ಸಾರಾಂಶ
ಸತ್ತೇಗಾಲ ಹ್ಯಾಂಡ್ ಪೋಸ್ಟ್‌ನ ಬೈಕ್ ಸವಾರ ರಮೇಶ್ ಹಾಗೂ ಪಾದಚಾರಿಗಳಾದ ಚೆಲುವನಹಳ್ಳಿ ಗ್ರಾಮದ ರೇವಮ್ಮ, ಕಿನಕಹಳ್ಳಿ ಬಸವಣ್ಣ ಹಾಗೂ ಗೀತಾ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊಳ್ಳೇಗಾಲ:
ತಾಲೂಕಿನ ಸರಗೂರು- ಚೆಲುವನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾದಚಾರಿಗಳಿಗೆ ಬೈಕ್ ಡಿಕ್ಕಿಯಾಗಿ ನಾಲ್ಕು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜರುಗಿದೆ.ಸತ್ತೇಗಾಲ ಹ್ಯಾಂಡ್ ಪೋಸ್ಟ್‌ನ ಬೈಕ್ ಸವಾರ ರಮೇಶ್ ಹಾಗೂ ಪಾದಚಾರಿಗಳಾದ ಚೆಲುವನಹಳ್ಳಿ ಗ್ರಾಮದ ರೇವಮ್ಮ, ಕಿನಕಹಳ್ಳಿ ಬಸವಣ್ಣ ಹಾಗೂ ಗೀತಾ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಸರಗೂರು ಗ್ರಾಮದವರ ಮದುವೆಗೆ ಹೋಗಿದ್ದವರು ಮದುವೆ ಮುಗಿಸಿ ವಾಪಸ್ಸು ಸರಗೂರಿಗೆ ಬಂದು ತಮ್ಮ ಗ್ರಾಮಕ್ಕೆ ರೇವಮ್ಮ ತನ್ನ ಸಂಬಂಧಿಕರಾದ ಬಸವಣ್ಣ, ಬೇಬಿ ಹಾಗೂ ಗೀತಾ ಅವರನ್ನು ಕರೆದುಕೊಂಡು ನಡೆದುಕೊಂಡು ಹೋಗುವಾಗ ಹಿಂಬದಿಯಿಂದ ಬಂದ ಬೈಕ್ ಸವಾರ ಡಿಕ್ಕಿ ಹೊಡೆದಿದೆ.
ಪರಿಣಾಮ ಗಾಯಗೊಂಡ ರೇವಮ್ಮ, ಬಸವಣ್ಣ, ಬೇಬಿ ಹಾಗೂ ಬೈಕ್ ಸವಾರ ರಮೇಶ್ ಅವರನ್ನು ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆಗೆ ದಾಖಲಿಸಿದ್ದು, ಈ ಪೈಕಿ ಹೆಚ್ಚಿನ ಚಿಕಿತ್ಸೆಗಾಗಿ ರಮೇಶ್ ಎಂಬುವರನ್ನು ಚಾ.ನಗರ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವಿಚಾರ ತಿಳಿಯುತ್ತಿದ್ದಂತೆ ಹನೂರು ಬಿಜೆಪಿ ಯುವ ನಾಯಕ, ಉದ್ಯಮಿ ನಿಶಾಂತ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿ, ಶೀಘ್ರ ಗುಣಣಖರಾಗುವಂತೆ ಹಾರೈಸಿದರು.
---- 8ಕೆಜಿಎಲ್ 21ಬೈಕ್ ಡಿಕ್ಕಿಯಾದ ಪರಿಣಾಮ ಕೊಳ್ಳೇಗಾ ಆಸ್ಪತ್ರೆಗೆ ದಾಖಲಾದ ಗಾಯಾಳುಗಳನ್ನು ಬಿಜೆಪಿ ನಾಯಕ ನಿಶಾಂತ್ ಬೀಟಿ ನೀಡಿ ಆರೋಗ್ಯ ವಿಚಾರಿಸಿದರು.