ಗುತ್ತಿಗೆದಾರರಿಗೆ ಷರತ್ತು ವಿಧಿಸಿ ಬಿಲ್ ಪಾವತಿ: ಸಿದ್ದರಾಮಯ್ಯ

| Published : Feb 19 2024, 01:38 AM IST

ಗುತ್ತಿಗೆದಾರರಿಗೆ ಷರತ್ತು ವಿಧಿಸಿ ಬಿಲ್ ಪಾವತಿ: ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ನಿರ್ಮಾಣವಾಗುತ್ತಿರುವ ನಾಲ್ಕು ಮೆಡಿಕಲ್ ಕಾಲೇಜ್‌ಗಳ ಕಾಮಗಾರಿ ಕುರಿತು ತನಿಖೆ ನಡೆದಿದೆ. ಆದರೆ ಗುತ್ತಿಗೆದಾರರಿಗೆ ಷರತ್ತು ವಿಧಿಸಿ ಬಿಲ್ ಪಾವತಿಸುತ್ತಿದ್ದೇವೆ.

ನಾಲ್ಕು ಮೆಡಿಕಲ್ ಕಾಲೇಜ್‌ಗಳ ಕಾಮಗಾರಿ ಕುರಿತು ತನಿಖೆ: ಸಿಎಂ

ಕನ್ನಡಪ್ರಭ ವಾರ್ತೆ ಹಾವೇರಿ

ರಾಜ್ಯದಲ್ಲಿ ನಿರ್ಮಾಣವಾಗುತ್ತಿರುವ ನಾಲ್ಕು ಮೆಡಿಕಲ್ ಕಾಲೇಜ್‌ಗಳ ಕಾಮಗಾರಿ ಕುರಿತು ತನಿಖೆ ನಡೆದಿದೆ. ಆದರೆ ಗುತ್ತಿಗೆದಾರರಿಗೆ ಷರತ್ತು ವಿಧಿಸಿ ಬಿಲ್ ಪಾವತಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಹೊರವಲಯದಲ್ಲಿ ನಿರ್ಮಾಣಗೊಳ್ಳುತ್ತಿರುವ ಮೆಡಿಕಲ್ ಕಾಲೇಜ್‌ನ ಕಾಮಗಾರಿ ಪರಿಶೀಲಿಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆಡಿಕಲ್ ಕಾಲೇಜ್‌ನ ಹಾಸ್ಟೆಲ್ ಕಟ್ಟಡಗಳು ಪೂರ್ಣಗೊಳ್ಳಬೇಕಿದೆ. ಕಾಮಗಾರಿ ಮಾಡಿದ್ದಕ್ಕೆ ಗುತ್ತಿಗೆದಾರಿಗೆ ಬಿಲ್ ಪಾವತಿಸುತ್ತಿದ್ದೇವೆ ಎಂದರು.

ಒಬಿಸಿ ಹಾಸ್ಟೆಲ್‌ಗಳಿಗೆ ಅಕ್ಕಿ ಕೊರತೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಕ್ಕಿಗೇನು ತೊಂದರೆ ಇಲ್ಲ, ಎಲ್ಲ ಹಾಸ್ಟೆಲ್‌ಗಳಿಗೆ ಅಕ್ಕಿ ಕೊಡ್ತಿದ್ದೇವೆ ಎಂದರು.

ಲೋಕಾಯುಕ್ತ ಟ್ರಾಪ್ ಆದ ರಾಣಿಬೆನ್ನೂರು ತಹಸೀಲ್ದಾರರೇ ಮತ್ತೆ ಅದೇ ಹುದ್ದೆಗೆ ಬಂದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಭ್ರಷ್ಟಾಚಾರ ಇಲ್ಲ ಎಂದು ಯಾರು ಹೇಳಿದ್ದು? ಭ್ರಷ್ಟಾಚಾರ ಕಡಿಮೆ ಮಾಡ್ತೀವಿ ಎಂದಿದ್ದೇವೆ. ಹಾವೇರಿ ಜಿಲ್ಲೆಯ ಹಲವೆಡೆ ತುಂಗಭದ್ರಾ ನದಿ ದಡದಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ಈ ಬಗ್ಗೆ ತನಿಖೆ ನಡೆದಿದೆ, ಖಂಡಿತವಾಗಿ ಕ್ರಮಕೈಗೊಳ್ಳುತ್ತೇವೆ.

ಈ ದೇಶದ ಸಂಪತ್ತಿಗೆ ಅಲ್ಪಸಂಖ್ಯಾತರು ಮೊದಲ ಹಕ್ಕುದಾರರು ಎಂಬ ತಮ್ಮ ಹೇಳಿಕೆ ಸಮರ್ಥನೆ ಮಾಡಿಕೊಂಡ ಸಿಎಂ, ಎಲ್ಲರೂ ಹಕ್ಕುದಾರರು. 140 ಕೋಟಿ ಜನಾನೂ ಹಕ್ಕುದಾರರೇ ಎಂದರು.

ಕೇಂದ್ರ ಸರ್ಕಾರದಿಂದ ಪರಿಹಾರ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾವು 5 ತಿಂಗಳಲ್ಲಿ ಎರಡು ಮನವಿ ಕೊಟ್ಟಿದ್ದೇವೆ. ₹35,000 ಕೋಟಿ ಬೆಳೆ ನಷ್ಟ ಆಗಿದೆ. ₹18171 ಕೋಟಿ ಪರಿಹಾರ ಕೊಡಿ ಎಂದು ಕೇಳಿದ್ದೇವೆ. ಇವತ್ತಿನವರೆಗೆ ಮೀಟಿಂಗ್ ಮಾಡಿಲ್ಲ, ಒಂದು ರು. ಬಿಡುಗಡೆ ಮಾಡಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು. ಜಿಲ್ಲೆಯಲ್ಲಿ ಮಟ್ಕಾ ಹಾವಳಿ ಹೆಚ್ಚಾಗಿರುವ ಸುದ್ದಿಗಾರರ ಪ್ರಶ್ನಿಸಿದಾಗ ತಕ್ಷಣವೇ ಎಸ್‌ಪಿಯನ್ನು ಕರೆದ ಸಿಎಂ ಅದರ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.