ಬಸ್‌ ನಿಲ್ದಾಣಕ್ಕೆ ಜಾಗ ನೀಡಲು ಬೈಕ್‌ ರ್‍ಯಾಲಿ: ಗೌ.ಹಾಲೇಶ್

| Published : Nov 13 2025, 02:15 AM IST

ಬಸ್‌ ನಿಲ್ದಾಣಕ್ಕೆ ಜಾಗ ನೀಡಲು ಬೈಕ್‌ ರ್‍ಯಾಲಿ: ಗೌ.ಹಾಲೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಪುರಸಭೆ ಮುಂಭಾಗ ಹಾಗೂ ಖಾಸಗಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಸರ್ಕಾರಿ ಜಾಗದಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಕ್ಕೆ ಜಾಗ ನೀಡಬೇಕೆಂದು ಒತ್ತಾಯಿಸಿ ದಾವಣಗೆರೆಯ ಜಿಲ್ಲಾಧಿಕಾರಿಗಳ ಕಚೇರಿಗೆ ದ್ವಿಚಕ್ರ ವಾಹನಗಳ ರ್‍ಯಾಲಿಯ ಮೂಲಕ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ಮಯೂರ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಗೌ.ಹಾಲೇಶ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚನ್ನಗಿರಿ

ಪಟ್ಟಣದ ಪುರಸಭೆ ಮುಂಭಾಗ ಹಾಗೂ ಖಾಸಗಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಸರ್ಕಾರಿ ಜಾಗದಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಕ್ಕೆ ಜಾಗ ನೀಡಬೇಕೆಂದು ಒತ್ತಾಯಿಸಿ ದಾವಣಗೆರೆಯ ಜಿಲ್ಲಾಧಿಕಾರಿಗಳ ಕಚೇರಿಗೆ ದ್ವಿಚಕ್ರ ವಾಹನಗಳ ರ್‍ಯಾಲಿಯ ಮೂಲಕ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ಮಯೂರ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಗೌ.ಹಾಲೇಶ್ ತಿಳಿಸಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಇಲ್ಲಿನ ಮಯೂರ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘ, ವಿಶ್ವ ಮಾನವ ಹಕ್ಕು ಸಮಿತಿ, ಕನ್ನಡ ಜಾಗೃತಿ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ ಜಂಟಿಯಾಗಿ ನ.13ರ ಗುರುವಾರ ಬೆಳಿಗ್ಗೆ 8.35ಕ್ಕೆ ಪಟ್ಟಣದ ಶ್ರೀ ಕೇದಾರಶಾಖಾ ಹಿರೇಮಠದ ಆವರಣದಿಂದ ದ್ವಿಚಕ್ರವಾಹನಗಳ ರ್‍ಯಾಲಿ ಆರಂಭವಾಗಲಿದೆ ಎಂದರು.

ಈ ದ್ವಿಚಕ್ರವಾಹನ ರ್‍ಯಾಲಿಯ ನೇತೃತ್ವವನ್ನು ಪಟ್ಟಣದ ಹಿರೇಮಠದ ಡಾ.ಶ್ರೀ.ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ ಎಂದರು.

ಚನ್ನಗಿರಿ ಪಟ್ಟಣದ ಅಜ್ಜಿಹಳ್ಳಿ ಅತ್ತಿರ ಕಳೆದ ತಿಂಗಳಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಉದ್ಘಾಟನೆಯಾಗಿದೆ. ಆದರೆ ಸರ್ಕಾರಿ ಬಸ್ ನಿಲ್ದಾಣ ಇಲ್ಲದೆ ಇರುವುದರಿಂದ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಿದೆ. ವಾಹನ ಸಂಚಾರಗಳ ದಟ್ಟನೆಯಿಂದ ಅನೇಕ ಅಪಘಾತಗಳು ನಡೆದಿದ್ದು ಇದನ್ನೆಲ್ಲಾ ಗಮನಿಸಿ ಪಟ್ಟಣದ ಪುರಸಭೆಯ ಮುಂಭಾಗ ಮತ್ತು ಖಾಸಗಿ ಬಸ್ ನಿಲ್ದಾಣದ ಪಕ್ಕದ ಸರ್ಕಾರದ ಖಾಲಿ ಜಾಗ ಇದ್ದು ಪುರಸಭೆಯ ಅಸೆಸ್ಮೆಂಟ್ ನಂಬರ್ 268/247 ಮತ್ತು 269/248 ಈ ನಂಬರ್‌ನಲ್ಲಿ 2 ಎಕರೆಯ ಖಾಲಿ ಜಾಗ ಇದೆ. ಇದನ್ನು ಸರ್ಕಾರಿ ಬಸ್ ನಿಲ್ದಾಣವನ್ನು ನಿರ್ಮಿಸಲು ಕೆಎಸ್‌ಆರ್‌ಟಿಸಿ ನಿಗಮಕ್ಕೆ ವಹಿಸಿಕೊಡುವಂತೆ ಮೇಲ್ಕಂಡ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಾರಿಗೆ ಸಚಿವರು, ಕಂದಾಯ ಸಚಿವರು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದ್ದು ಅವರೆಲ್ಲರೂ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದರೂ ವಿಳಂಬ ಆಗುತ್ತಿರುವ ಹಿನ್ನೆಲೆ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ ಎಂದರು.

ಸ್ವಯಂ ಪ್ರೇರಿತವಾಗಿ ಭಾಗವಹಿಸುವಂತವರು 9980750237, 9449363744, 8277409963, 9743004080, 9900340117, 9743967772, 9449494462 ಈ ನಂಬರ್‌ಗೆ ಕರೆ ಮಾಡಬೇಕು. ಈ ರ್‍ಯಾಲಿಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಬರಬೇಕು ಎಂದು ತಿಳಿಸಿದರು.

ತಾಲೂಕು ಮಾನವ ಹಕ್ಕು ಪ್ರತಿಷ್ಠಾನದ ಅಧ್ಯಕ್ಷ ಚಿಕ್ಕೋಲಿಕೆರೆ ನಾಗೇಂದ್ರಪ್ಪ, ಬುಳ್ಳಿಗಣೇಶ್, ನಾಗರಾಜ್ ಹಾಜರಿದ್ದರು.