ಬಿರ್ದ್‌ದ ಕಂಬುಲ’ ಹಾಗೂ ‘ವೀರ ಕಂಬಳ’ ಸಿನಿಮಾ ಫೆ.27ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ತುಳುನಾಡಿನ ಹೆಮ್ಮೆಯ ಕಂಬಳವನ್ನು ದೇಶ ವಿದೇಶಗಳಲ್ಲಿ ಪಸರಿಸಲು ಈ ಸಿನಿಮಾ ಮಾಡಿದ್ದೇವೆ ಎಂದು ಚಿತ್ರದ ನಿರ್ಮಾಪಕ ಅರುಣ್ ರೈ ತೋಡಾರ್ ಹೇಳಿದ್ದಾರೆ.
ಮಂಗಳೂರು: ‘ಬಿರ್ದ್‌ದ ಕಂಬುಲ’ ಹಾಗೂ ‘ವೀರ ಕಂಬಳ’ ಸಿನಿಮಾ ಫೆ.27ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ತುಳುನಾಡಿನ ಹೆಮ್ಮೆಯ ಕಂಬಳವನ್ನು ದೇಶ ವಿದೇಶಗಳಲ್ಲಿ ಪಸರಿಸಲು ಈ ಸಿನಿಮಾ ಮಾಡಿದ್ದೇವೆ ಎಂದು ಚಿತ್ರದ ನಿರ್ಮಾಪಕ ಅರುಣ್ ರೈ ತೋಡಾರ್ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಿನಿಮಾಕ್ಕೆ ತುಳುನಾಡಿನ ಕಂಬಳ ಪ್ರೇಮಿಗಳು, ಕಂಬಳ ಕ್ಷೇತ್ರದ ಅನೇಕ ಸಾಧಕರು ಸಹಾಯ ನೀಡಿದ್ದಾರೆ ಎಂದರು.
ಸಿನಿಮಾ ನಿರ್ದೇಶಕ ಡಾ.ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಮಾತನಾಡಿ, ‘ನಾನು 50 ಸಿನಿಮಾಗಳನ್ನು ಎಲ್ಲ ಭಾಷೆಯಲ್ಲೂ ಮಾಡಿದ್ದೆ. ಒಮ್ಮೆ ಗುಣಪಾಲ ಕಡಂಬ ಅವರು ಪುತ್ತೂರು ಕಂಬಳಕ್ಕೆ ಕರೆದಿದ್ದರು. ಈ ವೇಳೆ ಕಂಬಳ ಕಂಟೆಂಟ್ ಇಟ್ಟುಕೊಂಡು ಸಿನಿಮಾ ಮಾಡಬೇಕು ಅಂತ ಯೋಚನೆ ಬಂತು. ಹೀಗಾಗಿ ಅರುಣ್ ರೈ ಅವರಲ್ಲಿ ಸಿನಿಮಾ ಬಗ್ಗೆ ಹೇಳಿದ್ದೆ. ಅಲ್ಲಿಂದ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ಅವರನ್ನು ಸಂಪರ್ಕಿಸಿ ಸಂಭಾಷಣೆ ಬರೆಯಲು ಹೇಳಿದೆವು. ಅಲ್ಲಿಂದ ಶುರುವಾದ ಈ ಸಿನಿಮಾ ಜರ್ನಿ ಈಗ ಬಿಡುಗಡೆಯ ಹಂತಕ್ಕೆ ಬಂದು ಮುಟ್ಟಿದೆ’ ಎಂದು ಹೇಳಿದರು.ಸಿನಿಮಾದ ಹಾಡುಗಳು ತುಂಬಾ ಚೆನ್ನಾಗಿ ಮೂಡಿಬಂದಿದ್ದು, ನಮ್ಮ ಧೈರ್ಯವನ್ನು ನೂರ್ಮಡಿಗೊಳಿಸಿದೆ. ಎಲ್ಲರೂ ಸಿನಿಮಾ ನೋಡಿ ಗೆಲ್ಲಿಸಿ ಎಂದರು.
ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಹಾಡುಗಳನ್ನು ಬಿಡುಗಡೆಗೊಳಿಸಿದರು. ಕಾರ್ಯಕಾರಿ ನಿರ್ಮಾಪಕ ರಾಜೇಶ್ ಕುಡ್ಲ, ಸಂಗೀತ ನಿರ್ದೇಶಕ ಕದ್ರಿ ಮಣಿಕಾಂತ್, ರಾಜ್ಯ ಕಂಬಳ ಎಸೋಸಿಯೇಶನ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು, ಕೋಶಾಧಿಕಾರಿ ಲೊಕೇಶ್ ಶೆಟ್ಟಿ ಮುಚ್ಚೂರು ಕಲ್ಕುಡೆ, ರಾಜೀವ ಶೆಟ್ಟಿ, ಗುಣಪಾಲ ಕಡಂಬ, ಕೆ.ಕೆ.ಪೇಜಾವರ, ಶಶಿರಾಜ್ ಕಾವೂರು, ಮೈಮ್ ರಾಮದಾಸ್ ರಶ್ಮಿತ್ ಶೆಟ್ಟಿ ಮತ್ತಿತರರು ಇದ್ದರು.ತಾರಾಗಣ: ಆದಿತ್ಯ, ರಾಧಿಕಾ ಚೇತನ್, ನವೀನ್ ಡಿ.ಪಡೀಲ್, ಗೋಪಿನಾಥ್ ಭಟ್, ಭೋಜರಾಜ್ ವಾಮಂಜೂರು, ಉಷಾ ಭಂಡಾರಿ, ವೀಣಾ ಪೊನ್ನಪ್ಪ, ಗೀತಾ ಸುರತ್ಕಲ್, ಸ್ವರಾಜ್ ಶೆಟ್ಟಿ, ದಿವ್ಯಾ, ಶ್ರೀನಿವಾಸ್ ಗೌಡ, ಸುರೇಶ್ ಶೆಟ್ಟಿ, ಚೇತನ್ ರೈ ಮಾಣಿ, ಯುವ ಶೆಟ್ಟಿ, ಮೈಮ್ ರಮೇಶ್, ಪ್ರಕಾಶ್ ರೈ, ರವಿಶಂಕರ್, ಶೋಭರಾಜ್, ಸಂತೋಷ್ ಶೆಟ್ಟಿ ತಾರಾಗಣದಲ್ಲಿದ್ದಾರೆ. ಬಾಬಾ ಬ್ಲೆಸ್ಸಿಂಗ್ ಫಿಲಂಸ್ ಲಾಂಛನದಲ್ಲಿ ತಯಾರಾಗಿರುವ ಚಿತ್ರಕ್ಕೆ ಕಥೆ- ಚಿತ್ರಕಥೆ- ನಿರ್ದೇಶನ: ಡಾ. ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರದ್ದು. ನಿರ್ಮಾಪಕರು: ಡಾ. ವಿನಿತಾ ವಿಜಯ್ ಕುಮಾರ್ ರೆಡ್ಡಿ ಮತ್ತು ಅರುಣ್ ರೈ ತೋಡಾರ್, ಕಾರ್ಯಕಾರಿ ನಿರ್ಮಾಪಕ: ರಾಜೇಶ್ ಕುಡ್ಲ, ಸಂಭಾಷಣೆಯನ್ನು ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಬರೆದಿದ್ದಾರೆ.