ಶಿವಮೊಗ್ಗ: ಗೃಹ ಜ್ಯೋತಿ ಸಂಪರ್ಕ ಪಡೆದವರಿಗೆ ಯಾವುದೇ ಗೊಂದಲವಿಲ್ಲ. 1.64 ಕೋಟಿ ಅರ್ಹ ಫಲಾನುಭವಿಗಳಿಗೆ ಉಚಿತ ವಿದ್ಯುತ್ ಸಂಪರ್ಕ ನೀಡಿದ್ದೇವೆ. 200 ಯೂನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಸಿದರೆ ಆಗ ಬಿಲ್ ಹೆಚ್ಚಾಗಲಿದೆ ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ಶಿವಮೊಗ್ಗದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯುತ್ ಖಾಸಗೀಕರಣದ ಬಗ್ಗೆ ರಾಜ್ಯ ಸರ್ಕಾರದಿಂದ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಸಿಎಂ ಕೂಡ ಈ ಬಗ್ಗೆ ಉತ್ತರ ನೀಡಿದ್ದಾರೆ ಎಂದರು.ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎಸ್.ಐ.ಆರ್ ಹೆಸರಲ್ಲಿ ವೋಟರ ಲಿಸ್ಟ್ ನಿಂದ ಮತದಾರರ ಹೆಸರು ತೆಗೆದು ಹಾಕುವ ಬಗ್ಗೆ ಆತಂಕವಿದೆ. ವೋಟರ್ ಲಿಸ್ಟ್ ನಿಂದ ಹೆಸರು ತೆಗೆದು ಹಾಕಿದರೆ ಭಾರತದ ಪೌರತ್ವವೇ ಇರುವುದಿಲ್ಲ. ಈ ವಿಚಾರವಾಗಿ ಈಗಾಗಲೇ ಸ್ಪಷ್ಟವಾಗಿ ನಮ್ಮ ಪಕ್ಷ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.
ಈ ಬಾರಿ ಮಳೆ ಕೊರತೆಯಾಗಿದೆ.ಆದರೆ ಮಳೆ ಬರುವ ನಿರೀಕ್ಷೆ ಇದೆ. ಹಲವಾರು ವರ್ಷಗಳಿಂದ ಮಳೆ ವ್ಯತ್ಯಾಸ ಆಗುತ್ತಲೇ ಇದೆ.ಇನ್ನೂ ಮಳೆಗಾಲ ಮುಗಿದಿಲ್ಲ, ಹಿಂಗಾರು ಮಳೆ ಇದೆ. ಮಳೆ ಹಿನ್ನಡೆ ಆಗಿರುವುದಕ್ಕೆ ಹತಾಶರಾಗುವುದು ಬೇಡ. ಮಳೆಗಾಗಿ ಮೋಡ ಬಿತ್ತನೆಗೆ ಇನ್ನೂ ಸಮಯ ಬಂದಿಲ್ಲ. ಇನ್ನೂ ಅದಕ್ಕೆ ತಜ್ಞರು, ಸಂಬಂಧಿಸಿದ ಇಲಾಖೆ, ಮಂತ್ರಿಗಳು ತೀರ್ಮಾನಿಸಲಿದ್ದಾರೆ. ಜುಲೈ, ಆಗಸ್ಟ್ ತಿಂಗಳಾದ ಬಳಿಕ ನೋಡೋಣ ಎಂದು ಹೇಳಿದರು.