ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಸರಳ, ಸಜ್ಜನ ಹಾಗೂ ನಿಷ್ಕಳಂಕ ರಾಜಕಾರಣಿ. ಧಾರವಾಡ ಜಿಲ್ಲೆ ಸೇರಿದಂತೆ ರಾಜ್ಯ ಹಾಗೂ ಕೇಂದ್ರದಲ್ಲಿ ಅಭಿವೃದ್ಧಿಯ ಪಣ ತೊಟ್ಟು ಸೇತುವೆಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಹುಬ್ಬಳ್ಳಿ:

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಜನ್ಮದಿನದ ಅಂಗವಾಗಿ ವಿಎಕೆ ಫೌಂಡೇಶನ್ ವತಿಯಿಂದ ಇಲ್ಲಿನ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಸಾರ್ವಜನಿಕ ಉಪಯೋಗಕಾರಿ ಬೈಪೋಲಾರ ಯಂತ್ರವನ್ನು ಫೌಂಡೇಶನ್‌ ಅಧ್ಯಕ್ಷ ವೆಂಕಟೇಶ್ ಕಾಟವೆ ನೇತೃತ್ವದಲ್ಲಿ ವಿತರಿಸಲಾಯಿತು.

ಮಾತನಾಡಿದ ವೆಂಕಟೇಶ್ ಕಾಟವೆ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಸರಳ, ಸಜ್ಜನ ಹಾಗೂ ನಿಷ್ಕಳಂಕ ರಾಜಕಾರಣಿ. ಧಾರವಾಡ ಜಿಲ್ಲೆ ಸೇರಿದಂತೆ ರಾಜ್ಯ ಹಾಗೂ ಕೇಂದ್ರದಲ್ಲಿ ಅಭಿವೃದ್ಧಿಯ ಪಣ ತೊಟ್ಟು ಸೇತುವೆಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸತತ ಐದು ಬಾರಿ ಸಂಸದರಾಗಿ, 2 ಬಾರಿ ಕೇಂದ್ರ ಸಚಿವರಾಗಿ ದೇಶದ ಒಬ್ಬ ಪ್ರಬಲ ನಾಯಕರಾಗಿ ಹೊರ ಹೊಮ್ಮಿದ್ದಾರೆ ಎಂದರು.

ತಂದೆ ಮಾಜಿ ಶಾಸಕ ಅಶೋಕ ಕಾಟವೆ ಜತೆ ಹುಬ್ಬಳ್ಳಿಯ ಈದ್ಗಾ ಮೈದಾನ ಹೋರಾಟ, ಅಯೋಧ್ಯೆ ರಾಮಮಂದಿರದ ಹೋರಾಟ, ರಾಷ್ಟ್ರಧ್ವಜ ಹೋರಾಟ ಸೇರಿದಂತೆ ಅನೇಕ ಹೋರಾಟದಲ್ಲಿ ಜೋಶಿ ಅವರು ಮುಂಚೂಣೆಯಲ್ಲಿ ನಿಂತು ಹೋರಾಟ ಯಶಸ್ವಿಗೊಳಿಸಿದ್ದಾರೆ. ಅವರ ಸುದೀರ್ಘ ಸಾರ್ವಜನಿಕ ಸೇವೆಗೆ ಭಗವಂತ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯ ನೀಡಿ ಆಶೀರ್ವದಿಸಲಿ. ಇನ್ನೂ ಅನೇಕ ವರ್ಷ ದೇಶಕ್ಕೆ ತಮ್ಮ ಸೇವೆ ಸಿಗಲಿ ಎಂದು ಶುಭ ಹಾರೈಸಿದರು.

ಈ ವೇಳೆ ಉಪಮೇಯರ್ ಸಂತೋಷ ಚವಾಣ್, ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ, ಆಸ್ಪತ್ರೆಯ ಮುಖ್ಯ ಅಧಿಕಾರಿ ಡಾ. ಶ್ರೀಧರ ದಂಡಪ್ಪನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ನಾಡಜೋಶಿ, ಒಬಿಸಿ ಜಿಲ್ಲಾಧ್ಯಕ್ಷ ಅರುಣ ಹುರುಳಿ, ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ಹನುಮಂತ ಹರಿವಾಣ, ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ರಾಜು ಕಾಳೆ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಅಶೋಕ ವಾಲ್ಮೀಕಿ, ಪಾಲಿಕೆ ಸದಸ್ಯ ಬೀರಪ್ಪ ಖಂಡೆಕಾರ, ಉಮಾ ಮುಕುಂದ, ಕೃಷ್ಣ ಗಂಡಗಾಳೆಕರ, ರಾಘು ಪವಾರ, ವೆಂಕಟೇಶ ಹಬೀಬ, ರಾಘು ಹಬೀಬ ಸೇರಿದಂತೆ ಹಲವರಿದ್ದರು.