ಸಾರಾಂಶ
ಅಂತರ್ಜಲ ಅಭಿವೃದ್ಧಿ ಹಾಗೂ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಒತ್ತಾಯಿಸಿ ಕಾವೇರಿ ನದಿಗೆ ಸೇತುವೆ ನಿರ್ಮಾಣ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಆ.5ರಂದು ದಂಟಳ್ಳಿ ಮುಖಾಂತರ ಬೈಕ್ ರ್‍ಯಾಲಿಯಲ್ಲಿ ತೆರಳಿ ಕಾವೇರಿ ನದಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಶೈಲೇಂದ್ರ ಕುಮಾರ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಹನೂರು
ಅಂತರ್ಜಲ ಅಭಿವೃದ್ಧಿ ಹಾಗೂ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಒತ್ತಾಯಿಸಿ ಕಾವೇರಿ ನದಿಗೆ ಸೇತುವೆ ನಿರ್ಮಾಣ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಆ.5ರಂದು ದಂಟಳ್ಳಿ ಮುಖಾಂತರ ಬೈಕ್ ರ್‍ಯಾಲಿಯಲ್ಲಿ ತೆರಳಿ ಕಾವೇರಿ ನದಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಶೈಲೇಂದ್ರ ಕುಮಾರ್ ತಿಳಿಸಿದ್ದಾರೆ.ಪಟ್ಟಣದ ಲೋಕೋಪಯೋಗಿ ವಸತಿಗೃಹದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ಪಂಚೇಂದ್ರಿಯಗಳು ಇಲ್ಲದ ಸರ್ಕಾರ ಇತ್ತ ಗಮನಹರಿಸಬೇಕು. ತಾಲೂಕಿನ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವುದು ಸರ್ಕಾರದ ಮೂಲಭೂತ ಜವಾಬ್ದಾರಿ. ಆದರೆ, ನಮ್ಮನ್ನು ಆಳ್ಬಿಕೆ ಮಾಡಿದ ಸರ್ಕಾರಗಳು ಈವರೆಗೆ ತಮ್ಮ ಜವಾಬ್ದಾರಿಗಳನ್ನು ನಿರ್ವಹಸದೆ ಕಡೆಗಣಿಸಿವೆ. ಕಣ್ಣು ಕಿವಿ ಹಾಗೂ ಪಂಚೇಂದ್ರಿಯಗಳು ಇಲ್ಲದಂತೆ ವರ್ತಿಸುತ್ತಿರುವ ಸರ್ಕಾರ ಹಾಗೂ ಜನಪ್ರತಿನಿಧಿಗಳ ಇಚ್ಚ ಶಕ್ತಿ ಕೊರತೆಯಿಂದ ಇದರ ಪರಿಣಾಮವಾಗಿ ಅನೇಕ ಗ್ರಾಮಗಳ ನಿವಾಸಿಗಳು ಪ್ರತಿದಿನ ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಆರೋಪಿಸಿದರು.ಮಾರ್ಟಳ್ಳಿ ಪಂಚಾಯಿತಿ ವ್ಯಾಪ್ತಿಯ ಹಾಲೇರಿ ಕೆರೆ (ಸು. 50 ಎಕರೆ) ಮತ್ತು ಕೀರಪಾತಿ ಕೆರೆ ಅಭಿವೃದ್ಧಿಪಡಿಸಬೇಕು. ಈ ಕೆರೆಗಳಿಗೆ ಕಾವೇರಿ ನದಿಯಿಂದ ದಂಟಳ್ಳಿ ಮಾರ್ಗವಾಗಿ ನೀರು ಹರಿಸಬೇಕು.ವಡಕೆಹಳ್ಳದ ದೊಡ್ಡಹಳ್ಳ ಸೇರಿದಂತೆ 22ಕ್ಕೂ ಹೆಚ್ಚು ಗ್ರಾಮಗಳಿಗೆ ಇದು ಉಪಯೋಗವಾಗುತ್ತದೆ.
ಉಳಿದ ನೀರನ್ನು ಗರಿಕೆ ಖಂಡಿ ಮೂಲಕ ಮೆಟ್ಟೂರು ಡ್ಯಾಂಗೆ ಮರಳಿಸಬಹುದು. ಶೆಟ್ಟಹಳ್ಳಿ ಮತ್ತು ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಕಟ್ಟೆಗಳಿಗೆ ನೀರಾವರಿ ಯೋಜನೆ ನೀಡಬೇಕು.ದಂಟಳ್ಳಿ ಬಳಿ ಕಾವೇರಿ ನದಿಗೆ ಸೇತುವೆ ನಿರ್ಮಿಸಿದರೆ, ಬೆಂಗಳೂರು ಸಂಪರ್ಕ ಸುಲಭವಾಗಿ, ಉದ್ಯೋಗಕ್ಕಾಗಿ ಸ್ಥಳಾಂತರಗೊಳ್ಳುವವರಿಗೆ ಹಾಗೂ ಲಕ್ಷಾಂತರ ಮಾದಪ್ಪನ ಭಕ್ತರಿಗೆ ಅನುಕೂಲವಾಗುತ್ತದೆ.ಮಲೈ ಮಹದೇಶ್ವರ ಅರಣ್ಯ ವಲಯದಲ್ಲಿ ಹುಲಿ ಯೋಜನೆ ಕೈಬಿಡಬೇಕು, ಕಾರಣ ಈ ಪ್ರದೇಶದಲ್ಲಿ ಹೆಚ್ಚಿನ ಗ್ರಾಮೀಣ ಜನರು ವಾಸಿಸುತ್ತಿದ್ದಾರೆ. ರೈತರ ಬೆಳೆಗಳಿಗೆ ರಕ್ಷಣೆ ನೀಡುವುದು ಅಗತ್ಯವಾಗಿದೆ ಹಾಗೂಇನದನೂ 10 ಕ್ಕೂ ಹೆಚ್ಚು ಬೇಡಿಕೆಗಳನ್ನು ಈಡೇರಿಸುವಂತೆ ಆ. 5 ರಂದು ಬೈಕ್ ರಾಲಿ ಮೂಲಕ ಕಾವೇರಿ ನದಿಗೆ ತೆರಳಿ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತದೆ ಸಂಬಂಧಿಸಿದ ಅಧಿಕಾರಿಗಳು ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರುತಮಿಳುನಾಡಿನ ರೈತ ಮುಖಂಡರು ಪ್ರತಿಭಟನೆಯಲ್ಲಿ ಭಾಗಿ :
ಮೊದಲ ಬಾರಿಗೆ ತಾಲೂಕಿನಲ್ಲಿ ತಮಿಳುನಾಡಿನಿಂದ ಅಲ್ಲಿನ ರೈತ ಮುಖಂಡರು ಇಲ್ಲಿನ ಸಮಸ್ಯೆಗಳನ್ನು ಅರಿತು ಸಹಕಾರ ನೀಡುವ ಸದುದ್ದೆಸದಿಂದ ತಮಿಳುನಾಡಿನಿಂದ 20ಕ್ಕೂ ಹೆಚ್ಚು ರೈತ ಮುಖಂಡರು ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸಲಿದ್ದಾರೆ ಎಂದು ತಿಳಿಸಿದರು.ಈ ವೇಳೆ ರೈತ ಮುಖಂಡರಾದ ಅಪರ್ದ್ ಸ್ವಾಮಿ, ಲೂರ್ದುಸ್ವಾಮಿ, ಜೊಸೆಫ್ ಕುಮಾರ್ ವಿವಿಧ ಗ್ರಾಮದ ರೈತ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.