ಸಾರಾಂಶ
ರಾಜ್ಯದಲ್ಲಿ ಹಕ್ಕಿ ಜ್ವರ ಭೀತಿ ಹಿನ್ನೆಲೆಯಲ್ಲಿ ಅಂತಾರಾಜ್ಯ ಚೆಕ್‌ಪೋಸ್ಟ್‌ಗಳಲ್ಲಿ ಫುಲ್ ಅಲರ್ಟ್ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ವಿರಾಜಪೇಟೆ
ರಾಜ್ಯದಲ್ಲಿ ಹಕ್ಕಿ ಜ್ವರ ಭೀತಿ ಹಿನ್ನೆಲೆಯಲ್ಲಿ ಅಂತಾರಾಜ್ಯ ಚೆಕ್ ಪೋಸ್ಟ್ ಗಳಲ್ಲಿ ಫುಲ್ ಅಲರ್ಟ್ ಮಾಡಲಾಗಿದೆ.ಕೊಡಗು ಕೇರಳ ಗಡಿಭಾಗ ಚೆಕ್ ಪೋಸ್ಟ್ ಪೆರಂಬಾಡಿಯಲ್ಲಿ ಪಶು ಸಂಗೋಪನಾ ಇಲಾಖೆಯಿಂದ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಕೋಳಿ ಸಾಗಾಟಕ್ಕೆ ಚೆಕ್ ಪೋಸ್ಟ್ ನಲ್ಲಿ ನಿಷೇಧ ಮಾಡಲಾಗಿದೆ. ಮಾತ್ರವಲ್ಲದೆ ಕೋಳಿಯ ಯಾವುದೇ ಉತ್ಪನ್ನಗಳ ಸಾಗಾಟಕ್ಕೂ ನಿಷೇಧ ಹೇರಲಾಗಿದೆ.
ಪಶುಸಂಗೋಪನಾ ಇಲಾಖೆ ಪೆರಂಬಾಡಿಯಲ್ಲಿ ಪರಿಶೀಲನಾ ಕೇಂದ್ರ ತೆರೆದಿದೆ. ಬುಧವಾರದಿಂದ ಕೋಳಿ ಸಾಗಣೆ ನಿಷೇಧ ಮಾಡಲಾಗಿದೆ. ಈಗಾಗಲೇ ಕೋಳಿ ಸಾಗಿಸಿದ್ದ ಲಾರಿಗಳನ್ನು ಪಶುಸಂಗೋಪನಾ ಇಲಾಖೆ ವೈದ್ಯರ ತಂಡ ತಡೆದಿದೆ. ವಿರಾಜಪೇಟೆ ತಾಲೂಕು ವೈದ್ಯಾಧಿಕಾರಿ ರಾಕೇಶ್ ನೇತೃತ್ವದ ತಂಡ ಗಡಿಯಲ್ಲಿ ಚೆಕ್ ಪೋಸ್ಟ್ ತಡೆದು ಪರಿಶೀಲನೆ ನಡೆಸಲಾಗಿದೆ. ಇನ್ನು ಮುಂದೆ ಕೋಳಿ ಸಾಗಿಸದಂತೆ ಸೂಚನೆ ನೀಡಲಾಗಿದೆ.ಕರ್ನಾಟಕದ ವಿವಿಧೆಡೆಯಿಂದ ಕೇರಳಕ್ಕೆ ಕೋಳಿ ಸಾಗಿಸಲಾಗುತ್ತಿತ್ತು.
ಈಗಾಗಲೇ ತಮಿಳುನಾಡು ಸೇರಿ ವಿವಿಧೆಡೆಯಿಂದ ಕೊಡಗು ಮೂಲಕ ಕೇರಳಕ್ಕೆ ಕೋಳಿಗಳನ್ನು ಸಾಗಿಸಲಾಗಿತ್ತು. ಇದೀಗ ಕೋಳಿ ಸಾಗಿಸಲು ನಿಷೇಧ ಹೇರಲಾಗಿದೆ.