ಸಾರಾಂಶ
ಕನ್ನಡ ಭಾಷಾಭಿವೃದ್ಧಿ ಹಾಗೂ ಕನ್ನಡಿಗರಿಗೆ ಉದ್ಯೋಗ ಅವಕಾಶಗಳನ್ನು ಹೆಚ್ಚಿಸಲು ಕರ್ನಾಟಕ ರಾಜ್ಯಕ್ಕೆ ದ್ವಿಭಾಷಾ ಸೂತ್ರದ ತುರ್ತು ಅಗತ್ಯವಿದೆ. ಇದನ್ನು ರಾಜ್ಯ ಸರ್ಕಾರ ತಡಮಾಡದೇ ದ್ವಿಭಾಷಾ ಸೂತ್ರವನ್ನು ಅಳವಡಿಸಬೇಕು ಎಂದು ಚನ್ನಗಿರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಲ್.ಜಿ.ಮಧುಕುಮಾರ್ ಅಭಿಪ್ರಾಯಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಚನ್ನಗಿರಿ
ಕನ್ನಡ ಭಾಷಾಭಿವೃದ್ಧಿ ಹಾಗೂ ಕನ್ನಡಿಗರಿಗೆ ಉದ್ಯೋಗ ಅವಕಾಶಗಳನ್ನು ಹೆಚ್ಚಿಸಲು ಕರ್ನಾಟಕ ರಾಜ್ಯಕ್ಕೆ ದ್ವಿಭಾಷಾ ಸೂತ್ರದ ತುರ್ತು ಅಗತ್ಯವಿದೆ. ಇದನ್ನು ರಾಜ್ಯ ಸರ್ಕಾರ ತಡಮಾಡದೇ ದ್ವಿಭಾಷಾ ಸೂತ್ರವನ್ನು ಅಳವಡಿಸಬೇಕು ಎಂದು ಚನ್ನಗಿರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಲ್.ಜಿ.ಮಧುಕುಮಾರ್ ಅಭಿಪ್ರಾಯಿಸಿದ್ದಾರೆ.ಕನ್ನಡ ಭಾಷೆಯನ್ನು ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಶಾಶ್ವತವಾಗಿ ಉಳಿಸುವ ದೃಷ್ಠಿಯಿಂದ ದ್ವಿಭಾಷಾ ಸೂತ್ರ ಒಂದೇ ದಾರಿಯಾಗಿದೆ. ಇದರ ಶೀಘ್ರ ಅನುಷ್ಠಾನಕ್ಕೆ ಸರ್ಕಾರ ಮುಂದಾಗಬೇಕು. ಮಗುವಿನ ಸಾಂಸ್ಕೃತಿಕ ವಿಕಾಸಕ್ಕಾಗಿ ತಾಯಿ ನುಡಿಯಲ್ಲಿ ಕಲಿಕೆ ಇರಬೇಕು. ಭವಿಷ್ಯದಲ್ಲಿ ಹೊರಗಿನ ಪ್ರಪಂಚದೊಂದಿಗೆ ವ್ಯವಹರಿಸಲು ಮತ್ತು ಭೌತಿಕವಾಗಿ ಅಭಿವೃದ್ಧಿ ಸಾಧಿಸಲು ಇಂಗ್ಲಿಷ್ ಭಾಷೆಯೂ ಬೇಕು ಎಂದಿದ್ದಾರೆ.
ಕನ್ನಡದ ಸಾಕ್ಷಿಪ್ರಜ್ಞೆ ರಾಷ್ಟ್ರಕವಿ ಕುವೆಂಪು ತಮ್ಮ ನಿಲುವನ್ನು ಈ ಹಿಂದೆಯೇ ಸ್ಪಷ್ಟಪಡಿಸಿದ್ದರು. ಹಿಂದಿ ಭಾಷೆ ಒಂದೇ ರಾಷ್ಟ್ರಭಾಷೆ ಎಂಬ ಭ್ರಮೆಯಿಂದ ನಾವೆಲ್ಲಾ ಹೊರಬರಬೇಕಾಗಿದೆ. ಹಲವು ಭಾಷೆಗಳ ನಾಡಿನಲ್ಲಿ ಕೇವಲ ಒಂದು ಭಾಷೆಯ ಬೆನ್ನಿಗೆ ನಿಂತು ಇನ್ನುಳಿದ ಭಾಷೆಗಳನ್ನು ಕಡೆಗಣಿಸುವ ಕ್ರಮಗಳು ಭಾಷಾ ಪ್ರಾಂತ್ಯಗಳ ಒಕ್ಕೂಟ ಹಾಗೂ ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕಿಯಂತೆ ಎಂದು ತಿಳಿಸಿದ್ದಾರೆ.ರಾಷ್ಟ್ರಮಟ್ಟದ ಪರೀಕ್ಷೆಗಳು ಇಂಗ್ಲಿಷ್ ಮತ್ತು ಹಿಂದಿಯಲ್ಲಿಯೇ ನಡೆಯುತ್ತವೆ. ಆದ್ದರಿಂದ ದೊಡ್ಡ ಪ್ರಮಾಣದಲ್ಲಿ ಹಿಂದಿ ಭಾಷಿಕರು ಆಯ್ಕೆಯಾಗುತ್ತಿದ್ದಾರೆ. ಇದರಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಈಗಿನ ಅಗತ್ಯವೇನೆಂದರೆ ಸಂವಿಧಾನದ 8ನೇ ಅನುಚ್ಛೇದದಲ್ಲಿರುವ ಭಾರತೀಯ ಭಾಷೆಗಳನ್ನು ಅದಕ್ಕೆ ದ್ವಿಭಾಷಾ ಸೂತ್ರ ಒಂದೇ ಮಾರ್ಗ ಎಂದು ತಿಳಿಸಿದ್ದಾರೆ.
- - --15ಕೆಸಿಎನ್‌ಜಿ2.ಜೆಪಿಜಿ: ಎಲ್.ಜಿ. ಮಧುಕುಮಾರ್