ಬಿರ್ಸಾ ಮುಂಡಾ ಅವರು ಕೇವಲ ಸ್ವಾತಂತ್ರ್ಯ ಹೋರಾಟಗಾರರಾಗಿರಲಿಲ್ಲ. ಅವರು ಸಾಮಾಜಿಕ ಪರಿವರ್ತನೆಯ ಹರಿಕಾರರಾಗಿದ್ದರು ಎಂದು ಅಪರ ಜಿಲ್ಲಾಧಿಕಾರಿ ಸುರೇಖಾ ವಿ.ಕೆ ಹೇಳಿದರು.
ಕನ್ನಡಪ್ರಭ ವಾರ್ತೆ ಬೀದರ್
ಬಿರ್ಸಾ ಮುಂಡಾ ಅವರು ಕೇವಲ ಸ್ವಾತಂತ್ರ್ಯ ಹೋರಾಟಗಾರರಾಗಿರಲಿಲ್ಲ. ಅವರು ಸಾಮಾಜಿಕ ಪರಿವರ್ತನೆಯ ಹರಿಕಾರರಾಗಿದ್ದರು ಎಂದು ಅಪರ ಜಿಲ್ಲಾಧಿಕಾರಿ ಸುರೇಖಾ ವಿ.ಕೆ ಹೇಳಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರವಿವಾರ ಆಯೋಜಿಸಿದ್ದ ಕ್ರಾಂತಿವೀರ ಬಿರ್ಸಾ ಮುಂಡಾ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಹಾಗೂ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಬಿರ್ಸಾ ಮುಂಡಾ ಅವರು ಮೂಢನಂಬಿಕೆ, ಸಾಮಾಜಿಕ ಅಸಮಾನತೆ ಮತ್ತು ಶೋಷಣೆ ವಿರುದ್ಧ ಜಾಗೃತಿ ಮೂಡಿಸಿದ್ದರು. ಅವರು ಸರ್ವ ಜನಾಂಗಕ್ಕೂ ಶಿಕ್ಷಣ ಸಂಘಟನೆ ಮತ್ತು ಸ್ವಾಭಿಮಾನದ ಮೂಲಕ ಬದುಕು ಕಟ್ಟಿಕೊಳ್ಳಬೇಕು ಎಂದು ಆಸೆ ಹೊಂದ್ದಿದ್ದರು.ಮುಂಡಾ ಅವರು ಅಲ್ಪ ಅವಧಿಯ ಬದುಕಿನಲ್ಲಿಯೇ ಅಪಾರ ಹೋರಾಟದ ಚೈತನ್ಯವನ್ನು ಮೂಡಿಸಿದವರಾಗಿದ್ದರು. ಆದಿವಾಸಿ ಸಮುದಾಯದ ಮೇಲೆ ಬ್ರಿಟೀಷರು ನಡೆಸುತ್ತಿದ್ದ ಶೋಷಣೆ, ಭೂಮಿ ಕಬಳಿಕೆ, ಸಾಮಾಜಿಕ ಅನ್ಯಾಯ ಮತ್ತು ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ ಅವರು, ಜನರಲ್ಲಿ ಹೋರಾಟದ ಕಿಚ್ಚು ಹೊತ್ತಿಸಿದ್ದರು. ಈ ದಿನವನ್ನು ನಾವು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಆದಿವಾಸಿ ವೀರರ ತ್ಯಾಗ, ಬಲಿದಾನ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುವ ದಿನವಾಗಿದೆ ಎಂದು ಅವರು ನುಡಿದರು.
ರಾಜಗೊಂಡ ಕಾಲೋನಿ ಜೈ ಸೇವಾ ಆಶ್ರಮದ ರತನ್ ಮಹಾರಾಜ್ ಅವರು ಮಾತನಾಡಿ, ಬಿರ್ಸಾ ಮುಂಡಾ ಅವರು ಕೇವಲ 25 ವರ್ಷಗಳ ಬದುಕಿನಲ್ಲಿಯೇ ಜನರಿಗಾಗಿ ಸರ್ವ ಧರ್ಮದ ಸಮುದಾಯಕ್ಕಾಗಿ 100 ವರ್ಷಗಳ ನೆನಪಿಸುವಂತೆ ಹೋರಾಟ ಮಾಡಿ ಪ್ರತಿಯೊಬ್ಬರಿಗೂ ರಕ್ಷಣೆ ನೀಡಿದ ವೀರ ಧೀರರಾಗಿದ್ದರು. ಅವರ ಆದರ್ಶವನ್ನು ಇಂದಿನ ಪೀಳಿಗೆಯೂ ತಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗುವಂತಾಗಬೇಕೆಂದರು.ಈ ಸಂದರ್ಭದಲ್ಲಿ ಜಿ.ಪಂ ಉಪ ಕಾರ್ಯದರ್ಶಿ ಸೂರ್ಯಕಾಂತ ಬಿರಾದಾರ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಗಿರೀಶ ರಂಜೋಳಕರ್, ತಾಲೂಕಾಧಿಕಾರಿ ಶಂಕ್ರಯ್ಯ ಬಂಕಾಪೂರ್, ಎಸ್ಟಿ ಸಮುದಾಯದ ಪ್ರಮುಖರಾದ ಹಿರಿಯ ಸಾಹಿತಿ ಮಾಣಿಕ ನೇಳಗಿ, ಮಾಳಪ್ಪ ಅಡಸಾರೆ, ಸುನೀಲ ಭಾವಿಕಟ್ಟಿ, ರಾಜೇಂದ್ರ ಪರಗಿ, ವಿಜಯಕುಮಾರ ಡುಮ್ಮೆ, ಸುನೀಲ ಖಾಸೆಂಪೂರ್, ಶರಣಪ್ಪ ಖಾಶೆಂಪೂರ್, ಚಂದ್ರು ಶಾಮು, ಶಣ್ಮುಖಪ್ಪ ಶೆಕಾಪೂರ್ ಸೇರಿದಂತೆ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.--------
ಬೀದರ್ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರವಿವಾರ ಆಯೋಜಿಸಿದ್ದ ಕ್ರಾಂತಿವೀರ ಬಿರ್ಸಾ ಮುಂಡಾ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಹಾಗೂ ಪುಷ್ಪನಮನವನ್ನು ಅಪರ ಜಿಲ್ಲಾಧಿಕಾರಿ ಸುರೇಖಾ ವಿ.ಕೆ ಸಲ್ಲಿಸಿದರು.