ಸಾರಾಂಶ
ಬೀದರ್ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲು ಮೊದಲ ದಿನ ಯುನಿವರ್ಸ ಸಿಟಿಜನ್ ಪಕ್ಷದ ಅಭ್ಯರ್ಥಿಯಾಗಿ ವಿನಯ ಬಿರಾದಾರ, ದಿಲೀಪ್ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಬೀದರ್: ಲೋಕಸಭಾ ಸಾರ್ವತ್ರಿಕ ಚುನಾವಣೆ- 2024ರ ನಾಮಪತ್ರ ಸಲ್ಲಿಸಲು ಮೊದಲ ದಿನವಾದ ಶುಕ್ರವಾರ ಬೀದರ್ ಲೋಕಸಭಾ ಸಾರ್ವತ್ರಿಕ ಚುನಾವಣಾ ಕ್ಷೇತ್ರದಿಂದ ಏ.12ರಂದು ಎರಡು ನಾಮಪತ್ರಗಳು ಸಲ್ಲಿಕೆಯಾಗಿವೆ.
ವಿನಯ ರಾಜೇಂದ್ರ ಬಿರಾದಾರ ವಾರ್ಡ್ ನಂ. 30 ಲಕ್ಷ್ಮಿ ನಗರ ಕುಂಬಾರವಾಡ ಬೀದರ್ ಇವರು ಯುನಿವರ್ಸ್ ಸಿಟಿಜನ್ ಪಕ್ಷದ ಅಭ್ಯರ್ಥಿಯಾಗಿ 12.15ಕ್ಕೆ ನಾಮಪತ್ರ ಸಲ್ಲಿಸಿದರು.ಬ್ರೈಲ್ ಲಿಪಿಯಲ್ಲಿ ಬರೆದುಕೊಂಡು ಬಂದು ಶಪಥ ಪ್ರಮಾಣ:
ದಿಲೀಪ ತಂದೆ ನಾಗಪ್ಪ ಕಾಡವಾದ ಗ್ರಾಮ, ಬೀದರ್ ತಾಲೂಕು ಇವರು ಮಧ್ಯಾಹ್ನ 1.20ಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಇವರು ಅಂಧ ಅಭ್ಯರ್ಥಿಯಾಗಿದ್ದು, ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಬ್ರೈಲ್ ಲಿಪಿಯಲ್ಲಿ ಬರೆದುಕೊಂಡು ಬಂದು ಶಪಥ ಪ್ರಮಾಣ ತೆಗೆದುಕೊಂಡಿದ್ದು ವಿಶೇಷವಾಗಿತ್ತು.ಏಪ್ರಿಲ್ 12 ರಂದು ನಾಮಪತ್ರಗಳ ಸಲ್ಲಿಸಲು ಮಧ್ಯಾಹ್ನ 3 ಗಂಟೆಗಳ ವರೆಗೆ ಕಾಲಾವಕಾಶವಿತ್ತು. ಇಲ್ಲಿಯವರಗೆ ಎರಡು ನಾಮಪತ್ರಗಳು ಮಾತ್ರ ಮೊದಲ ದಿನ ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿಗಳ ಕಾರ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.