ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸಲ್ಲಿಸಿದ್ದ ಹೆಚ್ಚುವರಿ ನೀರು ಬಿಡುಗಡೆ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ್ದು, ಆ ಮೂಲಕ ಕರ್ನಾಟಕಕ್ಕೆ ದೊಡ್ಡ ಕಾನೂನು ಜಯ ಸಿಕ್ಕಿದೆ.

ಕನ್ನಡಪ್ರಭ ವಾರ್ತೆ ನವದೆಹಲಿ:

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸಲ್ಲಿಸಿದ್ದ ಹೆಚ್ಚುವರಿ ನೀರು ಬಿಡುಗಡೆ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ್ದು, ಆ ಮೂಲಕ ಕರ್ನಾಟಕಕ್ಕೆ ದೊಡ್ಡ ಕಾನೂನು ಜಯ ಸಿಕ್ಕಿದೆ.

ಕರ್ನಾಟಕ ನಿಗದಿತ ಪ್ರಮಾಣದಲ್ಲಿ ಕಾವೇರಿ ನೀರು ಹರಿಸುತ್ತಿಲ್ಲ ಎಂದು ಆಕ್ಷೇಪಿಸಿ ತಮಿಳುನಾಡು ಸುಪ್ರೀಂಕೋರ್ಟ್‌ನ ಕದ ತಟ್ಟಿತ್ತು. ತಮಿಳುನಾಡಿನ ರೈತರ ಸಂಕಷ್ಟ ಮತ್ತು ಬೆಳೆ ನಷ್ಟ ಪರಿಗಣಿಸಿ, 11 ಟಿಎಂಸಿ ಬಾಕಿ ನೀರು ಬಿಡುಗಡೆ ಮಾಡಲು ಕರ್ನಾಟಕಕ್ಕೆ ನಿರ್ದೇಶನ ನೀಡುವಂತೆ ಕೋರಿ ತಮಿಳುನಾಡು ಎರಡು ಅರ್ಜಿಗಳನ್ನು ಸಲ್ಲಿಸಿತ್ತು.

ತಮಿಳುನಾಡಿನ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿದ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಅಪರೇಶ್ ಕುಮಾರ್ ಸಿಂಗ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ, ತಮಿಳುನಾಡಿನ ಎರಡೂ ಅರ್ಜಿಗಳನ್ನು ವಜಾಗೊಳಿಸಿ ತೀರ್ಪು ನೀಡಿದೆ. ತಮಿಳುನಾಡಿನ ವಾದವೇನಾಗಿತ್ತು?ಅಂತರರಾಜ್ಯ ಗಡಿಮಾಪನ ಕೇಂದ್ರವಾದ ಬಿಳಿಗುಂಡ್ಲುವಿನಲ್ಲಿ ಅಕ್ಟೋಬರ್ 6 ರವರೆಗೆ ನಮಗೆ ಬರಬೇಕಿದ್ದ ನೀರಿನಲ್ಲಿ 11.719 ಟಿಎಂಸಿ ಕೊರತೆಯಾಗಿದೆ. ಇದರೊಂದಿಗೆ, ಕರ್ನಾಟಕದ ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಸುಮಾರು 49 ಟಿಎಂಸಿ ನೀರಿನ ಸಂಗ್ರಹವಿದ್ದರೂ ಕರ್ನಾಟಕವು ಉದ್ದೇಶಪೂರ್ವಕವಾಗಿ ನೀರನ್ನು ತಡೆಹಿಡಿದಿದೆ. ಇದರಿಂದ ನಮ್ಮ ರಾಜ್ಯದ ರೈತರು ಮತ್ತು ಬೆಳೆಗಳಿಗೆ ತೀವ್ರ ನಷ್ಟವಾಗುತ್ತಿದೆ. ಕಾವೇರಿ ನ್ಯಾಯಮಂಡಳಿಯ ತೀರ್ಪಿನಂತೆ ಮಳೆ ಕೊರತೆಯ ವರ್ಷದಲ್ಲೂ ನಮಗೆ ಶೇ.55.29ರಷ್ಟು ಪ್ರಮಾಣಾನುಗುಣ ಪಾಲು ಸಿಗಬೇಕು ಹಾಗೂ ಹಿಂದಿನ ಬಾಕಿಯನ್ನು ಕರ್ನಾಟಕ ಸರಿದೂಗಿಸಬೇಕು ಎಂದು ತಮಿಳುನಾಡು ಒತ್ತಾಯಿಸಿತ್ತು.ಕರ್ನಾಟಕದ ಪ್ರತಿವಾದವೇನಾಗಿತ್ತು?:

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕರ್ನಾಟಕ, ರಾಜ್ಯದ ಕಾವೇರಿ ಜಲಾನಯನ ಪ್ರದೇಶದಲ್ಲಿ ತೀವ್ರ ಮಳೆ ಕೊರತೆಯಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಜನರ ಕುಡಿಯುವ ನೀರಿಗೇ ಅಭಾವ ಎದುರಾಗಿದೆ. ಒಟ್ಟಾರೆ 483 ಟಿಎಂಸಿ ನೀರಿನಲ್ಲಿ ತಮಿಳುನಾಡಿಗೆ 404.25 ಟಿಎಂಸಿ ಹಂಚಿಕೆಯಾಗಿದ್ದರೆ, ಕರ್ನಾಟಕದ ಬರಪೀಡಿತ ಪ್ರದೇಶಗಳನ್ನೂ ಪರಿಗಣಿಸದೆ ಕೇವಲ 284.75 ಟಿಎಂಸಿ ಮಾತ್ರ ಹಂಚಿಕೆ ಮಾಡಲಾಗಿದೆ. ಇದರೊಂದಿಗೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿಗಳು ಪ್ರತಿ 15 ದಿನಗಳಿಗೊಮ್ಮೆ ಸಭೆ ಸೇರಿ, ಜಲಾಶಯಗಳ ನೀರಿನ ಸಂಗ್ರಹಣೆಯ ವಾಸ್ತವಿಕ ಸ್ಥಿತಿಗತಿ ಆಧರಿಸಿ ಆದೇಶ ನೀಡುತ್ತಿವೆ. ಪ್ರಾಧಿಕಾರ ಸೂಚಿಸಿದಂತೆ ಈಗಾಗಲೇ ನೀರು ಹರಿಸಲಾಗಿದೆ ಎಂದು ವಾದಿಸಿತ್ತು.

ವಾದ-ವಿವಾದ ಆಲಿಸಿದ ನ್ಯಾಯಪೀಠ, ಬಾಕಿ ಇರುವ ನೀರಿನ ಪಾಲನ್ನು ತಕ್ಷಣವೇ ಬಿಡುಗಡೆ ಮಾಡಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ತಮಿಳುನಾಡು ಸಲ್ಲಿಸಿದ್ದ ಎರಡೂ ಅರ್ಜಿಗಳನ್ನು ವಜಾಗೊಳಿಸಿತು. ಏತನ್ಮಧ್ಯೆ, ತೀರ್ಪು ಪ್ರಕಟಿಸುವ ಮುನ್ನ ತಮಿಳುನಾಡು ಪರ ವಕೀಲರು, ನವೆಂಬರ್ 20ರಂದು ಮತ್ತೊಂದು ಹೊಸ ಅರ್ಜಿ ಸಲ್ಲಿಸಿರುವುದಾಗಿ ನ್ಯಾಯಪೀಠದ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿ ನ್ಯಾಯಪೀಠ, ಆ ಅರ್ಜಿಯನ್ನೂ ವಜಾಗೊಳಿಸಲಾಗುವುದು ಎಂದು ಮೌಖಿಕವಾಗಿ ಸ್ಪಷ್ಟಪಡಿಸಿತು. ಜೊತೆಗೆ, ನವೆಂಬರ್‌ 20ರಂದು ಸಲ್ಲಿಸಿದ್ದ ಅರ್ಜಿಯ ವಾದ ಮಂಡನೆಗೆ ತಮಿಳುನಾಡು ಒಂದು ವಾರದ ಸಮಯ ಕೇಳಿದ್ದರಿಂದ ವಿಚಾರಣೆಯನ್ನು ಒಂದು ವಾರ ಕಾಲ ಮುಂದುಡಿತು.

ಪ್ರತಿನಿತ್ಯ 2000 ಕ್ಯು. ನೀರು ಬಿಡುಗಡೆಗೆ ಶಿಫಾರಸು:

ನವದೆಹಲಿ: ಮಳೆ ಕೊರತೆ ಹಾಗೂ ತೀವ್ರ ಬರದ ನಡುವೆಯೇ ಕರ್ನಾಟಕಕ್ಕೆ ಸಿಡಬ್ಲ್ಯುಆರ್‌ಸಿ (ಕಾವೇರಿ ನೀರು ನಿಯಂತ್ರಣ ಸಮಿತಿ) ಮತ್ತೆ ಶಾಕ್‌ ನೀಡಿದ್ದು, ತಮಿಳುನಾಡಿಗೆ ಮುಂದಿನ‌ 15 ದಿನ ನಿತ್ಯ 2000 ಕ್ಯೂಸೆಕ್‌ ನೀರು ಹರಿಸಲು ರಾಜ್ಯಕ್ಕೆ ಶಿಫಾರಸ್ಸು ಮಾಡಿದೆ.ಇದರಿಂದಾಗಿ ತೀವ್ರ ಬರದ ನಡುವೆಯೂ ಮುಂದಿನ 15 ದಿನಗಳ ಅವಧಿಯಲ್ಲಿ ತಮಿಳುನಾಡಿಗೆ ಒಟ್ಟು 2.592 ಟಿಎಂಸಿ ನೀರು ಬಿಡುವ ಅನಿವಾರ್ಯತೆ ಕರ್ನಾಟಕಕ್ಕೆ ಎದುರಾಗಿದೆ.

ರಾಜ್ಯದಲ್ಲಿ ನೀರಿದ್ದರೆ ಖಂಡಿತ ತ.ನಾಡಿಗೆ ನೀಡುತ್ತೇವೆ:

ಬೆಂಗಳೂರು: ರಾಜ್ಯದ ಕಾವೇರಿಯಲ್ಲಿ ನೀರಿದ್ದರೆ ಖಂಡಿತವಾಗಿಯೂ ತಮಿಳುನಾಡಿಗೆ ನೀರು ನೀಡುತ್ತೇವೆ. ಆದರೆ, ಪ್ರಸ್ತುತ ನಮ್ಮ ರಾಜ್ಯದಲ್ಲಿಯೇ ಕುಡಿಯಲು ನೀರಿಲ್ಲದ ಪರಿಸ್ಥಿತಿ ಇದೆ. ಈ ವರ್ಷ ಕಾವೇರಿಗೆ ಬಾಗಿನ ಅರ್ಪಿಸಲೂ ಸಾಧ್ಯವಾಗದಂಥ ಸ್ಥಿತಿ ನಿರ್ಮಾಣವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ರಾಜ್ಯದ ಹಿತಾಸಕ್ತಿ, ರೈತರನ್ನು ರಕ್ಷಿಸುವುದು ನಮ್ಮ ಜವಾಬ್ದಾರಿ. ನಮ್ಮ ರೈತರಿಗೆ ಪರಿಸ್ಥಿತಿಯ ಗಂಭೀರತೆ ತಿಳಿಸಿ ಎಚ್ಚರಿಕೆಯಿಂದಿರುವಂತೆ ಹೇಳಿದ್ದೇನೆ ಎಂದರು. ಕಾವೇರಿ ಶಾಕ್: ನಿತ್ಯ 2000 ಕ್ಯು. ನೀರು ಬಿಡುಗಡೆಗೆ ಶಿಫಾರಸು:

ಮಳೆ ಕೊರತೆ ಹಾಗೂ ತೀವ್ರ ಬರದ ನಡುವೆಯೇ ಕರ್ನಾಟಕಕ್ಕೆ ಸಿಡಬ್ಲ್ಯುಆರ್‌ಸಿ (ಕಾವೇರಿ ನೀರು ನಿಯಂತ್ರಣ ಸಮಿತಿ) ಮತ್ತೆ ಶಾಕ್‌ ನೀಡಿದ್ದು, ತಮಿಳುನಾಡಿಗೆ ಮುಂದಿನ‌ 15 ದಿನ ನಿತ್ಯ 2000 ಕ್ಯೂಸೆಕ್‌ ನೀರು ಹರಿಸಲು ರಾಜ್ಯಕ್ಕೆ ಶಿಫಾರಸ್ಸು ಮಾಡಿದೆ.ದೆಹಲಿಯ ಪ್ರಾಧಿಕಾರದ ಕಚೇರಿಯಲ್ಲಿ ವಿನೀತ್ ಗುಪ್ತಾ ಅವರ ಅಧ್ಯಕ್ಷತೆಯಲ್ಲಿ ಸಮಿತಿಯ ಸಭೆ ನಡೆಯಿತು. ತಮಿಳುನಾಡು ಎಂದಿನಂತೆ ಬಾಕಿ ನೀರಿಗಾಗಿ ಆಗ್ರಹಿಸಿತು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕರ್ನಾಟಕ, ರಾಜ್ಯದ ತೀವ್ರ ಬರ ಪರಿಸ್ಥಿತಿಯನ್ನು ಸಮಿತಿಯ ಗಮನಕ್ಕೆ ತಂದಿತು. ರಾಜ್ಯಕ್ಕೆ ಮುಂಗಾರು ಮಳೆಯ ದಿನಗಳು ಮುಗಿದಿದ್ದು, ತಮಿಳುನಾಡಿಗೆ ಈಶಾನ್ಯ ಮಾರುತಗಳು ಶುರುವಾಗಿವೆ. ರಾಜ್ಯದಲ್ಲಿ ಈ ಬಾರಿ ತೀವ್ರ ಬರ ಎದುರಾಗಿದ್ದು, ಜಲಾಶಯಗಳ ನೀರಿನ ಹರಿವು ಅರ್ಧಕ್ಕರ್ಧ ಕುಸಿದಿದೆ. ಕಾವೇರಿ ಜಲಾನಯನ ವ್ಯಾಪ್ತಿಯ ಜಲಾಶಯಗಳ ಒಳಹರಿವು ತೀವ್ರ ಕುಸಿದಿದೆ. ಈ ಮಧ್ಯೆ, ಮುಂದಿನ ಜುಲೈ ತನಕ ನಮಗೆ ಕುಡಿಯುವ ನೀರಿನ ಸಂಗ್ರಹದ ಅಗತ್ಯ ಇದ್ದು, ಇದಕ್ಕಾಗಿ 48 ಟಿಎಂಸಿ ನೀರು ಬೇಕಿದೆ. ಕಾವೇರಿ ನಿರ್ವಹಣಾ ಸಮಿತಿ ಹಾಗೂ ಪ್ರಾಧಿಕಾರದ ಎಲ್ಲಾ ಆದೇಶಗಳನ್ನು ಪಾಲಿಸಿದ್ದೇವೆ. ಸಂಕಷ್ಟದ ಸಮಯದಲ್ಲೂ ಈ ತನಕ ನೀರು ಬಿಡುಗಡೆ ಮಾಡಲಾಗಿದೆ. ಈಗ ತಮಿಳುನಾಡಿಗೆ ನೀರು ಬಿಡುವ ಸ್ಥಿತಿಯಲ್ಲಿ ನಾವಿಲ್ಲ. ವಾಸ್ತವ ಪರಿಸ್ಥಿತಿ ನೋಡಿ, ಆದೇಶ ಮಾಡಿ ಎಂದು ವಾದಿಸಿತು.ವಾದ-ವಿವಾದ ಆಲಿಸಿದ ಸಮಿತಿ, ಪ್ರಸ್ತುತ ಜಲಾಶಯಗಳ ಒಳಹರಿವು ಮತ್ತು ನೀರಿನ ಸಂಗ್ರಹವನ್ನು ಪರಿಶೀಲಿಸಿ, ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ನಿತ್ಯ 2 ಸಾವಿರ ಕ್ಯೂಸೆಕ್‌ ನೀರು ಹರಿಸಲು ಶಿಫಾರಸ್ಸು ಮಾಡಿತು. ಇದರಿಂದಾಗಿ ತೀವ್ರ ಬರದ ನಡುವೆಯೂ ಮುಂದಿನ 15 ದಿನಗಳ ಅವಧಿಯಲ್ಲಿ ತಮಿಳುನಾಡಿಗೆ ಒಟ್ಟು 2.592 ಟಿಎಂಸಿ ನೀರು ಬಿಡುವ ಅನಿವಾರ್ಯತೆ ಕರ್ನಾಟಕಕ್ಕೆ ಎದುರಾಗಿದೆ. 25ಕ್ಕೆ ಪ್ರಾಧಿಕಾರದ ಸಭೆ: ಕೇವಲ ತಾಂತ್ರಿಕ ಶಿಫಾರಸ್ಸು ಸಮಿತಿಯಾಗಿರುವ ಸಿಡಬ್ಲ್ಯುಆರ್‌ಸಿ ನಿರ್ಣಯಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಅಂತಿಮ ಅನುಮೋದನೆ ನೀಡಬೇಕಿದೆ. ನವೆಂಬರ್ 25ರಂದು ಪ್ರಾಧಿಕಾರದ ಸಭೆ ನಿಗದಿಯಾಗಿದ್ದು, ಅದರ ತೀರ್ಮಾನದತ್ತ ಕರ್ನಾಟಕದ ಚಿತ್ತ ನೆಟ್ಟಿದೆ.-