ನಾಪೋಕ್ಲು: ಸಹಕಾರಿ ಮಹಿಳಾ ಸಮಾಜದ (ನಂ. 393ನೇ) ನಾಪೋಕ್ಲು ಇದರ ಮುಂದಿನ ಐದು ವರ್ಷಗಳ ಅವಧಿಗೆ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಬಿದ್ದಾತಂಡ ಮೇರಿ ಚಿಟ್ಟಿಯಪ್ಪ ಆಯ್ಕೆಯಾದರು. ಸಮಾಜದ ಸಭಾಂಗಣದಲ್ಲಿ ಜರುಗಿದ ಪದಾಧಿಕಾರಿಗಳ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಕೇಲೆಟ್ಟೀರ ಬಿ. ಮುತ್ತಮ್ಮ ಆಯ್ಕೆಯಾದರು. ನಿರ್ದೇಶಕರಾಗಿ ಕುಲ್ಲೇಟಿರ ಹೇಮಾವತಿ ಅರುಣ್, ಕೇಲೇಟಿರ ದಿವ್ಯ ಮುತ್ತಪ್ಪ, ಕುಟ್ಟನ್ಜಟ್ಟಿರ ವಿನಿತಾ ಸೋಮಣ್ಣ, ಕಾಂಡಂಡ ಲೀಲಾವತಿ ಪೊನ್ನಣ್ಣ, ಹೇಮಾವತಿ ರಾಮಕೃಷ್ಣ, ಮಣವಟ್ಟಿರ ಜಾನ್ಸಿ ತಿಮ್ಮಯ್ಯ, ಮುಂಡಂಡ ಕವಿತಾ ಅಯ್ಯಣ್ಣ , ಬಿದ್ದಾತಂಡ ಗಿರಿಜಾ ಬೋಪಣ್ಣ, ಬೊಪ್ಪಂಡ ಶೈಲಾ ಬೋಪಯ್ಯ ಆಯ್ಕೆಯಾದರು. ರಾಜೇಶ್ವರಿ ಲೋಕೇಶ್ ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ಆಯ್ಕೆಯಾದರು. ಕಾರ್ಯಕ್ರಮದಲ್ಲಿ ಚುನಾವಣಾ ಅಧಿಕಾರಿಯಾಗಿ ಎಆರ್ ರಿಟರ್ನರ್ ಆಫೀಸರ್ ಪ್ರದೀಪ್ ಭಾಗವಹಿಸಿದ್ದರು.