ಸಾರಾಂಶ
ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ನೇತೃತ್ವದಲ್ಲಿ ಬೆಟ್ಟ ಏರಿದ ಅಧಿಕಾರಿಗಳು, 4 ದಿನ ನಡೆಯಲಿರುವ ಉತ್ಸವ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಪ್ರಸಿದ್ಧ ಬಿಂಡಿಗ ದೇವಿರಮ್ಮನವರ ದೀಪೋತ್ಸವ ಇದೇ 31 ರಿಂದ ನ.3 ರವರೆಗೆ ನಡೆಯಲಿರುವ ಹಿನ್ನಲೆಯಲ್ಲಿ ಬೆಟ್ಟ ಹತ್ತಿ ಪೂಜೆ ಸಲ್ಲಿಸು
ಅ. 31 ರಂದು ಶ್ರೀ ದೇವಿರಮ್ಮನವರ ಬೆಟ್ಟದಲ್ಲಿ ಪೂಜೆ ಆರಂಭವಾಗುವುದರಿಂದ ಅ. 30ರ ರಾತ್ರಿಯೇ ಭಕ್ತರು ಬೆಟ್ಟ ಏರಲಿದ್ದಾರೆ. ದೇವಿರಮ್ಮನ ದರ್ಶನಕ್ಕೆ ರಾಜ್ಯದ ವಿವಿಧೆಡೆ ಯಿಂದ ಸಾವಿರಾರು ಭಕ್ತರು, ಯುವಕ, ಯುವತಿಯರು ಎಂದಿನಂತೆ ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸುವ ಜತೆಗೆ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲಿದ್ದಾರೆ.ಆದರೆ, ಈ ಬಾರಿ ಬೆಟ್ಟ ಏರುವ ದಾರಿ ತುಂಬಾ ಸುಲಭ ವಾಗಿಲ್ಲ. ನಿರಂತರವಾಗಿ ಈ ಪ್ರದೇಶದಲ್ಲಿ ಮಳೆ ಬೀಳುತ್ತಿರುವುದರಿಂದ ದಾರಿಯ ಉದ್ದಕ್ಕೂ ಕಾಲಿಡುವ ಕಡೆಗಳಲ್ಲಿ ಜಾರಿ ಕೊಳ್ಳುತ್ತಿದೆ. ಇಂತಹ ಪ್ರತಿಕೂಲ ಪರಿಸ್ಥಿತಿ ನಡುವೆಯೂ ಬೆಟ್ಟ ಏರುವುದು ದುಸ್ಸಾಹಸವಾಗಲಿದೆ. ಆದರೂ ಕೂಡ ಜನರು ಅಪಾರ ಸಂಖ್ಯೆಯಲ್ಲಿ ಬೆಟ್ಟವನ್ನು ತ್ಲು ಉತ್ಸುಕರಾಗಿದ್ದಾರೆ.
ಸಾವಿರಾರು ಸಂಖ್ಯೆಯ ಜನ ಬೆಟ್ಟ ಏರಲಿದ್ದು, ಈ ನಿಟ್ಟಿನಲ್ಲಿ ಸ್ಥಳೀಯವಾಗಿ ಭಕ್ತರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಚಿಕ್ಕಮಗಳೂರು ಗ್ರಾಮಾಂತರ ವೃತ್ತ ನಿರೀಕ್ಷಕ ಸಚಿನ್‌ಕುಮಾರ್, ತಾಲೂಕು ಶಿರಸ್ತೆ ದಾರರಾದ ಪ್ರಸನ್ನ ಹಾಗೂ ಕಂದಾಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಗುರುವಾರ ಬೆಳಿಗ್ಗೆ ದೇವಿರಮ್ಮ ಬೆಟ್ಟವನ್ನು ಏರಿ ಪರಿಶೀಲನೆ ನಡೆಸಿದರು.ದೀಪೋತ್ಸವ:ಅ. 31 ರಂದು ಬೆಳಿಗ್ಗೆ ಶ್ರೀ ದೇವೀರಮ್ಮನ ಬೆಟ್ಟದಲ್ಲಿ ಅಭಿಷೇಕ ನಂತರ ಪೂಜೆ ಪ್ರಾರಂಭವಾಗಲಿದ್ದು, ರಾತ್ರಿ 7 ಗಂಟೆಗೆ ದೀಪೋತ್ಸವ ನಡೆಯಲಿವೆ.
ನ. 1 ರಂದು ಬೆಳಿಗ್ಗೆ 9.30 ಕ್ಕೆ ಶ್ರೀ ದೇವೀರಮ್ಮನವರ ದೇವಸ್ಥಾನದಲ್ಲಿ ಶ್ರೀ ದೇವಿಗೆ ಉಡುಗೆ, ಪೂಜೆ, ಸಂಜೆ 4 ಗಂಟೆಯಿಂದ ಭಕ್ತಿ-ಭಾವಗೀತಾ ಕಾರ್ಯಕ್ರಮ ನಂತರ ಬೆಣ್ಣೆ ಬಟ್ಟೆ ಸುಡುವುದು, ಮಂಗಳಾರತಿ ಪ್ರಸಾದ ವಿನಿಯೋಗ ನಡೆಯಲಿದೆ.ನ. 2 ರಂದು ಬೆಳಿಗ್ಗೆ 8 ಗಂಟೆಯಿಂದ ಶ್ರೀ ದೇವಿರಮ್ಮನಿಗೆ ಮಹಾಮಂಗಳಾರತಿ ಪೂಜಾ ಕಾರ್ಯಕ್ರಮ, ಸಂಜೆ 5 ರಿಂದ ಭರತನಾಟ್ಯ ಕಾರ್ಯ ಕ್ರಮ ನಂತರ ರಾತ್ರಿ ಶ್ರೀ ದೇವಿ ಸನ್ನಿಧಿಯಲ್ಲಿ ಶ್ರೀ ಮಹಾಗಣಪತಿ ಪೂಜೆ, ಪುಣ್ಯಾಹ, ಅಗ್ನಿಕುಂಡ ಪೂಜೆ, ಕಳಸ ಸ್ಥಾಪನೆ, ಕುಂಕುಮಾರ್ಚನೆ ಇತ್ಯಾದಿ ಪೂಜೆ ನಡೆಯಲಿವೆ.ನ. 3 ರಂದು ಸೂರ್ಯೋದಯಕ್ಕೆ ಕೆಂಡಾರ್ಚಾನೆ ನಂತರ ಮಹಾಮಂಗಳಾರತಿ, ಹರಕೆ ಒಪ್ಪಿಸುವುದು, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.
--- ಬಾಕ್ಸ್ --ಭಕ್ತಾಧಿಗಳಿಗೆ ವಿಶೇಷ ಸೂಚನೆ- ಬೆಟ್ಟದ ಮೇಲೆ ತೆಂಗಿನಕಾಯಿ ಒಡೆಯುವುದನ್ನು ನಿಷೇಧಿಸಲಾಗಿದೆ. ಇದೇ ದಿನ ದೇವೀರಮ್ಮನವರ ದೇವಸ್ಥಾನದಲ್ಲಿ ಹಣ್ಣು ಕಾಯಿಯನ್ನು ಮಾಡಿಸಬಹುದು. ದೇವಸ್ಥಾನದಲ್ಲಿ ಹಣ್ಣು ಕಾಯಿ ಮತ್ತು ತೀರ್ಥ-ಪ್ರಸಾದ ದೊರೆಯುತ್ತದೆ.- -- ಭಕ್ತರು ಪಾದರಕ್ಷೆಗಳನ್ನು ಧರಿಸದೇ ಬರೀ ಕಾಲಿನಲ್ಲಿಯೇ ಬೆಟ್ಟ ಹತ್ತಬೇಕು. ದೇವಿ ದರ್ಶನವಾದ ತಕ್ಷಣ ಬೆಟ್ಟದ ಮೇಲೆಯೇ ಕುಳಿತುಕೊಳ್ಳದೇ ಬೆಟ್ಟದಿಂದ ಕೆಳಗೆ ಇಳಿಯತಕ್ಕದ್ದು.- ಬೆಟ್ಟದಲ್ಲಿ ಹಾಗೂ ದೇವಸ್ಥಾನದ ಸುತ್ತಮುತ್ತ ಪ್ಲಾಸ್ಟಿಕ್ ಇತ್ಯಾದಿ ತ್ಯಾಜ್ಯ ವಸ್ತುಗಳನ್ನು ಎಸೆಯಬಾರದು. ಬೆಟ್ಟದಲ್ಲಿ ಹಾಗೂ ದೇವಸ್ಥಾನದಲ್ಲಿ ಪ್ಲಾಸ್ಟಿಕ್ ಬಳಕೆ ಕಡ್ಡಾಯವಾಗಿ ನಿಷೇಧಿಸಲಾಗಿದೆ.
- ತರೀಕೆರೆ, ಬೀರೂರು, ಕಡೂರು, ಚಿಕ್ಕಮಗಳೂರಿನಿಂದ ಕೆ.ಎಸ್.ಆರ್.ಟಿ.ಸಿ. ಬಸ್ಸಿನ ವ್ಯವಸ್ಥೆ ಇರುತ್ತದೆ. ಪ್ರತಿದಿನ ಅನ್ನ ದಾಸೋಹ ಇರುತ್ತದೆ. ಅನ್ನ ದಾಸೋಹ ಮಾಡಿಸುವವರು ದೇವಸ್ಥಾನದ ಕಾರ್ಯಾಲಯದಲ್ಲಿ ಹೆಸರು ನೋಂದಾಯಿಸಬಹುದು. ಬೆಟ್ಟದ ಮೇಲೆ ಪಟಾಕಿ ತೆಗೆದು ಕೊಂಡು ಹೋಗುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ತಹಸೀಲ್ದಾರ್ ಡಾ. ಸುಮಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.24 ಕೆಸಿಕೆಎಂ 1ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿಯಲ್ಲಿರುವ ಶ್ರೀ ದೇವಿರಮ್ಮ ದೇಗುಲ.---- 24 ಕೆಸಿಕೆಎಂ 2
ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಹಾಗೂ ಪೊಲೀಸ್ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಗುರುವಾರ ಶ್ರೀದೇವಿರಮ್ಮ ಬೆಟ್ಟ ಏರಿ ಪರಿಶೀಲಿಸಿದರು.