A peculiar goat kid was born on Wednesday in Udri Vaddigere village, near Udri village in the taluk, surprising the villagers.

ಕನ್ನಡಪ್ರಭ ವಾರ್ತೆ ಸೊರಬ:

ತಾಲೂಕಿನ ಉದ್ರಿ ಗ್ರಾಮ ಸಮೀಪದ ಉದ್ರಿ ವಡ್ಡಿಗೆರೆ ಗ್ರಾಮದಲ್ಲಿ ವಿಚಿತ್ರವಾದ ಆಡಿನ ಮರಿಯೊಂದು ಬುಧವಾರ ಜನಿಸಿದ್ದು, ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ. ಗ್ರಾಮದ ಕಾಳಿಂಗಪ್ಪ ಭಾವಿಕಟ್ಟೇರ್‌ಮನೆ ಹಾಗೂ ಪುಟ್ಟಮ್ಮ ದಂಪತಿ ಕೃಷಿ ಚಟುವಟಿಕೆಯೊಂದಿಗೆ ಕುರಿ ಸಾಕಾಣಿಕೆಯನ್ನು ಮಾಡುತ್ತಿದ್ದಾರೆ. ಆಡೊಂದು ಜನ್ಮ ನೀಡಿದ ಮರಿ ೮ ಕಾಲು, ಮೂರು ಕಿವಿ, ಎರಡು ಬಾಲ ಮತ್ತು ಎರಡು ನಾಲಿಗೆ ಹೊಂದಿತ್ತು. ಆರಂಭದಲ್ಲಿ ಅವಳಿಗಳು ಜನಿಸಬಹುದು ಎಂದು ಭಾವಿಸಲಾಗಿತ್ತು. ಆದರೆ ಮಧ್ಯಾಹ್ನದ ಸಮಯದಲ್ಲಿ ವಿಚಿತ್ರವಾಗಿ ಜನಿಸಿದ ಆಡಿನ ಮರಿ ಸಂಜೆವರೆಗೂ ಬದುಕುಳಿದಿತ್ತು. ಈ ಆಡಿನ ಮರಿಯನ್ನು ನೋಡಲು ಉದ್ರಿ ವಡ್ಡೆಗೆರೆ ಗ್ರಾಮಸ್ಥರು ಮಾತ್ರವಲ್ಲದೇ ಸುತ್ತಲಿನ ಗ್ರಾಮಸ್ಥರು ಸಹ ಆಗಮಿಸಿದ್ದರು.

----

ಫೋಟೊ:೦೬ಕೆಪಿಸೊರಬ-೦೧ : ತಾಲೂಕಿನ ಉದ್ರಿ ವಡ್ಡಿಗೆರೆಯಲ್ಲಿ ಜನಿಸಿದ ವಿಚಿತ್ರ ಕುರಿ ಮರಿ.