ಲೆಫ್ಟಿನಂಟ್‌ ಕೆ.ಪಿ.ನಾಗೇಶ್, ಅವರು ಇವರೀರ್ವರಿಗೂ ಪದಗ್ರಹಣ ಮಾಡಿಸಿದರು.

ಇತ್ತೀಚೆಗೆ ಬೀದರ್‌ ಸಿಲ್ವರ್ ಸ್ಟಾರ್‌ ಕ್ಲಬ್‌ನ ವತಿಯಿಂದ 100 ಪ್ರತಿಷ್ಠಿತ ಪೌಲ್‌ ಹ್ಯಾರಿಷ್‌ ಫೆಲೋ ಸಮಾರಂಭ ಹಾಗೂ ರೋಟರಿ ಸಿಲ್ವರ್‌ ಸ್ಟಾರ್‌ ಕ್ಲಬ್‌ನ ನೂತನ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿ ಮಾತನಾಡಿ, ನೂತನ ಅಧ್ಯಕ್ಷ ಆದೀಶ ರಜನೀಶ ವಾಲಿ ನೇತೃತ್ವದಲ್ಲಿ ರೋಟರಿ ಸಿಲ್ವರ್‌ ಸ್ಟಾರ್‌ ಮೂಲಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವದನ್ನು ಮನಗಂಡು ಅವರಿಗೆ ರೋಟರಿ ಇಂಟರ್‌ನ್ಯಾಶನಲ್‌ ವತಿಯಿಂದಲೇ ಅಭಿನಂದಿಸಿ ಉತ್ತೇಜನ ನೀಡಲು ಬೀದರ್‌ಗೆ ಆಗಮಿಸಿದ್ದಾಗಿ ಲೆ.ಕೆ.ಪಿ.ನಾಗೇಶ ತಿಳಿಸಿದರು.

ನೂತನ ಅ‍‍ಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಆದೀಶ್ ರಜನೀಶ ವಾಲಿ ಮಾತನಾಡಿ, ನಮ್ಮ ತಂಡ ಈಗಾಗಲೇ ಅನೇಕ ಸಮಾಜಮುಖಿ ಕೆಲಸಗಳ ಮೂಲಕ ಜನರಿಗೆ ಸಹಾಯ ಮಾಡುತ್ತಿದೆ, ಮುಂದಿನ ದಿನಗಳಲ್ಲಿ ನನ್ನ ನಾಯಕತ್ವದಲ್ಲಿ ಸಮಾಜದಲ್ಲಿ ಬೇರೂರಿರುವ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಉದ್ಯೋಗ ಮೇಳ, ಯುವ ಜನಾಂಗಕ್ಕೆ ಕ್ರೀಡಾ ಚಟುವಟಿಕೆಗಳ ಮೂಲಕ ದೈಹಿಕ ಸಾಮರ್ಥ್ಯ ವೃದ್ಧಿ, ಮಹಿಳಾ ಸಬಲೀಕರಣ ಹಾಗೂ ಅಂತರ್ಜಲ ಹೆಚ್ಚಳಕ್ಕೆ ವಿವಿಧ ಕಾರ್ಯ ಯೋಜನೆಗಳೊಂದಿಗೆ ಹಿರಿಯರ ಮಾರ್ಗ ದರ್ಶನದಲ್ಲಿ ನಮ್ಮ ಈ ಯುವಕರ ತಂಡ ಮುನ್ನುಗ್ಗಲಿದೆ ಎಂದರು.

ಕ್ಲಬ್‌ ಸಲಹೆಗಾರರಾದ ಬಸವರಾಜ ಧನ್ನೂರ್‌ ಮಾತನಾಡಿ, ಸಮಾಜಮುಖಿ ಕಾರ್ಯಗಳಲ್ಲಿ ಕ್ಲಬ್‌ ತನ್ನನ್ನು ತಾನು ತೊಡಗಿಸಿಕೊಳ್ಳುವ ಮೂಲಕ ಮಹತ್ವದ ಹೆಜ್ಜೆಯಿಡುವ ಎಲ್ಲ ಭರವಸೆಯಿದೆ ಕ್ಲಬ್‌ಗೆ ಅಗತ್ಯ ಸಲಹೆ, ಮಾರ್ಗದರ್ಶನಗಳನ್ನು ನೀಡಲು ಸದಾ ಸಿದ್ಧ ಎಂದು ಹೇಳಿದರು.

ನೂತನ ಕಾರ್ಯದರ್ಶಿ ಕಿರಣ್‌ ಸ್ಯಾಮುವಲ್‌ ಮಾತನಾಡಿ, ನಮ್ಮ ಸಿಲ್ವರ್‌ ಸ್ಟಾರ್‌ ಕ್ಲಬ್‌ ವತಿಯಿಂದ ಕಲ್ಯಾಣ ಕರ್ನಾಟಕ ಭಾಗದ ಯುವಕರಿಗೆ ಹಾಗೂ ರೈತರಿಗೆ ಸಹಕಾರಿಯಾಗುವಂತೆ ಹತ್ತಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಪ್ರತಿಯೊಬ್ಬರೂ ಸಧೃಡ ಸಮಾಜದ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದರು.

ರೋಟರಿ ಕಲ್ಯಾಣ ವಲಯದ ಅಸಿಸ್ಟೆಂಟ್‌ ಗವರ್ನರ್‌ ಹಾವಶೆಟ್ಟಿ ಪಾಟೀಲ್‌ ಮಾತನಾಡಿ, ಅಂತರರಾಷ್ಟ್ರೀಯ ರೋಟರಿ ಕಾರ್ಯಕ್ರಮಗಳಿಗೆ ಮಾತ್ರ ಸಮಯ ನೀಡುವಂಥ ಸ್ಥಾನದಲ್ಲಿರುವ ರೋಟರಿ ಇಂಟರ್‌ನ್ಯಾಷನಲ್‌ ಡೈರೆಕ್ಟರ್‌ ಕೆ.ಪಿ ನಾಗೇಶ ಅವರ ಈ ಕಾರ್ಯಕ್ರಮಕ್ಕೆ ಆಗಮನ ಇಡೀ ದೇಶಕ್ಕೆ ಹೆಮ್ಮೆಯ ಸಂಗತಿಯಾದರೆ ನಮಗೆ ಅತ್ಯಂತ ಗೌರವದ ಸೂಚಕ ಎಂದರು.

ಪದಗ್ರಹಣ ಸಮಾರಂಭದಲ್ಲಿ ಶಾಸಕ ಚಂದ್ರಶೇಖರ್‌ ಪಾಟೀಲ್‌, ಮಾಜಿ ಶಾಸಕ ಅರವಿಂದ ಅರಳಿ, ಜಿಪಂ ಸಿಇಒ ಡಾ. ಗಿರೀಶ ಬದೋಲೆ, ಎಸ್‌ಪಿ ಪ್ರದೀಪ ಗುಂಟಿ, ಮಾಜಿ ಕಾರ್ಯದರ್ಶಿ ಪೂಜಾ ಜಾರ್ಜ, ಡಾ. ವೊಮಿನಾ ಸತೀಶ ಬಾಬು, ಚಿನ್ನಪ್ಪ ರೆಡ್ಡಿ, ಕೇಶವ್ ರೆಡ್ಡಿ ಇದ್ದರು.

ಸಿಲ್ವರ್‌ ಸ್ಟಾರ್‌ ನೂತನ ನಿರ್ದೇಶಕರ ಪಟ್ಟಿ

ಉಪಾಧ್ಯಕ್ಷರಾಗಿ: ಅನಂದ ಕೊಟ್ಟರಕಿ, ಜಂಟಿ ಕಾರ್ಯದರ್ಶಿ: ಭಾವೇಶ ಪಟೇಲ್‌, ಖಜಾಂಚಿ: ಅಂಬರೀಶ್‌ ಅಂಬೆಸಂಗೆ, ನಿರ್ದೇಶಕರಾಗಿ ಎಸ್‌ ಪುನೀತ್‌ ಸಿಂಗ್‌, ಸ್ಪೂರ್ತಿ ಧನ್ನೂರ್‌, ನವೀನ್‌ ಗೋಯಲ್‌, ಲವನೀತ್‌ ಸಿಂಗ್‌, ಮಂಜು ಹೂಗಾರ, ಅನಂದ ಕುಲಕರ್ಣಿ, ಅಮೋಲ್‌ ಜಾಧವ, ಗುರು ಸಿಂಧೋಲ್‌, ಕೀರ್ತಿ ವಾಲೆ, ಸಹನಾ ಪಾಟೀಲ್‌, ಮನೀಶ ಸಿಂಧೋಲ್‌, ಮಹೇಶ ಚಿಮ್ಮಕೋಡೆ, ಡಾ. ವೈಭವ ಬದಬದೆ, ಆಶೋಕ್ ಹೆಬ್ಬಾಳೆ, ಡಾ. ಸಂಗಮೇಶ ವಡಗಾಂವೆ, ಪೂಜಾ ಕೊಂಡಿ, ಮಂಜುನಾಥ ಖೂಬಾ, ರಾಘವೇಂದ್ರ ರೇಜಿಂತಲ್‌, ಸುರೇಂದ್ರ ಸಿಂದೋಲ್‌.