ಸಾರಾಂಶ
ದಿ ಹರಿಹರ ಮೈಸೂರು ಕಿರ್ಲೋಸ್ಕರ್ ನೌಕರರ ಸಹಕಾರ ಸಂಘ ಚುನಾವಣೆಯಲ್ಲಿ ಎಸ್.ಆರ್. ಬಿರಾದಾರ್ ತಂಡ ಜಯಬೇರಿ ಬಾರಿಸಿದೆ. ನಗರದ ಎಚ್.ಪಿ. ಗ್ಯಾಸ್ ಕಂಪನಿ ಕಚೇರಿಯ ಹಿಂಭಾಗದ ಗೋಡೌನ್‌ನಲ್ಲಿ ಶನಿವಾರ ನಡೆದ ಚುನಾವಣೆಯಲ್ಲಿ ಬಿರಾದಾರ್ ತಂಡ ಸತತ 4ನೇ ಬಾರಿ ಆಯ್ಕೆಯಾಗಿದೆ.
ಹರಿಹರ: ದಿ ಹರಿಹರ ಮೈಸೂರು ಕಿರ್ಲೋಸ್ಕರ್ ನೌಕರರ ಸಹಕಾರ ಸಂಘ ಚುನಾವಣೆಯಲ್ಲಿ ಎಸ್.ಆರ್. ಬಿರಾದಾರ್ ತಂಡ ಜಯಬೇರಿ ಬಾರಿಸಿದೆ. ನಗರದ ಎಚ್.ಪಿ. ಗ್ಯಾಸ್ ಕಂಪನಿ ಕಚೇರಿಯ ಹಿಂಭಾಗದ ಗೋಡೌನ್‌ನಲ್ಲಿ ಶನಿವಾರ ನಡೆದ ಚುನಾವಣೆಯಲ್ಲಿ ಬಿರಾದಾರ್ ತಂಡ ಸತತ 4ನೇ ಬಾರಿ ಆಯ್ಕೆಯಾಗಿದೆ.
ಸಾಮಾನ್ಯ ಕ್ಷೇತ್ರದಿಂದ ಎಸ್.ಆರ್. ಬಿರಾದಾರ್, ಎಚ್.ಜಿ. ಕುಲಕರ್ಣಿ, ಸೇತುರಾಮಚಾರ್, ಎಂ.ಜಯರಾಮ್, ಸೂರ್ಯ ಗಾಂವಕರ್, ಪರಿಶಿಷ್ಟ ಜಾತಿಯಿಂದ ಎಚ್.ಕರಿಲಿಂಗಪ್ಪ, ಪ. ಪಂಗಡದಿಂದ ಎಚ್.ಎಂ. ಬುರುಡಿಕಟ್ಟಿ, ಪ್ರವರ್ಗ ಎ.ದಿಂದ ಬಿ.ಎಚ್. ಭರಮಪ್ಪ, ಪ್ರವರ್ಗ ಬಿ.ದಿಂದ ನಿಂಗಪ್ಪ ಹಾಗೂ ಮಹಿಳಾ ಕ್ಷೇತ್ರದಿಂದ ವಿಜಯಲಕ್ಷ್ಮೀ ಜೋಷಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ. ಸಹಾಯಕ ಚುನಾವಣಾಧಿಕಾರಿಯಾಗಿ ಈಶಪ್ಪ ಬೂದಿಹಾಳ್ ಕಾರ್ಯನಿರ್ವಹಿಸಿದರು. ಆಯ್ಕೆಯಾದವರನ್ನು ಅಭಿನಂದಿಸಲಾಯಿತು.ಚುನಾವಣೆ ಮತ ಎಣಿಕೆ ನಂತರ ಎಸ್.ಆರ್. ಬಿರಾದಾರ್ ಅಭಿಮಾನಿಗಳಿಂದ ಗೌರವ ಸ್ವೀಕರಿಸಿ ಮಾತನಾಡಿ, ಪ್ರತಿ 5 ವರ್ಷಗಳಿಗೊಮ್ಮೆ ನಡೆಯುವ ಚುನಾವಣೆಯಲ್ಲಿ ಸತತವಾಗಿ ನನ್ನನ್ನು 5 ಬಾರಿ ಗೆಲ್ಲಿಸಿ, ತಂಡವನ್ನು 4ನೇ ಬಾರಿ ಗೆಲ್ಲಿಸಿದ್ದಕ್ಕೆ ಚಿರಋಣಿ ಎಂದು ಕೃತಜ್ಞತೆ ಅರ್ಪಿಸಿದರು.
- - - (** ಈ ಪೋಟೋ-ಕ್ಯಾಪ್ಷನ್ ಪ್ಯಾನೆಲ್‌ಗೆ ಬಳಸಿ)-23ಎಚ್‍ಆರ್‍ಆರ್01:
ಹರಿಹರದ ದಿ ಹರಿಹರ ಮೈಸೂರು ಕಿರ್ಲೋಸ್ಕರ್ ನೌಕರರ ಸಹಕಾರ ಸಂಘದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಎಸ್.ಆರ್. ಬಿರಾದಾರ್ ತಂಡಕ್ಕೆ ಅಭಿಮಾನಿಗಳು ಗೌರವಿಸಿ, ವಿಜಯೋತ್ಸವ ಅಚರಿಸಿದರು.