ಬಿದ್ದಾಟಂಡ ವಾಡೆ: ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

| Published : Dec 13 2024, 12:46 AM IST

ಬಿದ್ದಾಟಂಡ ವಾಡೆ: ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಬಿದ್ದಾಟಂಡ ವಾಡೆ ರಸ್ತೆಯಿಂದ ನಾಪೋಕ್ಲು ಸಂಪರ್ಕ ರಸ್ತೆ , ಹಾಗೂ ಕೋಟೇರಿ ರಸ್ತೆಯಿಂದ, ಮೂಟೇರಿ ಸಂಪರ್ಕ ರಸ್ತೆಯ ಕಾಮಗಾರಿಗೆ ಬಿದ್ದಾಟಂಡ ವಾಡೆ ಸಮೀಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್‌ ಗುದ್ದಲಿ ಪೂಜ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿಗೆ ಸಮೀಪದ ಬಿದ್ದಾಟಂಡ ವಾಡೆ ರಸ್ತೆಯಿಂದ ನಾಪೋಕ್ಲು ಸಂಪರ್ಕ ರಸ್ತೆ , ಹಾಗೂ ಕೋಟೇರಿ ರಸ್ತೆಯಿಂದ, ಮೂಟೇರಿ ಸಂಪರ್ಕ ರಸ್ತೆಯ ಕಾಮಗಾರಿಗೆ ಬಿದ್ದಾಟಂಡ ವಾಡೆ ಸಮೀಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್‌ ಗುದ್ದಲಿ ಪೂಜ ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಕಳೆದ ಬಾರಿ ಬಿದ್ದಾಟಂಡ ವಾಡೆ ಕೋಲಾಟಕ್ಕೆ ಆಗಮಿಸಿದಂತ ಸಂದರ್ಭ ಕೊಟ್ಟ ಆಶ್ವಾಸನೆಯಂತೆ ಶಾಸಕ ಎ.ಎಸ್.ಪೊನ್ನಣ್ಣ ಅನುದಾನದಿಂದ ರಸ್ತೆ ರಸ್ತೆ ನಿರ್ಮಿಸಲಾಗುವುದು ಎಂದರು.ವಲಯದ ಅಧ್ಯಕ್ಷ ಮಾಚೇಟ್ಟಿರ ಕುಶು ಕುಶಾಲಪ್ಪ ಮಾತನಾಡಿ, ಕಾಮಗಾರಿ ನಡೆಯುವ ಸಂದರ್ಭ ಯಾವುದೇ ರೀತಿಯ ರಾಜೀ ಮಾಡಿಕೊಳ್ಳದೆ, ಉತ್ತಮ ರೀತಿಯ ಗುಣಮಟ್ಟದ ರಸ್ತೆಯ ನಿರ್ಮಾಣ ಮಾಡಲು ಗ್ರಾಮಸ್ಥರು ಪರಿಶೀಲನೆ ಮಾಡಿಕೊಂಡು ಸಹಕರಿಸಬೇಕೆಂದು ವಿನಂತಿಸಿದರು.

ಬಿದ್ದಾಟಂಡ ತಮ್ಮಯ್ಯ ಸ್ವಾಗತಿಸಿದರು. ನಾಪೋಕ್ಲು ಬ್ಲಾಕ್ ಅಧ್ಯಕ್ಷ ಕೆ.ಎ ಇಸ್ಮಾಯಿಲ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕುಲ್ಲೇಟಿರ ಹೇಮಾ ಅರುಣ್, ಸದಸ್ಯರಾದ ಸಾಬ ತಿಮ್ಮಯ್ಯ, ಕುಲ್ಲೇಟಿರ ಅರುಣ್ ಬೇಬಾ, ಪಟ್ರಪಂಡ ಮೋಹನ್, ಗ್ರಾಮಸ್ಥರಾದ ಬಿದ್ದಾಟಂಡ ಡಿಕ್ಕಿ, ದಿನೇಶ್, ಕಾರ್ಯಪ್ಪ, ರೋಜಿ ಚಿನ್ನಪ್ಪ, ಮಮತಾ, ಜೀನ್ನು ನಾಣಯ್ಯ, ಪುಲ್ಲೇರ ಪದ್ಮಿನಿ, ಗಂಗಮ್ಮ, ಅಪ್ಪಾರಂಡ ಸುಭಾಷ್ ತಿಮ್ಮಯ್ಯ, ಬಿದ್ದಾಟಂಡ ಹಾಗೂ ಪುಲ್ಲೆರ ಕುಟುಂಬಸ್ಥರು ಇದ್ದರು.