ಬುಡಕಟ್ಟುಗಳ ಏಕೀಕರಣದ ಶಿಲ್ಪಿ ಬಿರ್ಸಾ ಮುಂಡಾ:ಡಾ.ವೀರಣ್ಣ ಚರಂತಿಮಠ

| Published : Nov 17 2025, 02:00 AM IST

ಸಾರಾಂಶ

ದೇಶದ ದಲಿತ, ದಮನಿತ, ಅಸ್ಪೃಶ್ಯರಿಗೆ ಅಂಬೇಡ್ಕರ್ ಒಂದು ಶಕ್ತಿಯಾಗಿರುವಂತೆ, ಭಾರತದ ಆದಿವಾಸಿ ಬುಡಕಟ್ಟುಗಳ ಸ್ವಾಭಿಮಾನ ಮತ್ತು ಹೋರಾಟದ ಕಿಚ್ಚಿನ ರೂವಾರಿ ಬಿರ್ಸಾ ಮುಂಡಾ ಅವರು ಬುಡಕಟ್ಟುಗಳ ಏಕೀಕರಣದ ಶಿಲ್ಪಿಯಾಗಿದ್ದಾರೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ದೇಶದ ದಲಿತ, ದಮನಿತ, ಅಸ್ಪೃಶ್ಯರಿಗೆ ಅಂಬೇಡ್ಕರ್ ಒಂದು ಶಕ್ತಿಯಾಗಿರುವಂತೆ, ಭಾರತದ ಆದಿವಾಸಿ ಬುಡಕಟ್ಟುಗಳ ಸ್ವಾಭಿಮಾನ ಮತ್ತು ಹೋರಾಟದ ಕಿಚ್ಚಿನ ರೂವಾರಿ ಬಿರ್ಸಾ ಮುಂಡಾ ಅವರು ಬುಡಕಟ್ಟುಗಳ ಏಕೀಕರಣದ ಶಿಲ್ಪಿಯಾಗಿದ್ದಾರೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ನಗರದ ಶಿವಾನಂದ ಜೀನನಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ಮತಕ್ಷೇತ್ರದಿಂದ ಹಮ್ಮಿಕೊಂಡ ಒನಕೆ ಓಬವ್ವ - ಬಗವಾನ ಬಿರ್ಸಾ ಮುಂಡಾ ಜಯಂತಿ ನಿಮಿತ್ತ ಅವರ ಭಾವಚಿತ್ರಕ್ಕೆ ಪುಪ್ಷಾರ್ಚನೆ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಿ ಮಾತನಾಡಿದರು.

ಸ್ಥಳೀಯ ಸಂಸ್ಕೃತಿ ಹಾಗೂ ಸೃತಿ, ಸ್ಮೃತಿಗಳ ಸಂರಕ್ಷಣೆ ದೃಷ್ಟಿಯಿಂದಲೂ ಬಿರ್ಸಾ ಮುಂಡಾ ಕೊಡುಗೆ ನೀಡಿದ್ದಾರೆ. ವೀರವನಿತೆ ಒನಕೆ ಓಬವ್ವ ಹೈದರ್ ಅಲಿಯ ಪಡೆಗಳ ವಿರುದ್ಧ ಒಂಟಿಯಾಗಿ ಹೋರಾಡಿದರು. ಕರ್ನಾಟಕ ರಾಜ್ಯದಲ್ಲಿ ಅವರನ್ನು ರಾಣಿ ಅಬ್ಬಕ್ಕ, ಕೆಳದಿ ಚನ್ನಮ್ಮ ಮತ್ತು ಕಿತ್ತೂರು ಚನ್ನಮ್ಮ ಅವರೊಂದಿಗೆ ಪ್ರಮುಖ ಮಹಿಳಾ ದೇಶಭಕ್ತರಾಗಿ ಆದರ್ಶವಾಗಿದ್ದಾರೆ ಎಂದರು.

ರಾಜ್ಯಸಭಾ ಸದಸ್ಯರಾದ ನಾರಾಯಣಸಾ ಬಾಂಡಗೆ, ನಗರಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಪ್ರಧಾನ ಕಾರ್ಯದರ್ಶಿಗಳಾದ ಉಮೇಶ ಹಂಚಿನಾಳ, ಶ್ರೀಧರ ನಾಗರಬೆಟ್ಟ, ಮುಖಂಡರಾದ ಡಾ.ಎಂ.ಎಸ್. ದಡ್ಡೆನವರ, ಕುಮಾರ ಎಳ್ಳಿಗುತ್ತಿ, ಬಸವರಾಜ ಯಂಕಂಚಿ, ಶಿವಾನಂದ ಟವಳಿ, ಗುಂಡುರಾವ್ ಶಿಂಧೆ, ಶಶಿಕುಮಾರ ಗುತ್ತನ್ನವರ, ಗ್ಯಾನಪ್ಪಗೌಡ ಪಾಟೀಲ, ನಗರಸಭೆ ಅಧ್ಯಕ್ಷೆ ಸವಿತಾ ಲಂಕೆನ್ನವರ, ಉಪಾಧ್ಯಕ್ಷೆ ಶೋಭಾ ರಾವ್, ಸಭಾಪತಿ ಯಲ್ಲಪ್ಪ ನಾರಾಯಣಿ, ನಗರಸಭೆ ಸದಸ್ಯರಾದ ಜ್ಯೋತಿ ಭಜಂತ್ರಿ, ಬಸವರಾಜ ಅವರಾದಿ, ಸರಸ್ವತಿ ಕುರುಬರ, ಶಿವಲೀಲಾ ಪಟ್ಟಣಶೆಟ್ಟಿ, ಡಾ.ರೇಖಾ ಕಲಬುರ್ಗಿ, ಶಶಿಕಲಾ ಮಜ್ಜಿಗಿ, ಪ್ರೇಮ ಅಂಬಿಗೇರ, ಶ್ರೀನಾಥ ಸಜ್ಜನ, ಸ್ಮಿತಾ ಪವಾರ, ರವಿ ದಾಮಜಿ, ಚೆನ್ನಯ್ಯ ಹಿರೇಮಠ, ಪದಾಧಿಕಾರಿಗಳಾದ ರಾಘವೇಂದ್ರ ಕುಲಕರ್ಣಿ, ಮಂಜುನಾಥ ಪಾಟೀಲ, ಕಪ್ಪಯ್ಯ ಮುತ್ತಿನಮಠ, ಚಂದ್ರು ಸರೂರ, ಆನಂದ ಕೊಟಗಿ, ಶಿವಾನಂದ ರಾಠೋಡ, ಶಂಕರ ಗಲಗ,ದ್ಯಾವಪ್ಪ ರಾಯಕುಂಪಿ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.