ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಜೆಟ್‌ನಲ್ಲಿ ಜಿಲ್ಲೆಗೆ ಬಹುದೊಡ್ಡ ಕೊಡುಗೆ: ಶಾಸಕ ಯಶವಂತರಾಯಗೌಡ

| N/A | Published : Mar 09 2025, 01:49 AM IST / Updated: Mar 09 2025, 12:56 PM IST

Karnataka CM Siddaramaiah with Budget document (Photo/ANI)
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಜೆಟ್‌ನಲ್ಲಿ ಜಿಲ್ಲೆಗೆ ಬಹುದೊಡ್ಡ ಕೊಡುಗೆ: ಶಾಸಕ ಯಶವಂತರಾಯಗೌಡ
Share this Article
  • FB
  • TW
  • Linkdin
  • Email

ಸಾರಾಂಶ

  ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ಸಮಗ್ರ ಕರ್ನಾಟಕ ದೂರದೃಷ್ಠಿ ಹೊಂದಿದ್ದು, ಬಜೆಟ್‌ನ್ನು ಸ್ವಾಗತಿಸುತ್ತೇನೆ. ಇಂಡಿ ಪಟ್ಟಣಕ್ಕೆ ಜಿಟಿಟಿಸಿ ಕಾಲೇಜು ಘೋಷಿಸಿದಕ್ಕೆ ತಾಲೂಕಿನ ಜನತೆ ಪರವಾಗಿ ಸಿಎಂ ಸಿದ್ದರಾಮಯ್ಯಗೆ ಅಭಿನಂದಿಸುವುದಾಗಿ ಶಾಸಕ ಯಶವಂತರಾಯಗೌಡ ಪಾಟೀಲ ತಿಳಿಸಿದರು.

  ಇಂಡಿ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ಸಮಗ್ರ ಕರ್ನಾಟಕ ದೂರದೃಷ್ಠಿ ಹೊಂದಿದ್ದು, ಬಜೆಟ್‌ನ್ನು ಸ್ವಾಗತಿಸುತ್ತೇನೆ. ಇಂಡಿ ಪಟ್ಟಣಕ್ಕೆ ಜಿಟಿಟಿಸಿ ಕಾಲೇಜು ಘೋಷಿಸಿದಕ್ಕೆ ತಾಲೂಕಿನ ಜನತೆ ಪರವಾಗಿ ಸಿಎಂ ಸಿದ್ದರಾಮಯ್ಯಗೆ ಅಭಿನಂದಿಸುವುದಾಗಿ ಶಾಸಕ ಯಶವಂತರಾಯಗೌಡ ಪಾಟೀಲ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ವಿಜಯಪುರ ಜಿಲ್ಲೆಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಆಲಮಟ್ಟಿ ಅಣೆಕಟ್ಟನ್ನು 524 ಕ್ಕೆ ಎತ್ತರಿಸುವ ಕಾರ್ಯ ಬಜೆಟ್‌ನಲ್ಲಿ ಅಳವಡಿಸಲಾಗಿದೆ. ಇದು ನೀರಾವರಿಗೆ ಅನುಕೂಲವಾಗಲಿದೆ. ಕೃಷ್ಣಾ, ಕಾವೇರಿ ಜೀವನದಿ. ಈ ಯೋಜನೆಯಿಂದ ರೈತರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಿದೆ. ಕೃಷ್ಣಾ ಮೇಲ್ಡಂಡೆ ಕಾಲುವೆ ಯೋಜನೆಗಳು ಪೂರ್ಣಗೊಳ್ಳಲು ಆಣೆಕಟ್ಟು ಎತ್ತರದ ಅವಶ್ಯಕತೆ ಇತ್ತು. ಪಂಢರಪುರ-ಗಾಣಗಾಪುರ ರಸ್ತೆ ರಾಜ್ಯ ಹೆದ್ದಾರಿಯಾಗಿ 115 ಕಿಲೋ ಮೀಟರ್ ರಸ್ತೆ ಅಭಿವೃದ್ಧಿಗೆ ಅನುಮೋದನೆ ದೊರಕಿದೆ. 

ಈ ರಸ್ತೆಯು ಝಳಕಿ, ಇಂಡಿ, ಅಫಜಲಪುರ ಮಾರ್ಗದಲ್ಲಿ ಬರಲಿದ್ದು, ಪಂಢರಪೂರ -ಗಾಣಗಾಪೂರ ರಸ್ತೆ ಮಾರ್ಗ ಸುಧಾರಿಸಬೇಕು ಎಂಬ ನಮ್ಮ ಬೇಡಿಕೆಗೆ ಸರ್ಕಾರ ಬಜೆಟ್‌ನಲ್ಲಿ ಸಮ್ಮತಿ ನೀಡಿದೆ. ನಮ್ಮ ಅಧಿಕಾರಾವಧಿಯಲ್ಲಿಯೇ ಅನುಮೋದನೆ ಸಿಕ್ಕಿರುವುದು ಅತ್ಯಂತ ಸಂತಸ ವಿಚಾರ. ಇಂಡಿಯಲ್ಲಿ ನಬಾರ್ಡ್‌ ಸಹಯೋಗದಲ್ಲಿ ಹೊಸ ಸಿಟಿಟಿಸಿ ಕಾಲೇಜು ಸ್ಥಾಪನೆ ಘೋಷಣೆಯಾಗಿದೆ. ಇ-ಆಫೀಸ್ ತಂತ್ರಾಂಶ ಅಭಿವೃದ್ಧಪಡಿಸುವುದರಿಂದ ಆಡಳಿತ ಯಂತ್ರ ಜನರ ಬೆರಳ ತುದಿಯಲ್ಲಿ ಲಭ್ಯವಾಗಲಿದೆ. ರಾಜ್ಯದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಸಿಎಂ ಸಿದ್ದರಾಮಯ್ಯ ಜನಪರ ಬಜೆಟ್ ಮಂಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.