ಕಲಬುರಗಿ ಮತ್ತು ಬೀದರ್‌ ಜಿಲ್ಲಾ ಉಸ್ತುವಾರಿ ಸಚಿವ ಕೇವಲ ತಂದೆಯ ಆಶ್ರಯ ಮೇಲೆ ರಾಜಕೀಯಕ್ಕೆ ಬಂದಿದ್ದಾರೆ. ಆದರೆ, ರೈತರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಪರಿಹಾರ ಕೊಡಿಸಲಿಲ್ಲ. ಭಾವ ಮತ್ತು ಮಗನ ಪ್ರಚಾರಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಂಚೋಳಿ

ಕಲಬುರಗಿ ಮತ್ತು ಬೀದರ್‌ ಜಿಲ್ಲಾ ಉಸ್ತುವಾರಿ ಸಚಿವ ಕೇವಲ ತಂದೆಯ ಆಶ್ರಯ ಮೇಲೆ ರಾಜಕೀಯಕ್ಕೆ ಬಂದಿದ್ದಾರೆ. ಆದರೆ, ರೈತರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಪರಿಹಾರ ಕೊಡಿಸಲಿಲ್ಲ. ಭಾವ ಮತ್ತು ಮಗನ ಪ್ರಚಾರಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಜನತೆ ಸೋಲಿನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಕೇಂದ್ರ ಸಚಿವ ಭಗವಂತ ಖುಬಾ ಹೇಳಿದರು.

ತಾಲೂಕಿನ ಐನೋಳಿ ಗ್ರಾಮದಲ್ಲಿ ಸುಲೇಪೇಟ ಮತ್ತು ಚಿಂಚೋಳಿ ಮಹಾಶಕ್ತಿ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಬೀದರ್‌ ಉಸ್ತುವಾರಿ ಸಚಿವ ಈಶ್ವರ ಖಂಡ್ರೆರವರು ರೈತರಿಗೆ ಯಾವುದೇ ಪರಿಹಾರ ಕೊಡಿಸಲಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ₹೧೮ ಲಕ್ಷ ಕೋಟಿ ಪರಿಹಾರವನ್ನು ನೀಡಿದ್ದಾರೆ. ಬೀದರ್‌ ಜಿಲ್ಲೆಯಲ್ಲಿ ಬಡವರಿಗಾಗಿ ೧ ಲಕ್ಷ ಮನೆಗಳನ್ನು ಮಂಜೂರಿಗೊಳಿಸಿದ್ದೇನೆ. ಬೀದರ್‌ ಜಿಲ್ಲೆಗೆ ನನ್ನ ಕೊಡುಗೆ ಏನೆಂಬುದು ನನ್ನ ಮುಂದೆ ಈಶ್ವರ ಖಂಡ್ರೆ ನಿಲ್ಲಲ್ಲಿ ಉತ್ತರ ಕೊಡುತ್ತೇನೆ ಎಂದರು.

ಶಾಸಕ ಡಾ. ಅವಿನಾಶ ಜಾಧವ್‌ ಜೆಡಿಎಸ್ ಮುಖಂಡ ಸಂಜೀವನ್ ಯಾಕಾಪೂರ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

ವೇದಿಕೆಯಲ್ಲಿ ಗೋಪಾಲರಾವ ಕಟ್ಟಿಮನಿ, ಸಂತೋಷ ಗಡಂತಿ, ಭೀಮಶೆಟ್ಟಿ ಮುರುಡಾ, ವಿಜಯಕುಮಾರ ಚೇಂಗಟಿ, ಗೌತಮ ಪಾಟೀಲ, ಶರಣಪ್ಪ ತಳವಾರ, ಸತೀಶರೆಡ್ಡಿ ತಾಜಲಾಪೂರ, ಜಗನ್ನಾತ ಪಾಟೀಲ, ಅಲ್ಲಮಪ್ರಭು ಹುಲಿ, ಉದಯ ಕುಮಾರ ಸಿಂಧೋಲ, ಚಿತ್ರಶೇಖರ ಪಾಟಿಲ, ರವಿಶಂಕರ ಮುತ್ತಂಗಿ, ಹಣಮಂತ ಪೂಜಾರಿ ನಾರಾಯಣ ನಾಟೀಕಾರ, ಇನ್ನಿತರಿದ್ದರು.