ಜಿಲ್ಲಾಮಟ್ಟದ ಶ್ವಾನ ಪ್ರದರ್ಶನಕ್ಕೆ ಡಿಸಿ ಗೋವಿಂದ ರೆಡ್ಡಿ ಚಾಲನೆ

| Published : Feb 02 2024, 01:01 AM IST

ಜಿಲ್ಲಾಮಟ್ಟದ ಶ್ವಾನ ಪ್ರದರ್ಶನಕ್ಕೆ ಡಿಸಿ ಗೋವಿಂದ ರೆಡ್ಡಿ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಲಂಗೋಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ ದಿಲೀಪ ಬದೋಲೆ ಪಾಲ್ಗೊಂಡಿದ್ದರು. 19 ತಳಿಯ ಒಟ್ಟು 97 ಶ್ವಾನಗಳು ಭಾಗಿ, ಪ್ರಥಮ ಸ್ಥಾನ ಪಡೆದ ಶ್ವಾನದ ಮಾಲಿಕರಿಗೆ ಪುರಸ್ಕಾರ ಪ್ರದಾನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್‌

ಪ್ರಸಕ್ತ ಸಾಲಿನ ವಿಸ್ತೀರ್ಣಾ ಚಟುವಟಿಕೆಗಳ ಬಲಪಡಿಸುವಿಕೆ ಕಾರ್ಯಕ್ರಮದಡಿ ಜಿಲ್ಲಾಮಟ್ಟದ ಶ್ವಾನ ಪ್ರದರ್ಶನ ಕಾರ್ಯಕ್ರಮವನ್ನು ಬುಧವಾರ ನಗರದ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಉದ್ಘಾಟಿಸಿದರು.

ಈ ಶ್ವಾನ ಪ್ರದರ್ಶನದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಲಂಗೋಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ ದಿಲೀಪ ಬದೋಲೆ ಮುಖ್ಯ ಅತಿಥಿಯಾಗಿ ಭಾಗವಸಿದ್ದರು.

ಬೀದರ್‌ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಆಗಮಿಸಿದ ಶ್ವಾನ ಮಾಲೀಕರು ವಿವಿಧ ತಳಿಗಳ ಅಂದರೆ 19 ತಳಿಯ ಶ್ವಾನಗಳು ಸೇರಿದಂತೆ ಒಟ್ಟಾರೆ 97 ಶ್ವಾನಗಳು ಪ್ರದರ್ಶನದಲ್ಲಿ ಭಾಗವಹಿಸಿದವು. ತಳಿವಾರು ಮೊದಲ ಮತ್ತು ದ್ವಿತೀಯ ಬಹುಮಾನ ಹಾಗೂ ಉಳಿದ ಎಲ್ಲಾ ಶ್ವಾನಗಳ ಮಾಲೀಕರಿಗೆ ಸಮಾಧಾನಕರ ಬಹುಮಾನಗಳನ್ನು ನೀಡಿ ಸನ್ಮಾನಿಸಲಾಯಿತು.

ಪಶುವೈದ್ಯಕೀಯ ಮಹಾವಿದ್ಯಾಲಯ ಬೀದರ್‌ನಿಂದ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಮತ್ತು ಸಹಾಯಕ ಪ್ರಧ್ಯಾಪಕರು ನಿರ್ಣಾಯಕರಾಗಿ ಪ್ರದರ್ಶನದಲ್ಲಿ ಭಾಗಿಯಾಗಿದ್ದರು. ತಳಿವಾರು ಮೊದಲ ಬಹುಮಾನ ಪಡೆದ ಶ್ವಾನಗಳಲ್ಲಿ ಮತ್ತೆ ಆಯ್ಕೆ ಮಾಡಿ ಚಾಂಪಿಯನ್ ಬಹುಮಾನವನ್ನು ಮೊದಲ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನಾಗಿ ನೀಡಿ ಸತ್ಕರಿಸಲಾಯಿತು. ಪೋಲೀಸ್ ಇಲಾಖೆ ಶ್ವಾನ ತಳಿಗೆ ವಿಶೇಷ ಬಹುಮಾನವನ್ನು ನೀಡಲಾಯಿತು.

ಪಶು ಪಾಲನಾ ಇಲಾಖೆಯ ಉಪ ನಿರ್ದೇಶಕರು (ಆಡಳಿತ), ಉಪ ನಿರ್ದೇಶಕರು (ಪಾಲಿಕ್ಲಿನಿಕ್‌), ರಾಜ್ಯಮಟ್ಟದ ಪಶುವೈದ್ಯರ ಸಂಘದ ಅಧ್ಯಕ್ಷರು, ಜಿಲ್ಲಾಮಟ್ಟದ ಪಶುವೈದ್ಯರ ಸಂಘದ ಅಧ್ಯಕ್ಷರು, ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ಹಾಗೂ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ಬೀದರ, ಹಾಗೂ ಬೀದರ್‌ ತಾಲೂಕಿನ ಪಶುವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.