ಎತ್ತಿನ ಗಾಡಿಗೆ ಬೈಕ್ ಡಿಕ್ಕಿ ಸವಾರ ಸಾವು

| Published : Nov 04 2023, 12:31 AM IST

ಎತ್ತಿನ ಗಾಡಿಗೆ ಬೈಕ್ ಡಿಕ್ಕಿ ಸವಾರ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಎತ್ತಿನ ಗಾಡಿಗೆ ಬೈಕ್ ಡಿಕ್ಕಿ ಸವಾರ ಸಾವು
ಕಡೂರು: ತಾಲೂಕಿನ ಚೌಳ ಹಿರಿಯೂರಿನಿಂದ ಬಾಗಶೆಟ್ಟಿಹಳ್ಳಿಗೆ ತೆರಳುತ್ತಿದ್ದ ಬೈಕ್ ಸವಾರ ಎತ್ತಿನ ಗಾಡಿಗೆ ಗುದ್ದಿಕೊಂಡು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಯಗಟಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಾಗಶೆಟ್ಟಿಹಳ್ಳಿ ಗ್ರಾಮದ ಈಶ್ವರಪ್ಪ ಅವರ ಮಗ ರಮೇಶ್(40) ಮೃತ ದುರ್ಧೈವಿ. ಗುರುವಾರ ರಾತ್ರಿ ಚೌಳ ಹಿರಿಯೂರಿನಿಂದ ಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ರೇಣುಕಪ್ಪ ಅವರ ತೋಟದ ಸಮೀಪ ಈ ದುರ್ಘಟನೆ ಸಂಭವಿಸಿದೆ ಎಂದು ಈಶ್ವರಪ್ಪ ಠಾಣೆಗೆ ದೂರು ನೀಡಿದ್ದಾರೆ. ಯಗಟಿ ಪಿಎಸ್‍ಐ ರಂಗನಾಥ್ ದೂರು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.